ಗುಲ್ಬರ್ಗಾ

ಕರಾಟೆ: ರಾಷ್ಟ್ರಮಟ್ಟಕ್ಕೆ ವಿದ್ಯಾರ್ಥಿನಿ

Published On :

ಹುಣಸಗಿ: ಇತ್ತೀಚಿಗೆ ಮೈಸೂರಿನ ವಿದ್ಯಾಂಶಂಕರ ನಿಲಯ ಗನ್ ಹೌಸ್ ಸಮೀಪ ನಡೆದ ಸೆಕೆಂಡ್ ಇಂಟರ್ ನ್ಯಾಷನಲ್ ಕರಾಟೆ ಟೂರ್ನಿಮೆಂಟ್ ಸ್ಪರ್ಧೆಯಲ್ಲಿ ಹುಣಸಗಿ ಸಮೀಪದ ಮಂಜಲಾಪುರ ಹಳ್ಳಿಯ ವಿದ್ಯಾರ್ಥಿನಿ ವಿಜಯಲಕ್ಷ್ಮೀ ದೇವತ್ಕಲ್ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜಯಲಕ್ಷ್ಮೀ ಸದ್ಯ ಧಾರವಾಡದ ಜೆಎಸ್‌ಎಸ್ ಕಾಲೇಜಿನಲ್ಲಿ ಬಿಎಸ್ಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾರೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಜೆಎಸ್‌ಎಸ್ ಕಾಲೇಜಿನ ಪ್ರಾಚಾರ್ಯ ಡಾ. ಅಜೀತ್ ಪ್ರಸಾದ್, ಕರಾಟೆ ಶಿಕ್ಷಕ ಸೆನ್ಸಿ ರಮೇಶ ಸೊಲ್ಲಾಪುರ, ರಜನಿದಾಸ, ಸ್ಥಳಿಯ ನೂತನ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕ ವಿಜಯಕುಮಾರ ದೇಸಾಯಿ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.

ರೇಲ್ವೆ ನಿಲ್ದಾಣ ಮರು ನಾಮಕರಣ ಮುಂದೂಡಿಕೆ
ಯಾದಗಿರಿ: ಸೈದಾಪುರ ರೇಲ್ವೆ ನಿಲ್ದಾಣ ಮರು ನಾಮಕರಣ ಕಾರ್ಯಕ್ರಮ ಮುಂದೂಡಲಾಗಿರುವುದರಿಂದ ಜ. 1ರಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜವಳಿ, ಬಂದರು ಒಳನಾಡು ಜಲಸಾರಿಗೆ ಸಚಿವರು ಭಾಗವಹಿಸಲಿರುವ ಕಾರ್ಯಕ್ರಮ ರದ್ದಾಗಿದೆ ಎಂದು ಸಚಿವರ ಕಾರ್ಯಾಲಯ ಮೂಲಗಳು ತಿಳಿಸಿವೆ.

ಸಹಾಯಧನ: ಅರ್ಜಿ ಆಹ್ವಾನ
ಯಾದಗಿರಿ: ಕರ್ನಾಟಕ ರಾಜ್ಯದಲ್ಲಿ ಆಥರ್‌ಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಹೆಣ್ಣುಮಕ್ಕಳಿಗೆ, ವಿಚ್ಫೇದಿತ ಮಹಿಳೆ ಮತ್ತು ವಿಧವೆಯರಿಗೆ ವೈಯಕ್ತಿಕ ಹಾಗೂ ಸಾಮೂಹಿಕ ಮದುವೆ ಕಾರ್ಯಗಳಿಗೆ 50 ಸಾವಿರ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಕುಟುಂಬದ ವಾರ್ಷಿಕ ಆದಾಯ ರು. 1.50 ಲಕ್ಷಗಳಿಗಿಂತ ಕಡಿಮೆ ಇರುವ, ಇಚ್ಚೆವುಳ್ಳ ಮುಸ್ಲಿಂ ಅಭ್ಯರ್ಥಿಗಳು,ಫಲಾನುಭವಿಗಳು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯಾದಗಿರಿ ಇವರನ್ನು ಭೇಟಿ ನೀಡಿ ಅರ್ಜಿ ಸಲ್ಲಿಸಲು ಕೋರಿದೆ. ಭರ್ತಿ ಮಾಡಿದ ನಿಗದಿತ ಅರ್ಜಿಗಳನ್ನು ಡಿ. 16 ರೊಳಗೆ ಸಲ್ಲಿಸಲು ತಿಳಿಸಲಾಗಿದೆ.

ನಾಳೆ ಆಯುಷ್ ಕಾರ್ಯಾಗಾರ
ಯಾದಗಿರಿ: ಯಾದಗಿರಿ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಡಿ.1ರಂದು ವಿಚಾರ ಸಂಕಿರಣ ಹಾಗೂ ಡಿ.2ರಂದು ಆಯುಷ್ ಕಾರ್ಯಾಗಾರವನ್ನು ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬೆ.10ಕ್ಕೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಆಯುಷ್ ಇಲಾಖೆಯಲ್ಲಿ ಲಭ್ಯವಿರುವ ವಿಶೇಷ ಚಿಕಿತ್ಸೆಗಳ ಬಗ್ಗೆ ಮತ್ತು ಆಯುಷ್‌ನ ಇತ್ತೀಚಿನ ಬೆಳೆವಣಿಗೆಗೆ ಬಗ್ಗೆ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಗಳು ಆಗಮಿಸಲಿದ್ದಾರೆ ಎಂದು ಜಿಲ್ಲಾ ಆಯುಷ್ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.