ಗುಲ್ಬರ್ಗಾ

ಹೇಳಿದ್ದು 6, ಕೊಡ್ತಿರೋದು 4 ತಾಸು ಕರೆಂಟ್: ರೈತರ ಕಿಡಿ

Published On :

ಆಳಂದ:  ಪ್ರಮುಖವಾಗಿ ಖಜೂರಿ ವಲಯ ಸೇರಿದಂತೆ ತಾಲೂಕಿನ ಹಲವಡೆ ಕೃಷಿ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗದ ಹಿನ್ನೆಲೆ ಬಾವಿ, ಬೋರ್‌ವೆಲ್‌ಗಳು ಹೊಂದಿರುವ ರೈತರು ತಮ್ಮ ಬೆಳೆಗಳಿಗೆ ನಿರುಣಿಸಿಕೊಳ್ಳಲಾದ ಪರಿಸ್ಥಿತಿ ಎದುರಾಗಿ ತೀವ್ರ ಕಂಗಾಲಾಗಿ ಜನಪ್ರತಿನಿಧಿಗಳು, ಅಧಿಕಾರಿಗಳ ಮೊರೆಹೋಗತೊಡಗಿದ್ದಾರೆ.
ಅತ್ತ ಬೆಳಗಾವಿ ಅಧಿವೇಶನದಲ್ಲಿ ರಾಜಕಾರಣಿಗಳು, ಶಾಸಕರು ಬಿಜಿಯಾಗಿದ್ದಾರೆ. ಇತ್ತ ರೈತರು ತಮ್ಮ ಬೆಳೆಗಳಿಗೆ ನೀರುಣಿಸಲು ಸೂಕ್ತ ವಿದ್ಯುತ್ ಇಲ್ಲದಿರುವುದು ನುಂಗಲಾಗದ ತುತ್ತಾಗಿ ಪರಿಣಮಿಸಿದೆ.
ಸರ್ಕಾರ ನಿಗದಿಪಡಿಸಿದ ದಿನದ 6 ಗಂಟೆಯಲ್ಲಿ ಕೇವಲ 4 ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡುತ್ತಾರೆ. ಆದರೆ, ಅದು ಸಮರ್ಪಕವಾಗಿ ಒದಗಿಸುತ್ತಿಲ್ಲ. ಪೂರೈಕೆ ಅವಧಿ ಮಧ್ಯದಲ್ಲಿ ಪದೇ ಪದೇ ಕಡಿತಗೊಳಿಸಲಾಗುತ್ತಿದೆ. ಇದರಿಂದ ಸ್ವಲ್ಪವೂ ಕೂಡ ಬೆಳೆಗಳಿಗೆ ನಿರುಣಿಸಲು ಸಾಧ್ಯವಾಗುತ್ತಿಲ್ಲ ಎಂದು ಖಜೂರಿ ವಲಯದ ಸಾಲೇಗಾಂವ ಗ್ರಾಮದ ಹಿರಿಯ ರೈತ ಆನಂದರಾಯ ಕಂಟೆಕುರೆ ಸೇರಿದಂತೆ ಚಿತಲಿ ಮತ್ತಿತರ ಗ್ರಾಮಸ್ಥರು ಗುರುವಾರ ಗೋಳಿಟ್ಟರು.
ಆಳಂದ ಜೆಸ್ಕಾಂ ಎಇಇ ವಿಶ್ವನಾಥ ರೆಡ್ಡಿ ಅವರಿಗೆ ಕರೆಯಿಸಿ ಪಂಪ್‌ಸೆಟ್‌ಗಳಿಗೆ ಸಂಪರ್ಕ ವಿದ್ಯುತ್ ಒದಗಿಸುವಂತೆ ಶಾಸಕರು ಸೂಚಿಸಿದ್ದಾರೆ. ಇಷ್ಟಾಗಿಯೂ ಖಜೂರಿ ವಲಯದಲ್ಲಿ ವಿದ್ಯುತ್ ಕೃತಕ ಅಭಾವ ಸೃಷ್ಟಿಯಾಗಿದೆ ಎಂದು ರೈತರು ಮತ್ತೆ ಹೇಳಿಕೊಂಡಿದ್ದಾರೆ.
ಒತ್ತಾಯ: ಸರ್ಕಾರ ನಿಗದಿಪಡಿಸಿದ 6 ಗಂಟೆ ವಿದ್ಯುತ್ ಪೈಕಿ 4 ಗಂಟೆ ಮಾತ್ರ ನೀಡುತ್ತಿದ್ದಾರೆ. ಕೇಳಿದರೆ ಟ್ರಾನ್ಸ್‌ಫಾರ್ಮರ್ ಸಮಸ್ಯೆಯಿದ್ದು, ಹೊಸ ಟಿಸಿ ಅಳವಡಿಸಲು ಖಜೂರಿ ಎಂಜಿನಿಯರ್ ತಿಂಗಳ ಕಾಲಾವಧಿ ಕೇಳಿದ್ದಾರೆ. ಅಷ್ಟು ಹೊತ್ತಿಗೆ ಬೆಳೆಯ ಹಂಗಾಮು ಮುಗಿದು ಹೋಗಲಿದ್ದು, ರೈತರು ಏನು ಮಾಡಬೇಕು. ಕೂಡಲೇ ಅಧಿಕಾರಿಗಳು ಪರಿಸ್ಥಿತಿ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು. ಸಮರ್ಪಕ ವಿದ್ಯುತ್ ಪೂರೈಕೆ ಮೂಲಕ ರೈತರಿಗೆ ಅನುಕೂಲ ಒದಗಿಸಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.