ಕಾಂಗ್ರೆಸ್- ಬಿಜೆಪಿಗೇಕೆ ಮತ?: ಸೋಮಶೇಖರ
ಕೆಂಭಾವಿ: ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳೆರಡೂ ಭ್ರಷ್ಟ ಅಡಳಿತಕ್ಕೆ ಹೆಸರಾಗಿವೆ. ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ. ದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದ್ದು, ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆ ಈ ಎಲ್ಲ ಪಕ್ಷಗಳಿಂದ ಹದಗೆಟ್ಟಿದೆ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಸೂಸಿ (ಸಿ) ಅಭ್ಯರ್ಥಿ ಕೆ. ಸೋಮಶೇಖರ ಹೇಳಿದರು.
ಪಟ್ಟಣದಲ್ಲಿ ಪ್ರಚಾರ ಕಾರ್ಯಕೈಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ದೇಶದ ಎಲ್ಲ ಪ್ರಮುಖ ಪಕ್ಷಗಳು ಅಭಿವೃದ್ಧಿಯ ಹರಿಕಾರ ಮತ್ತು ಭ್ರಷ್ಟಾಚಾರನಿವಾರಕ ಎಂಬಂತೆ ತಮ್ಮನ್ನು ತಾವು ಬಿಂಬಿಸಿಕೊಂಡು ಲೋಕಸಭೆ ಚುನಾವಣಾ ಕಣಕ್ಕಿಳಿದಿವೆ. ಆದರೆ ದೇಶದಲ್ಲಿರುವ ರೈತರು, ಕೃಷಿ-ಕೂಲಿ ಕಾರ್ಮಿಕರು ಕೆಲಸಗಳನ್ನು ಹುಡುಕಿಕೊಂಡು ಸಾಮೂಹಿಕವಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಸಾಲದ ಬಾಧೆಯಲ್ಲಿ ಸಿಲುಕಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇವೆಲ್ಲ ಮನಗಂಡ ರಾಷ್ಟ್ರದ ಪ್ರಜ್ಞಾವಂತ ಮತದಾರ ಈ ಚುನಾವಣೆಯಲ್ಲಿ ಈ ಎಲ್ಲ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದು, ತಮ್ಮ ಗೆಲವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಹೇಳಿಕೆಗೆ ಖಂಡನೆ
ಯಾದಗಿರಿ: ಕಬ್ಬು ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ರೈತರು ನಡೆಸಿದ ಪ್ರತಿಭಟನೆಯಲ್ಲಿ ಚಿಕ್ಕೋಡಿಯ ರೈತ ವಿಠ್ಠಲ್ ಅರಭಾವಿ ಸಾಲ ಬಾದೆಯಿಂದ ಆತ್ಮಹತ್ಯೆಯನ್ನು ಸಿದ್ದರಾಮಯ್ಯ, ರೈತ ಮದ್ಯ ಸೇವನೆಯಿಂದ ಮೃತಪಟ್ಟಿದ್ದಾನೆ ಎಂಬ ಹೇಳಿಕೆ ನೀಡಿರುವುದಕ್ಕೆ ಯುವ ಭಾರತ ಕ್ರಾಂತಿದಳ ಜಿಲ್ಲಾ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ಕ್ರಾಂತಿದಳ ಪದಾಧಿಕಾರಿಗಳು, ಈಗಾಗಲೇ ರಾಜ್ಯದಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದ ಹಲವಾರು ರೈತರು ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಶೇಷ ಶಿಬಿರ
ಯಾದಗಿರಿ: ವಿಶ್ವ ಮಧ್ವ ಮಹಾಪರಿಷತ್ ವತಿಯಿಂದ ನಗರ ರಾಘವೇಂದ್ರ ಪರಿಮಳ ಮಂಟಪದಲ್ಲಿ ಒಂದು ವಾರ ವಿಪ್ರ ಮಕ್ಕಳಿಗಾಗಿ ವಿಶೇಷ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ. ಉತ್ತರಾಧಿಮಠದ ಸತ್ಯಾತ್ಮತೀರ್ಥರ ಅನುಗ್ರಹದಿಂದ ಏ.2 ರಿಂದ 7ರವರೆಗೆ ನರಸಿಂಹಾಚಾರ್ಯ ಪುರಾಣಿಕ ಅವರ ನೇತೃತ್ವದಲ್ಲಿ ಶಿಬಿರ ನಡೆಯುತ್ತಿದ್ದು, 45ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ. ಶಿಬಿರದಲ್ಲಿ ಉಪನಯನವಾದ ಮಕ್ಕಳಿಗೆ ಸಂಧ್ಯಾವಂದನೆ ಮತ್ತು ದೇವರ ಸ್ತೋತ್ರಗಳನ್ನು, ಹಾಗೂ ಚಿಕ್ಕಮಕ್ಕಳಿಗೆ ದೇವರ ಶ್ಲೋಕಗಳೂಂದಿಗೆ ಧಾರ್ಮಿಕ ಸಂಸ್ಕಾರವನ್ನು ಹೇಳಿಕೊಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

