ಧರ್ಮದ ಹಾದಿಯಲ್ಲಿ ನಡೆದರೆ ಸನ್ಮಾರ್ಗ
ಚಿಗರಹಳ್ಳಿ ಕ್ರಾಸ್ ಬಳಿ ಶಿವನ ಮೂರ್ತಿ ಪ್ರತಿಷ್ಠಾಪಿಸಿ ಡಾ.ಶರಣಬಸವಪ್ಪ ಅಪ್ಪ
ಕನ್ನಡಪ್ರಭ ವಾರ್ತೆ ಜೇವರ್ಗಿ ನ.26
ಜೀವನದಲ್ಲಿ ಧರ್ಮದ ಹಾದಿಯಲ್ಲಿ ನಡೆದರೆ ಸನ್ಮಾರ್ಗದ ದಾರಿ ಕಾಣಲು ಸಾಧ್ಯ ಎಂದು ಶರಣಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಚಿಗರಹಳ್ಳಿ ಕ್ರಾಸ್ ಬಳಿ ಸೋಮವಾರ ಶಿವನ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುರು ಮೇಲಿನ ಪ್ರೀತಿ ಭಕ್ತಿ ಎನ್ನಿಸಿಕೊಳ್ಳುತ್ತದೆ ಎಂದರು.
ಶರಣಬಸವೇಶ್ವರರು ಗುರುವಿನ ಮೇಲೆ ಮತ್ತು ಧರ್ಮದ ಮೇಲಿಟ್ಟ ನಿಷ್ಠೆಯಿಂದ ಅವರು ವಿಶ್ವವಿಖ್ಯಾತರಾಗಲು ಕಾರಣವಾಯಿತು. ಶರಣರ ಹಾದಿಯಲ್ಲಿ ನಡೆದಲ್ಲಿ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದರು.
ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ ಶ್ರೀಸಿದ್ಧಲಿಂಗ ಮಹಾಸ್ವಾಮೀಜಿ ಮಾತನಾಡಿ, ಇಂದಿನ ದಿನಗಳಲ್ಲಿ ವಂದನೀಯ ಸಂತರು ದಂಡನೀಯ ನಿಂದನೀಯ ಆಗುತ್ತಿದ್ದಾರೆ. ಆದರೆ, ದಂಡನೀಯ ಸಂತರು ವಂದನೀಯ ಆಗುತ್ತಿದ್ದಾರೆ. ಹೀಗಾಗಿ, ಧರ್ಮ ಮತ್ತು ದೇಶ ಅಧೋಗತಿಗೆ ಇಳಿಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕೆಲವು ಮಠಾಧೀಶರೇ ಧರ್ಮ ಮತ್ತು ಸಂಪ್ರದಾಯ ವಿರೋಧಿ ಆಗುತ್ತಿದ್ದಾರೆ. ಧರ್ಮ ಮತ್ತು ಅದರ ಆಚಾರ ವಿಚಾರಗಳನ್ನು ಹೊಸಕಿ ಸಂಪ್ರದಾಯ ಸಮಾಧಿ ಮಾಡಿ, ಆ ಸಮಾಧಿ ಮೇಲೆ ಪ್ರಭುತ್ವ ಸಾಧಿಸಲು ಹೊರಟಿದ್ದಾರೆ. ಇಂತಹವರ ಪೊಳ್ಳು ಮಾತಿಗೆ ಕಿವಿಗೊಡದೆ ಸತ್ಯ ಸಂಪ್ರದಾಯ ಒಪ್ಪಿಕೊಳ್ಳಬೇಕೆಂದು ಆಂದೋಲಾ ಶ್ರೀಗಳು ಹೇಳಿದರು.
ಕಾರ್ಯಕ್ರಮದಲ್ಲಿ ಕಟ್ಟಿಸಂಗಾವಿಯ ಬಸಯ್ಯಪ್ಪ ಸ್ವಾಮೀಜಿ, ಆಲೂರಿನ ಶ್ರೀಕೇಂಚವೃಷಬೇಂದ್ರ ಸ್ವಾಮೀಜಿ, ಶರಣಬಸಪ್ಪ ನಿಷ್ಠಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪರಮೇಶ್ವರ ಬಿರಾಳ ನಿರೂಪಿಸಿ, ಮಲ್ಲಿಕಾರ್ಜುನ ಗಂವ್ಹಾರ ಸ್ವಾಗತಿಸಿ, ಚಂದ್ರಕಾಂತ ಗಂವ್ಹಾರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

