ಪ್ರತಿ ಮತದಲ್ಲೂ ದೇಶದ ಭವಿಷ್ಯ ಅಡಗಿದೆ: ಶ್ರುತಿ
ಜೇವರ್ಗಿ: ಪ್ರತಿಯೊಬ್ಬರ ಮತದಲ್ಲಿಯೂ ದೇಶದ ಭವಿಷ್ಯ ಅಡಗಿದ್ದು, ಆ ನಿಟ್ಟಿನಲ್ಲಿ ಸದೃಢ ಹಾಗೂ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮೋದಿ ಅವರೇ ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ಬಿಜೆಪಿ ನಾಯಕಿ, ಚಲನಚಿತ್ರ ನಟಿ ಶ್ರುತಿ ಹೇಳಿದರು.
ತಾಲೂಕಿನ ಇಜೇರಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಪರ ಬಹಿರಂಗ ಪ್ರಚಾರದಲ್ಲಿ ಮಾತನಾಡಿದರು. ದೇಶದ ಏಕತೆ, ಅಖಂಡತೆಗಾಗಿ ರಾಜ್ಯದ ಜನತೆ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಕಳೆದ 40 ವರ್ಷಗಳಿಂದ ಹೈ-ಕ ಪ್ರದೇಶದವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಈ ಭಾಗದ ಅಭಿವೃದ್ಧಿಗೆ ಸ್ಪಂದಿಸಿಲ್ಲ. ಇದೇ ಕಾರಣಕ್ಕಾಗಿ ಡಾ. ಡಿ.ಎಂ. ನಂಜುಂಡಪ್ಪ ಅವರ ಪ್ರಾದೇಶಿಕ ಅಸಮಾತೋಲನ ವರದಿಯನ್ವಯ ಹೈ-ಕ ಭಾಗ ಹಿಂದುಳಿದಿದೆ. ಭಾರತ ದೇಶವನ್ನು ಗಾಂಧಿ ಕುಟುಂಬಕ್ಕೆ ಬರೆದುಕೊಟ್ಟಂತೆ ಆಗಿದೆ. ಅದೇ ರೀತಿ ಗುಲ್ಬರ್ಗ ಜಿಲ್ಲೆಯಲ್ಲಿಯೂ ವಂಶಪಾರಂಪರ್ಯ ರಾಜಕಾರಣ ಮುಂದುವರೆದಿದೆ ಎಂದು ಪರೋಕ್ಷವಾಗಿ ಧರ್ಮಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಕಾರ್ಯವೈಖರಿಯನ್ನು ಶೃತಿ ಟೀಕಿಸಿದರು. ನಂತರ ತಾಲೂಕಿನ ಬಿಳವಾರ, ಯಡ್ರಾಮಿ ಹಾಗೈ ಅರಳಗುಂಡಗಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.
ಪ್ರಚಾರ ಸಭೆಯಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮಲ್ಲಿನಾಥಗೌಡ ಯಲಗೋಡ, ಅಲ್ಲಾಪಟೇಲ್ ಹೂಡಾ, ಎಂ.ಬಿ. ಪಾಟೀಲ್ ಹರವಾಳ, ಧರ್ಮಣ್ಣ ದೊಡ್ಡಮನಿ, ವಿದ್ಯಾಸಾಗರ ಕುಲ್ಕರ್ಣಿ, ಶಿವರಾಜಗೌಡ ಪಾಟೀಲ್ ರದ್ದೇವಾಡಗಿ, ಬಸವರಾಜ ಪಾಟೀಲ್ ನರಿಬೋಳ, ಬಾಪುಗೌಡ ಬಿರಾಳ, ಗುರುರಾಜ ಸೂಲಳ್ಳಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಮಹಿಳೆಯರು ಪಾಲ್ಗೊಂಡಿದ್ದರು.
ಬಿಜೆಪಿ ಮುಖಂಡರ ರೋಡ್ ಶೋ
ಜೇವರ್ಗಿ: ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಪರ ಶನಿವಾರ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರೋಡ್ ಶೋ ನಡೆಸಿ ಮತಯಾಚಿಸಿದರು. ಬೆಳಗ್ಗೆ 9ಕ್ಕೆ ಪಟ್ಟಣದ ಬಿಜೆಪಿ ಚುನಾವಣಾ ಕಾರ್ಯಾಲಯದಿಂದ ರೋಡ್ ಶೋ ಆರಂಭಿಸಿದರು. ನಂತರ ಬಸವೇಶ್ವರ ಕಾಲೋನಿ, ಜೋಪಡಪಟ್ಟಿ, ಶಿಕ್ಷಕರ ಕಾಲೋನಿ, ಓಂನಗರ, ದತ್ತನಗರ, ಜನತಾ ಕಾಲೋನಿ ಮುಂತಾದ ಬಡಾವಣೆಗಳಲ್ಲಿನ ಪ್ರತಿ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ರಮೇಶಬಾಬು ವಕೀಲ್, ಶಿವರಾಜ ಪಾಟೀಲ್ ರದ್ದೇವಾಡಗಿ, ಬಿ.ಎ. ಪಾಟೀಲ್, ನಿಂಗಣ್ಣ ಭಂಡಾರಿ ಪಾಲ್ಗೊಂಡಿದ್ದರು.
ಬೆಳಮಗಿ ಭಾಷಣ
ಗುಲ್ಬರ್ಗ: ಅಫಜಲ್ಪುರ ತಾಲೂಕಾ ಬಿಜೆಪಿ ಅಭ್ಯರ್ಥಿಯಾದ ರೇವುನಾಯಕ ಬೆಳಮಗಿ ಹಾವನೂರ ಗ್ರಾಮದಲ್ಲಿ ಭಾಷಣ ಮತ್ತು ಪ್ರಚಾರ ಮಾಡಿದರು.
ಮಾಜಿ ಶಾಸಕ ಎಂ.ವೈ. ಪಾಟೀಲ್, ಅವಣ್ಣಾ ಮ್ಯಾಕೇರಿ, ಸಿದ್ರಾಮಪ್ಪ ಎಸ್.ಪಾಟೀಲ, ರಾಜುಗೌಡ, ಪೊಲೀಸ್ ಪಾಟೀಲ, ಅರುಣಕುಮಾರ ಪಾಟೀಲ, ರಮೇಶ ನಿಲಗರ, ಮಲ್ಲಿಕಾರ್ಜುನ ನಿಂಗಳ್ಳಿ ಇದ್ದರು.
ಬಿಜೆಪಿ ಪ್ರಚಾರಕ್ಕೆ ಅರುಣಕುಮಾರ
ಬಿದನೂರ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಮಾಡಿದ ಅರುಣಕುಮಾರ ಪಾಟೀಲ ಮಾತನಾಡಿ ಬಿಜೆಪಿ ಸರ್ಕಾರದ ಕೆಲಸದ ವಿಷಯಗಳ ಪ್ರಸ್ತಾಪ ಮಾಡಿದರು. ಎಂ.ವೈ. ಪಾಟೀಲ, ಅವಣ್ಣಾ ಮ್ಯಾಕೇರಿ, ಮಲ್ಲಿಕಾರ್ಜುನ, ನಿಂಗುಳ್ಳಿ ರಮೇಶ, ನಿಲಗರ, ರಾಜುಗೌಡ, ಪೊಲೀಸ ಪಾಟೀಲ, ಸಿದ್ರಾಮಪ್ಪ ಎಸ್.ಪಾಟೀಲ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

