ರಾಜಿ ಸಂಧಾನದಿಂದ ಪ್ರಕರಣ ಇತ್ಯರ್ಥಗೊಳ್ಳಲಿ
ಚಿಂಚೋಳಿ: ನ್ಯಾಯಾಲಯ ಹತ್ತುವ ಪೂರ್ವದಲ್ಲಿಯೇ ರಾಜಿ ಸಂಧಾನ ಮೂಲಕ ವ್ಯಾಜ್ಯಗಳನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಂಡರೆ ಗ್ರಾಮಗಳಲ್ಲಿ ಉತ್ತಮ ಬಾಂಧವ್ಯದಿಂದ ಚೆನ್ನಾಗಿರಲು ಸಾಧ್ಯ ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಚಿಂಚೋಳಿ ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶ ಜಿ.ವಿ. ತುರಮುರಿ ಹೇಳಿದರು.
ದ್ವೇಷ ಬೇಡ: ಇಲ್ಲಿನ ನ್ಯಾಯಾಲಯ ಅವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ನ್ಯಾಯವಾದಿ ಸಂಘದಿಂದ ಏರ್ಪಡಿಸಿದ್ದ ಬೃಹತ್ ಲೋಕ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ನ್ಯಾಯಲಯದಲ್ಲಿ ಹೂಡಿರುವ ಪ್ರಕರಣಗಳನ್ನು ತಮ್ಮ ತಮ್ಮ ರಾಜಿ ಸಂಧಾನ ಮೂಲಕ ಇತ್ಯರ್ಥ ಮಾಡಿಕೊಂಡರೆ ಸಮಯ ಮತ್ತು ಹಣ ಉಳಿಸಲು ಸಾಧ್ಯವಿದೆ. ಪ್ರಕರಣ ಇತ್ಯಥವಾಗದೇ ಹೋದಲ್ಲಿ ದ್ವೇಷ ಹೆಚ್ಚುತ್ತದೆ. ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸರ್ಕಾರ ಲೋಕ ಅದಾಲತ್ ಏರ್ಪಡಿಸಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು.
ಇತ್ಯರ್ಥ: ಕಳೆದ ಅಕ್ಟೋಬರ್-ನವೆಂಬರ್ನಲ್ಲಿ ಆಸ್ತಿಪಾಸ್ತಿ ಮತ್ತು ಸಿವಿಲ್ ಪ್ರಕರಣ ಸೇರಿದಂತೆ ಒಟ್ಟು 180 ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಜಿ.ವಿ.ತುರಮುರಿ ಹೇಳಿದರು. ಹಿರಿಯ ನ್ಯಾಯವಾದಿ ಸಿ.ವಿ ದೇಶಮುಖ ಮಾತನಾಡಿ, ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ್ಥಪಡಿಸಿಕೊಂಡರೆ ಕಹಿ ಭಾವನೆ ಹುಟ್ಟುವುದಿಲ್ಲ. ಉತ್ತಮ ಬಾಂಧವ್ಯ ಹೆಚ್ಚುತ್ತದೆ. ಭಿನ್ನಾಭಿಪ್ರಾಯ ಉಂಟಾಗುವುದಿಲ್ಲ. ವ್ಯಾಜ್ಯಗಳು ಹಲವು ವರ್ಷಗಳಿಂದ ಇತ್ಯರ್ಥಗೊಳ್ಳದಿದ್ದಲ್ಲಿ ಕುಟುಂಬದಲ್ಲಿ ಸೌಹಾರ್ದತೆ ಸಂಬಂಧ ಇರುವುದಿಲ್ಲವೆಂದರು. ಂಚೋಳಿ ಸಿವಿಲ್ ನ್ಯಾಯಾಲಯ ಕಿರಿಯ ಶ್ರೇಣಿ ನ್ಯಾಯಾಧೀಶೆ ಕೆ.ಎಂ. ಶೈನಿ ಮತ್ತು ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಿವರಾಯ ಹಾದಿಮನಿ ವೇದಿಕೆಯಲ್ಲಿದ್ದರು. ನ್ಯಾಯವಾದಿ ಆರ್.ಎಸ್. ಭಾವಿಕಟ್ಟಿ ಸ್ವಾಗತಿಸಿದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

