ಗುಲ್ಬರ್ಗಾ

ಕನ್ನಡ ಪರ ಧ್ವನಿ ಎತ್ತುವರಿಗೆ ಮತ ನೀಡಿ

Published On :

ಯಾದಗಿರಿ: ಲೋಕಸಭೆ ಚುನಾವಣೆಯಲ್ಲಿ ಕನ್ನಡಪರ ಧ್ವನಿ ಎತ್ತುವವರಿಗೆ, ಕನ್ನಡಕ್ಕಾಗಿ ದುಡಿಯುವವರಿಗೆ ಬೆಂಬಲಿಸಿ, ಕರವೇ ಕಾರ್ಯಕರ್ತರು ಕಡ್ಡಾಯವಾಗಿ ಮತ ಚಲಾಯಿಸುವಂತೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ ಹೇಳಿದರು.
ಶಹಾಪುರ ತಾಲೂಕಿನ ಗುಂಡಳ್ಳಿ ತಾಂಡದಲ್ಲಿ ಕರವೇ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕದಲ್ಲಿ ಖಾಸಗಿ ಕಂಪನಿಗಳು ನೆಲದ ಋಣ ತೀರಿಸಲು ಸ್ವಯಂ ಹಿತಾಸಕ್ತಿ ತಾಳಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮಿಸಲಾತಿ ನೀಡಲು ಮುಂದೆ ಬರಬೇಕೆಂದು ಒತ್ತಾಯಿಸಿದರು.
ಸ್ವಾವಲಂಬಿ ಜೀವನ ಯುವಕರ ಪ್ರೇರಣೆಯಾಗಬೇಕು, ಇಳಿ ವಯಸ್ಸಿನಲ್ಲಿಯೂ ಇಂದಿಗೂ ಕೆಲವು ಪಾಲಕರು ತಮ್ಮ ಮಕ್ಕಳನ್ನು ಸಾಕಲು ಪ್ರಯಾಸ ಪಡುತ್ತಿರುವುದನ್ನು ನಾವು ಸಮಾಜದಲ್ಲಿ ಕಾಣುತ್ತೇವೆ. ಅಂತವರಿಗೆ ಮಾನಸಿಕ ಸ್ಥೈರ್ಯ ತುಂಬಿ ಅವರಿಗೆ ನೆರವಾಗುವ ಮೂಲಕ ಸಂಘದ ಕಾರ್ಯಕರ್ತರು ಸಮಾಜದ ಅಭಿವೃದ್ಧಿಗೆ ಸ್ಪಂದಿಸಬೇಕೆಂದು ಹೇಳಿದರು.
ಸಮಸ್ಯೆ ಪರಿಹಾರಕ್ಕೆ ಯತ್ನಿಸಿ: ಕರವೇ ರಾಜ್ಯ ಸಂಚಾಲಕ ಬಸವರಾಜ ಪಡಕೋಟೆ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಕರವೇ ಕಾರ್ಯಕರ್ತರು ಹೋರಾಟಕ್ಕೆ ಇಳಿಯುವ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕೆಂದು ಕರವೇ ಕಾರ್ಯಕರ್ತರಿಗೆ ಕರೆ ನೀಡಿದರು.
ಭೀಮಣ್ಣ ಶಾಖಾಪೂರ, ಜಗದೇಶಗೌಡ, ಭೀಮಶಂಕರ ಹತ್ತಿಕುಣಿ, ಮಲ್ಲು ವರ್ಕನಳ್ಳಿ, ಶ್ರೀದೇವಿ, ಭೀಮು ರಾಠೋಡ, ಸಿದ್ದು ಶಹಾಪೂರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪದಾಧಿಕಾರಿಗಳ ನೇಮಕ: ರಾಜುಕುಮಾರ ರಾಠೋಡ- ಅಧ್ಯಕ್ಷ, ಅಶೋಕ ರಾಠೋಡ- ಉಪಾಧ್ಯಕ್ಷ, ಪ್ರಕಾಶ ರಾಠೋಡ- ಗೌರವಾಧ್ಯಕ್ಷ, ಅನಿಲ ಪಿ. ರಾಠೋಡ, ಅನಿಲ ಎಚ್. ರಾಠೋಡ, ತುಕಾರಾಮ್ ರಾಠೋಡ, ಸುಭಾಸ ರಾಠೋಡ, ದೇವರಾಜ ರಾಠೋಡ, ಪವಾನ ರಾಠೋಡ, ಗೋಪಾಲ ರಾಠೋಡ, ಸೋಮಸಿಂಗ್ ರಾಠೋಡ, ಸಂತೋಷ ರಾಠೋಡ, ಪ್ರತಾಪ ರಾಠೋಡ, ರಂಗಣ್ಣ ರಾಠೋಡ ಸದಸ್ಯರಾಗಿ ನೇಮಕ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.