ಗುಲ್ಬರ್ಗಾ

ಭಾಗ್ಯಲಕ್ಷ್ಮೀ ಮಕ್ಕಳ ಶಿಷ್ಯವೇತನಕ್ಕೆ ವಿವರ ನೀಡಿ

Published On :

ಗುಲ್ಬರ್ಗ: ಮಹಾತ್ವಕಾಂಕ್ಷೆ ಭಾಗ್ಯಲಕ್ಷ್ಮೀ ಯೋಜನೆಯಡಿಯಲ್ಲಿ 2006- 07 ಮತ್ತು 2007- 08ನೇ ಸಾಲಿನಲ್ಲಿ ಸೌಲಭ್ಯ ಪಡೆದಿರುವಂತಹ ಫಲಾನುಭವಿಗಳಿಗೆ 1ನೇ ತರಗತಿಯಿಂದ 12ನೇ ತರಗತಿವರೆಗೆ ಶಿಷ್ಯವೇತನದ ಸೌಲಭ್ಯವಿರುತ್ತದೆ.  ಈ ಸಾಲಿನಲ್ಲಿ ಭಾಗ್ಯಲಕ್ಷ್ಮೀ ಯೋಜನೆಯ ಸೌಲಭ್ಯ ಪಡೆದಂತಹ ಮಕ್ಕಳು 1ನೇ ತರಗತಿಯನ್ನು ಪಾಸಾಗಿದ್ದರೆ, ಪಾಲಕರು ತಮ್ಮ ಮಕ್ಕಳು ಓದುತ್ತಿರುವ ಶಾಲೆಯ ಮಾಹಿತಿ, ಹೆಜ್ಜೆಗುರುತು ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಹೊಂದಿರುವ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ತಮ್ಮ ಬಡಾವಣೆಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಅಥವಾ ಗುಲ್ಬರ್ಗ (ನಗರ) ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ತಂದುಕೊಡಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕೋರಿರುತ್ತಾರೆ. ಮಾಹಿತಿಗೆ ದೂ. 08472-278661, 9880982314 ಮತ್ತು 9481639046 ಸಂಪರ್ಕಿಸಲು ಕೋರಿದೆ.
ಕಾರ್ತಿಕ ಮಾಸ;  ಲಕ್ಷ ದೀಪೋತ್ಸವ
ಗುಲ್ಬರ್ಗ: ಇಲ್ಲಿನ ಬಿದ್ದಾಪುರ ರಾಯರ ಮಠದಲ್ಲಿ ನ.23ರ ಶನಿವಾರ ಕಾರ್ತಿಕ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಪ್ರಭಂಜನಾಚಾರ್ಯರಿಂದ ದೀಪೋತ್ಸವ ಚಾಲನೆ, ಕಾರ್ತಿಕ ಮಾಸದ ಮಹತ್ವದ ಕುರಿತು ಉಪನ್ಯಾಸ, ಭಜನೆ, ಮಂಗಳಾರತಿ ಸೇವೆಗಳು ನಡೆಯುತ್ತವೆ. ಈ ದೀಪೋತ್ಸವ ಸೇವೆ ಸಲ್ಲಿಸಬಯಸುವವರು, ಈಗಾಗಲೇ ಸೇವೆ ಸಲ್ಲಿಸಿದವರು ಹೆಚ್ಚಿನ ಸಂಖ್ಯೆಯಲ್ಲಿ ರಾಯರ ಮಠಕ್ಕೆ ಆಗಮಿಸಬೇಕು,  ರಸೀದಿ ಪಡೆದು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವ್ಯವಸ್ಥಾಪಕರಾದ ಗುರುರಾಜಾಚಾರ್ಯರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.