ಗುಲ್ಬರ್ಗಾ

ಲೋಕ ಕಲ್ಯಾಣಕ್ಕಾಗಿ ಚಿನ್ನ ಬಳಸಿದರು

Published On :

ಗುಲ್ಬರ್ಗ: ವಿಜಯನಗರ ಆಡಳಿತಕ್ಕೆ ಒಳಪಟ್ಟ ಬಾಡ ಪ್ರದೇಶದಲ್ಲಿ ತಿಮ್ಮಪ್ಪ ಒಂದು ದಿನ ಭೂಮಿಯನ್ನು ಅಗೆಯುವಾಗ ಅವನಿಗೆ ನಿಧಿ ಸಿಗುತ್ತದೆ. ಆ ನಿಧಿಯನ್ನು ತಿಮ್ಮಪ್ಪನು ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಹಾಗೂ ಬಡಬಗ್ಗರ ಪ್ರಸಾದಕ್ಕೆ ಬಳಸಿ ತಮ್ಮ ಲೋಕ ಕಲ್ಯಾಣ ಗುಣ ಮೆರೆಯುತ್ತಾರೆ. ಅಂದಿನಿಂದ ತಿಮ್ಮಪ್ಪನು ಕನಕದಾಸ ಎಂದು ಪ್ರಸಿದ್ದಿಯಾಗುತ್ತಾನೆಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಮೇಶ ಶಂಕ್ರೆಪ್ಪ ಮರಗೋಳ ಹೇಳಿದರು.
ಜಿಲ್ಲಾ ಪಂಚಾಯ್ತಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಕನಕದಾಸರು ಭಕ್ತರಾಗಿ, ದಾಸರಾಗಿ ನಂಜನಗೂಡು, ಬೇಲೂರು, ಉಡುಪಿಗಳಲ್ಲಿ ಸುತ್ತಾಡಿ ತಮ್ಮ ಕೀರ್ತನೆಗಳಿಂದ ಜನರ ಅಜ್ಞಾನ ಹೋಗಲಾಡಿಸುತ್ತಿದ್ದರು.
ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನ ಮಾಡಲೆಂದು ಬಂದಾಗ ದರ್ಶನ ಭಾಗ್ಯ ಪ್ರಾಪ್ತವಾಗುವುದಿಲ್ಲ.
 ಆಗ ಕನಕದಾಸರು ಕೃಷ್ಣನ ಗರ್ಭ ಗುಡಿಯ ಹಿಂಭಾಗದಲ್ಲಿ ಹರಿ ಕೀರ್ತನೆ ಹೇಳಿದಾಗ ಗರ್ಭ ಗುಡಿಯ ಬಾಗಿಲು ತಂತಾನೇ ಬಿರುಕು ಬಿಟ್ಟು ಕೃಷ್ಣನೇ ಪಶ್ಚಿಮಾಭಿಮುಖವಾಗಿ ತಿರುಗಿ ಅವರಿಗೆ ದರ್ಶನ ನೀಡುತ್ತಾರೆ. ಈ ಪ್ರಸಂಗವು ಇಂದಿಗೂ ಸಾಕ್ಷಿಯಾಗಿದೆ ಎಂದರು.
ಕನಕದಾಸರು ಜೀವಿತಾವಧಿಯಲ್ಲಿ ಎರಡು ಕಾವ್ಯಗಳನ್ನು ರಚಿಸಿದರು. ಮೋಹನ ತರಂಗಿಣಿ ಮತ್ತು ನಳ ಚರಿತ್ರೆ. ಈ ಕಾವ್ಯಗಳು ಅವರ ಕಾವ್ಯ ಶಕ್ತಿಗೆ ಹಿಡಿದ ಕನ್ನಡಿಯಂತಿವೆ. ಹರಿಭಕ್ತಸಾರ ಮತ್ತು ರಾಮಧಾನ್ಯ ಚರಿತ್ರೆಗಳು ಕನಕದಾಸರ ವೈವಿಧ್ಯಮಯ ಮತ್ತು ಜನಪರ ನಿಲುವಿಗೆ ಸಾಕ್ಷಿಯಂತಿವೆ ಎಂದು ಹೇಳಿದರು.
 ಜಿಪಂ ಉಪಾಧ್ಯಕ್ಷೆ ಸುನಿತಾ ಪವನಕುಮಾರ ಒಳಕೇರಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಅಶೋಕ ಸಾವಳೇಶ್ವರ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಮಾಲಿ ಪಾಟೀಲ, ಜಿಪಂ ಸದಸ್ಯರಾದ ಗುರಲಿಂಗಪ್ಪಗೌಡ ಅಂದೋಲಾ, ಈರಾರೆಡ್ಡಿ, ಜಿಪಂ ಸಿಇಒ ಟಿ.ಎಚ್.ಎಂ. ಕುಮಾರ, ಮುಖ್ಯ ಲೆಕ್ಕಾಧಿಕಾರಿ ಹೊನ್ನಪ್ಪಗೋಳ, ಜಿಪಂ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.