ಗುಲ್ಬರ್ಗಾ

ಬಿಜೆಪಿ ಕಾರ್ಯಕರ್ತರಿಗೆ ಬಾಡೂಟ

Published On :

ಕ.ಪ್ರ. ವಾರ್ತೆ , ಚಿಂಚೋಳಿ , ಏ.5
ಮಾಜಿ ಸಚಿವ ಸುನೀಲ್ ವಲ್ಯಾಪುರೆ ಪಟ್ಟಣದ ಹೊರವಲಯದ ನಿಮಾಹೊಸಳ್ಳಿ ರಸ್ತೆ ಮಾರ್ಗದ ಪಕ್ಕದಲ್ಲಿರುವ ತನ್ನ ತೋಟದಲ್ಲಿ ಶುಕ್ರವಾರ ಲಕ್ಷ್ಮಿ ಪೂಜೆ ನಿಮಿತ್ತ ತಮ್ಮ ಬಿಜೆಪಿ ಕಾರ್ಯಕರ್ತರಿಗೆ ಬಾಡೂಟ ಏರ್ಪಡಿಸಿದ್ದರು.
ವಿಷಯ ಅರಿತ ಇಲ್ಲಿನ ಮಾದರಿ ನೀತಿ ಸಂಹಿತೆ ಕಾಪಾಡುವ ಪ್ಲೈಯಿಂಗ್ ಸ್ವ್ಕಾಡ್‌ನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಾಡೂಟ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ ಬಗ್ಗೆ ವೀಡಿಯೋ ಚಿತ್ರೀಕರಣ ನಡೆಸಲಾಗಿದೆ ಎಂದು ಪ್ಲೈಯಿಂಗ್ ಸ್ವ್ಕಾಡ್ ಅಧಿಕಾರಿಗಳು ಸಂತೋಷ ಶೇಶಲು ತಿಳಿಸಿದ್ದಾರೆ.
ವೀಡಿಯೋದಲ್ಲಿ ಸೆರೆ: ಬಿಜೆಪಿ ಮಾಜಿ ಸಚಿವ ಸುನೀಲ್ ವಲ್ಯಾಪುರೆ ಅವರ ಹೊಲಕ್ಕೆ ಭೇಟಿ ನೀಡಿ ಅಲ್ಲಿ ನಡೆದ ಬಾಡೂಟ ಮತ್ತು ಭಾಗವಹಿಸಿದ ಕಾರ್ಯಕರ್ತರ ದೃಶ್ಯಗಳನ್ನು ವೀಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ವೀಡಿಯೋ ಚಿತ್ರೀಕರಣದ ಸಿ.ಡಿ. ಯನ್ನು ವಿಶೇಷ ಜಾಗೃತ ದಳ ತಂಡಕ್ಕೆ ಕಳುಹಿಸಲಾಗಿದೆ. ಮೀಡಿಯೋ ಚಿತ್ರೀಕರಣದ ದೃಶ್ಯಾವಳಿಗಳನ್ನು ವೀಕ್ಷಿಸಿದ ನಂತರ ಸರ್ವಿಲೆನ್ಸ್ ತಂಡಕ್ಕೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಕುರಿತು ಮನವರಿಕೆಯಾದರೆ ಅವರ ಆದೇಶ ಮತ್ತು ನಿರ್ದೇಶನದ ಮೇರೆಗೆ ಸಂಬಂಧಿಸಿದವರ ವಿರುದ್ಧ ದೂರು ಸಲ್ಲಿಸಲಾಗುವುದೆಂದು ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಿ. ಮಂಜುನಾಥ ತಿಳಿಸಿದರು.
ಬಿಜೆಪಿ ಕಾರ್ಯಕರ್ತರು ಭಾಗಿ: ಬೀದರ್ ಲೋಕಸಭಾ ಬಿಜೆಪಿ ಅಭ್ಯರ್ಥಿ ಭಗವಂತ ಖುಬಾ ಅವರ ಚುನಾವಣಾ ಪ್ರಚಾರ ಕುರಿತು ನಡೆಸಿದ ಸಭೆಯಲ್ಲಿ ಕಾಳಗಿ, ಕೋಡ್ಲಿ, ಕುಂಚಾವರಂ, ಐನಾಪೂರ, ವಲಯಗಳ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
ವಿಧಾನಸಭೆ ಚುನಾವಣೆ ನಂತರ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿಲ್ಲ. ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ತಾಲೂಕ ಬಿಜೆಪಿ ಅಧ್ಯಕ್ಷ ಶಾಮಸುಂದರ ಪವಾರ, ಪಪಂ ಮಾಜಿ ಅಧ್ಯಕ್ಷ ಸುಭಾಶ ಸೀಳಿನ್, ಬಿಜೆಪಿ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪಾ ಮಜ್ಜಗಿ, ಭೀಮಶೆಟ್ಟಿ ಜಾಬಶೆಟ್ಟಿ, ಶ್ರೀಮಂತ ಕಟ್ಟಿಮನಿ, ತಾಪಂ ಮಾಜಿ ಅಧ್ಯಕ್ಷ ಭೀಮಶೆಟ್ಟಿ ಮುರುಡಾ, ಸಂಜೀವ ಪುಣ್ಯಶೆಟ್ಟಿ, ಶಿವಶರಣ ಪಾಚಿಮ್ಮಾ ಇದಲಾಯಿ, ಪಪಂ ಸದಸ್ಯರಾದ ಮಸ್ತಾನ ಹಾಥಿವಾಲೆ, ರವಿ ಹೊಸಬಾಯಿ, ಕಾಶಿನಾಥ ನಾಟಿಕಾರ, ಅಯ್ಯೂಬ ಖಾನ ಟೇಲರ್, ಮಗದೂಮ ಖುರೇಶಿ, ಚೆನ್ನಯ್ಯ, ಮೊಗಲಯ್ಯ, ದಿವಾಕರ ಜಹಾಗೀರದಾರ ಇನ್ನಿತರ ಪ್ರಮುಖರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.