ಗುಲ್ಬರ್ಗಾ

ಸಾಗರ್ ಮತಯಾಚನೆ

Published On :

ಗುಲ್ಬರ್ಗ: ಲೋಕಸಭೆ ಚುನಾವಣೆ ನಿಮಿತ್ತ ಲೋಕಸಭೆ ಮತಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಡಿ.ಜಿ. ಸಾಗರ ಮತ್ತು ಜಿಲ್ಲಾಧ್ಯಕ್ಷ ಬಸವರಾಜ ತಡಕಲ್, ರವಿವಾರ ಗುಲ್ಬರ್ಗ ನಗರಗಳಲ್ಲಿ ಪಾದಯಾತ್ರೆ ಮೂಲಕ ಸಾರ್ವಜನಿಕರಲ್ಲಿ ಮತಯಾಚನೆ ಮಾಡಿದರು. ಸಂತೋಷ ತಳವಾರ, ದೇವಿಂದ್ರ ಹಸನಾಪುರ, ಹಣಮಂತ ಕಂದಳ್ಳಿ, ಮಲ್ಲಣ್ಣ ಮಡಿವಾಳ, ಲೋಹಿತ ಕಲ್ಲೂರ, ದೇವಪುತ್ರ ಹೊಸುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಎಂದು ಪ್ರಧಾನ ಕಾರ್ಯದರ್ಶಿ ಮನೋಹರ ಪೊದ್ದಾರ ತಿಳಿಸಿದ್ದಾರೆ.
'ಕೈ' ಅಭ್ಯರ್ಥಿಗಳಿಗೆ ಬೆಂಬಲ
ಗುಲ್ಬರ್ಗ: ಅನೇಕ ರೀತಿಯಿಂದ ಅಹಿಂದ ಸಮುದಾಯಕ್ಕೆ ಸೌಲಭ್ಯ ಒದಗಿಸಿದ ಕಾಂಗ್ರೆಸ್ ಸರ್ಕಾರವನ್ನು ಸ್ಮರಿಸಿ ಅಖಲ ಕರ್ನಾಟಕ ಅಹಿಂದ ವರ್ಗಗಳ ವೇದಿಕೆ ಘಟಕ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್‌ರನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ. ಮುಖಂಡ ಲಕ್ಷ್ಮಣರಾವ ಗೋಗಿ, ಅಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ, ಪದಾಧಿಕಾರಿ ಅನೀಲಕುಮಾರ ಜಮಗಾ, ರಾಜು ಪ್ರಕಾಶ ಬಾಲಾಜಿ, ಸುಭಾಷ ಚಂದ್ರ ಹಡಪದ ಮುಂತಾದವರಿದ್ದರೆಂದು ರಾಜಾಧ್ಯಕ್ಷ ಬಸವರಾಜ ತಿಳಿಸಿದ್ದಾರೆ.
ಖರ್ಗೆಗೆ ಕರವೇ ಬೆಂಬಲ
ಗುಲ್ಬರ್ಗ: ಜಿಲ್ಲೆಗೆ ಪ್ರಗತಿಪರ ಅಭಿವೃದ್ಧಿ ಕೆಲಸಗಳನ್ನು ಮಾಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆರಿಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿಸುತ್ತದೆ ಎಂದು ಉತ್ತರ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಮುಕುಂದ ರೆಡ್ಡಿ ಎನ್. ಕರ್ಚಖೇಡ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.