ನಾಳೆ ತಾಪಂ ಕಚೇರಿ ಎದುರು ಧರಣಿ
ಆಳಂದ: ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಗೊಳಪಡುವ ತಾಲೂಕಿನ ಬೆಳಮಗಿ ಗ್ರಾಮ ಪಂಚಾಯತಿಯ ಪುನರ್ ಗ್ರಾಮಸಭೆ ಕೈಗೊಂಡು ಅರ್ಹ ಫಲಾನುಭವಿಗಳಿಗೆ ಆಯ್ಕೆ ಮಾಡದೆ ಹೋದಲ್ಲಿ ಆಳಂದ ತಾಪಂ ಕಚೇರಿ ಮುಂದೆ ನ.21ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ತಾಪಂ ಇಒ ಅವರಿಗೆ ಮನವಿ ಸಲ್ಲಿಸಿ ಗಡುವು ನೀಡಿದ್ದಾರೆ.
ಪಂಚಾಯತಿಯ 2013-14ನೇ ಸಾಲಿನ ಗ್ರಾಮಸಭೆ ಶೀಘ್ರವೇ ಕೈಗೊಂಡು ಬಡವರಿಗೆ ನ್ಯಾಯ ಒದಗಿಸಬೇಕು. ಈ ಕುರಿತು ಮೇಲಧಿಕಾರಿ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ. ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಜಾಬ್ ಕಾರ್ಡ್ ಒದಗಿಸಬೇಕು. ಸಣ್ಣ ಅತಿ, ಸಣ್ಣ ರೈತರ ಸೌಲಭ್ಯಗಳ ವಿತರಣೆಗೆ ಮೊದಲು ರೂಪಿಸಿದ ಕ್ರಿಯಾಯೋಜನೆ ರದ್ದುಪಡಿಸಿ ಗ್ರಾಮ ಸಭೆಯ ಮೂಲಕ ಕ್ರಿಯಾಯೋಜನೆ ರೂಪಿಸಿ ಅರ್ಹರಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು. ವಸತಿ ಯೋಜನೆಯಡಿ ನಡೆದ ಅವ್ಯವಹಾರ ತನಿಖೆ ಕೈಗೊಂಡು ತಪ್ಪಿರಸ್ಥರ ಮೇಲೆ ಕ್ರಮ ಜರುಗಿಸಿ ಅರ್ಹರಿಗೆ ಮನೆ ಒದಗಿಸಬೇಕು ಎಂಬ ಹಲವು ಬೇಡಿಕೆಗೆ ಈಡೇರಿಸುವಂತೆ ನ.21ರಂದು ತಾಪಂ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಗ್ರಾಪಂ ಸದಸ್ಯ ರಾಚಣ್ಣ ಸತ್ಯಮನಿ, ಡಿಆರ್ಯುಸಿ ಸದಸ್ಯ ಚಂದ್ರಶೆಟ್ಟಿ, ಶಿವಶರಣಪ್ಪ ಮಾಲಿಪಾಟೀಲ್, ಮಲ್ಲಿನಾಥ ಮುರುಡ, ಶಂಕರೆಪ್ಪ , ಹಣಂತರಾವ ಇತರರು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

