ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಗುಲ್ಬರ್ಗ: ಜೆಸ್ಕಾಂ ವ್ಯಾಪ್ತಿಯ ಗುಲ್ಬರ್ಗದ ಮಹಾವೀರ ನಗರ 11 ಕೆವಿ ಫೀಡರ್ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಲಿರುವ ಪ್ರಯುಕ್ತ ನ.30 ರಂದು ಎಸ್ಸಿ- ಎಸ್ಟಿ ವಸತಿಗೃಹ, ಡಾ. ರವೀಂದ್ರ ಆಸ್ಪತ್ರೆ, ಮೋಹನ ಲಾಡ್ಜ್, ಪಿಡಬ್ಲ್ಯೂಡಿ ಕಚೇರಿ, ನಾಗರ್ಜುನ ಹೋಟೆಲ್, ಜಿ.ಕೆ.ಕಾಂಪ್ಲೆಕ್ಸ್, ಕೋಠಾರಿ ಕಣ್ಣಿನ ಆಸ್ಪತ್ರೆ, ತಿಮ್ಮಾಪುರಿ ಕಾಂಪ್ಲೆಕ್ಸ್, ಕ್ರಿಸ್ಟಲ್ ಮತ್ತು ಪ್ಲಾಜಾಗಳಲ್ಲಿ ನ.30ರಂದು ಬೆ.10ರಿಂದ ಸಂಜೆ 5 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಅಲ್ಲದೆ ನಗರದ ಕೆಐಎಡಿಬಿ 1ನೇ ಹಂತ ಫೀಡರ್ ಮೇಲೆ ನಿರ್ವಹಣಾ ಕೆಲಸ ಕೈಗೊಳ್ಳಲಿರುವ ಪ್ರಯುಕ್ತ ಕೈಗಾರಿಕಾ ವಸಾಹತು 1ನೇ ಹಂತ, ಕಪನೂರ ಎಸ್ಸಿ ಓಣಿ, ಕಪನೂರ ಗ್ರಾಮ ಮತ್ತು ರೇವಣಸಿದ್ದೇಶ್ವರ ಕಾಲೋನಿಯಲ್ಲಿ ಬೆ.10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಈ ಬಡಾವಣೆಗಳ ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
ಆತ್ಮಹತ್ಯೆಗೆ ಸರ್ಕಾರ ಹೊಣೆ
ಗುಲ್ಬರ್ಗ: ಬೆಳಗಾವಿ ಸುವರ್ಣಸೌಧದ ಮುಂದೆ ಕಬ್ಬು ಬೆಳೆಗಾರರು ಧರಣಿ ನಡೆಸಿದ ಸಂದರ್ಭದಲ್ಲಿ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ರೈತ ಕೃಷಿ ಕಾರ್ಮಿಕರ ಸಂಘಟನೆ ಆರೋಪಿಸಿದೆ. ಇದು ಆತ್ಮಹತ್ಯೆಯಲ್ಲ ಕಗ್ಗೊಲೆ. ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿದೆ. ಸರ್ಕಾರ ಇನ್ನಾದರೂ ರೈತರ ಸಮಸ್ಯೆಗಳನ್ನು ಪರಿಹರಿಸಲು ಶೀಘ್ರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಸಂಚಾಲಕ ಎಸ್. ಸಂದೀಪ ಒತ್ತಾಯಿಸಿದ್ದಾರೆ.
ಸಂಭಾಜಿ ಪ್ರತಿಕೃತಿ ದಹನ
ಗುಲ್ಬರ್ಗ/ಶಹಾಬಾದ್: ಬೆಳಗಾವಿಯ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಕನ್ನಡ ಭಾಷೆ, ನಾಡಿನ ಬಗ್ಗೆ ಅವಹೇಳನಕಾರಿ ಮಾತನಾಡಿದ್ದನ್ನು ಪ್ರತಿಭಟಿಸಿ ವಾಡಿ ವಲಯ ಜೈ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶಾಸಕನ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ಜೈಕರವೇ ಅಧ್ಯಕ್ಷ ದೀಪಕ ರಾಠೋಡ ನೇತೃತ್ವದ ಪ್ರತಿಭಟನೆಯಲ್ಲಿ ಗುರುರಾಜ ಇಂಗಳಗಿ, ಮಹ್ಮದ್ ಅಖಿಲ್, ದಶರಥ ದೊರಿ, ಕ್ರಿಷ್ಟೋಪರ್, ಮಹಿಬೂಬ್ ಪಟೇಲ್, ಸುದರ್ಶನ ಗುತ್ತೇದಾರ, ಹುಸೇನಸಾಬ್ ಚಟ್ನಳ್ಳಿ ಇತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

