ಗುಲ್ಬರ್ಗಾ

2014 ಕುಟುಂಬ ಕೃಷಿ ವರ್ಷ; ವಿಶ್ವಸಂಸ್ಥೆ ಘೋಷಣೆ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ನ.22
2014ನೇ ವರ್ಷವನ್ನು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಕುಟುಂಬ ಕೃಷಿ ವರ್ಷವನ್ನಾಗಿ ಆಚರಿಸಲು ನಿರ್ಧರಿಸಿದ್ದು ನ.22ರಂದು ಅಧಿಕೃತವಾಗಿ ಘೋಷಣೆ ಮಾಡಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವರ್ಲ್ಡ್ ರೂರಲ್ ಫೋರಂ ಸದಸ್ಯ, ಗುಲ್ಬರ್ಗ ನಿವಾಸಿ ಬಸವರಾಜ ಇಂಗಿನ್, ರೈತರು ಕೃಷಿಯಿಂದ ವಿಮುಖರಾಗುತ್ತಿರುವ ಆತಂಕ ಜಗತ್ತಿನಲ್ಲಿ ಮೂಡಿದೆ. ರೈತರನ್ನು ಕೃಷಿಯಲ್ಲೇ ಉಳಿಸಿಕೊಳ್ಳುವಂತಾಗಲು, ಸುಸ್ಥಿರ ಕೃಷಿ ನೀತಿಗಳನ್ನು ನಿರೂಪಿಸುವಂತಾಗಲು ವಿಸ್ವಸಂಸ್ಥೆ ತನ್ನದೇ ಆದಂತಹ ಧೋರಣೆಗಳನ್ನು ಹೊಂದಿದ್ದು, ಅದರ ಮೊದಲ ಹೆಜ್ಜೆ ಇದಾಗಿದೆ ಎಂದು ಹೇಳಿದರು.
ವಿಸ್ವಸಂಸ್ಥೆ ಜಗತ್ತಿನಾದ್ಯಂತ ನ.22ರಂದೇ ಇಂತಹ ಘೋಷಣೆ ಮಾಡುವ ಮೂಲಕ 2014ನ್ನು ಕುಟುಂಬ ಕೃಷಿ ವರ್ಷವನ್ನಾಗಿ ಪರಿಣಾಮಕಾರಿಯಾಗಿ ಆಚರಿಸಲು ಸಿದ್ಧತೆಯಲ್ಲಿದೆ. ಎಲ್ಲ ದೇಶಗಳಿಗೂ ವಿಸ್ವಸಂಸ್ಥೆ ಮಾರ್ಗಸೂಚಿಯನ್ನು ರವಾನಿಸಲಿದೆ, ಉದಾರ ಆರ್ಥಿಕ ದೇಣಿಗೆಯನ್ನೂ ನೀಡಲಿದೆ ಎಂದರು.
ರೈತರಿರುವಲ್ಲೇ ನಗರ ಸೌಕರ್ಯ: ರೈತರು ಇರುವಲ್ಲೇ ನಗರ ಸೌಕರ್ಯಗಳನ್ನು ವಿಸ್ತರಿಸುವ ಪರಿಕಲ್ಪನೆ ಇದರ ಹಿಂದಿದೆ. ಇದಲ್ಲದೆ ರೈತರು ಜಾಗೃತರಾಗಿ ಮುಂದುವರಿದಲ್ಲಿ ಅದೇ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಅನುಕೂಲವಾಗುತ್ತದೆ. ಇಂತಹ ಪರಿಕಲ್ಪನೆಗಳೊಂದಿಗೇ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಟುಂಬ ಕೃಷಿ ವರ್ಷ ಘೋಷಣೆ ಮಾಡಿ ಅನುಷ್ಠಾನಕ್ಕೆ ತರುತ್ತಿದೆ ಎಂದರು.
ರಾಷ್ಟ್ರೀಯ ನೀತಿ ನಿರೂಪಣೆಯಲ್ಲಿ ರೈತರು ಪ್ರಮುಖರಾಗಿ ಹೊರಹೊಮ್ಮಬೇಕು ಎಂಬುದು ವಿಶ್ವಸಂಸ್ಥೆಯ ನಿಲುವು. ಅದಕ್ಕಾಗಿ ಕುಟುಂಬ ಕೃಷಿ ವರ್ಷದಡಿಯಲ್ಲಿ ರಾಷ್ಟ್ರೀಯ, ರಾಜ್ಯ, ಜಿಲ್ಲೆ, ಹೋಬಳಿ ಮಟ್ಟದಲ್ಲಿಯೂ ನಾಗರಿಕ ಸಮಿತಿಗಳು, ಚಿಂತಕರ ಒಕ್ಕೂಟಗಳನ್ನು ರಚಿಸುವ ಮೂಲಕ ಕುಟುಂಬ ಕೃಷಿ ವರ್ಷವನ್ನು ಪರಿಣಾಮಕಾರಿಯಾಗಿ ಆಚರಿಸುವ ಸಿದ್ಧತೆಗಳು ಸಾಗಿವೆ.
ಇದು 3 ವರ್ಷಗಳ ಚಿಂತನೆ ಫಲ: ತೊಗರಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಇಂಗಿನ್ ಕುಟುಂಬ ಕೃಷಿ ವರ್ಷ ಘೋಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.