ಗುಲ್ಬರ್ಗಾ

ಪ್ರಚಾರ ಸಭೆ ನಿಷೇಧ ಇಂದಿನಿಂದ: ಡಿಸಿ ಪ್ರಸಾದ್

Published On :

ಗುಲ್ಬರ್ಗ: ಮತದಾನ ಹಿನ್ನೆಲೆಯಲ್ಲಿ ಮತದಾನ ಮುಕ್ತಾಯದ ಹಿಂದಿನ ದಿನದ 48 ಗಂಟೆಗಳ ಅವಧಿಯಲ್ಲಿ ಚುನಾವಣಾ ಸಂಬಂಧ ಸಭೆ, ಸಮಾರಂಭ, ಮೆರವಣಿಗೆ ಹಾಗೂ ಮಾಧ್ಯಮಗಳ ಮೂಲಕ ಚುನಾವಣಾ ಪ್ರಚಾರ ಮಾಡುವುದನ್ನು ನಿಷೇಧಿಸಿ ಜಿಲ್ಲಾ ಚುನಾವಣಾ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಮತದಾನ ಮುಕ್ತಾಯದ ಹಿಂದಿನ ದಿನದ 48 ಗಂಟೆಗಳ ಅವಧಿಯಲ್ಲಿ ಯಾವುದೇ ವ್ಯಕ್ತಿ, ಉಮೇದುವಾರರು ಅಥವಾ ರಾಜಕೀಯ ಪಕ್ಷ ಚುನಾವಣೆ ಸಂಬಂಧ ಯಾವುದೇ ಸಭೆ, ಸಮಾರಂಭ, ಮೆರವಣಿಗೆ ಮಾಡುವಂತಿಲ್ಲ ಹಾಗೂ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತಾನಾಡುವಂತಿಲ್ಲ.
ನಾಗರಿಕರಿಗೆ, ಮತದಾರರಿಗೆ ಸುದ್ದಿ ಮಾಧ್ಯಮಗಳಾದ ಎಫ್‌ಎಂ, ರೇಡಿಯೋ, ದೂರದರ್ಶನ, ಸಿನೆಮಾ, ಇತ್ಯಾದಿಗಳ ಮೂಲಕ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಮತದಾರರಿಗೆ ಮೊಬೈಲ್ ಮೂಲಕ ಎಸ್‌ಎಂಎಸ್ ಕಳುಹಿಸುವಂತಿಲ್ಲ. ಮತದಾರರಿಗೆ ವೀಡಿಯೋ ಕ್ಲಿಪಿಂಗ್ಸ್ ಪ್ರದರ್ಶಿಸುವಂತಿಲ್ಲ.
ಯಾವುದೇ ಮತಗಟ್ಟೆ ಮುಂದೆ ಜನರನ್ನು ಆಕರ್ಷಿಸಲು ಸಂಗೀತ, ನಾಟಕ, ರಂಗ ಕಲಾಪಗಳನ್ನು ನಡೆಸಬಾರದು. ದಿನ ಪತ್ರಿಕೆಗಳಲ್ಲಿ ಜಾಹಿರಾತು ಹೊರಡಿಸಬಾರದು ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಡಾ. ಎನ್.ವಿ. ಪ್ರಸಾದ್ ತಿಳಿಸಿದ್ದಾರೆ.
ಕ್ಷೇತ್ರ ತೊರೆಯಲು ಆದೇಶ: ಏ.17ರಂದು ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಮತ ಯಾಚಿಸುತ್ತಿರುವ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ಮುಖಂಡರು, ಏಜೆಂಟರು, ತಾರಾ ಪ್ರಚಾರಕರು ಹಾಗೂ ಕ್ಷೇತ್ರದ ಮತದಾರರಲ್ಲದವರೆಲ್ಲರೂ ಏಪ್ರಿಲ್ 15ರಂದು ಸಂಜೆ 6 ಗಂಟೆಯೊಳಗೆ ಕ್ಷೇತ್ರ ವ್ಯಾಪ್ತಿಯನ್ನು ಬಿಡುವಂತೆ ಜಿಲ್ಲಾ ಚುನಾವಣಾ ಅಧಿಕಾರಿ ಡಾ. ಎನ್.ವಿ. ಪ್ರಸಾದ್ ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.