ನ್ಯಾಯವಾದಿಗಳ ಸಂಘ ಅಧ್ಯಕ್ಷರಾಗಿ ಭೀಮಳ್ಳಿ ಆಯ್ಕೆ
ಗುಲ್ಬರ್ಗ: ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾಗಿ ಎಸ್.ಆರ್. ಭೀಮಳ್ಳಿಯವರು ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಸಂಘದ ಚುನಾವಣೆಯಲ್ಲಿ ಅವರು ತಮ್ಮ ಸಮೀಪ ಸ್ಪರ್ಧೆ ಎಸ್.ಎಸ್. ಮಠಪತಿಯವರನ್ನು 494 ಮತಗಳಿಂದ ಪರಾಭವಗೊಳಿಸಿದ್ದಾರೆ. ಎಸ್.ಆರ್. ಭೀಮಳ್ಳಿಯವರು 754 ಮತಗಳನ್ನು ಪಡೆದರೆ, ಎಸ್.ಎಸ್. ಮಠಪತಿಗೆ 260 ಮತಗಳು ಬಂದವು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಎಸ್.ಜಿ. ಪುರಾಣಿಕ ಮಠ ಅವರಿಗೆ 260 ಮತಗಳು ಬಂದವು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಎಸ್.ಜಿ. ಪುರಾಣಿಕ ಮಠ ಅವರಿಗೆ 75, ಜಿ.ಕೆ ಮಂತ್ರಿಯವರಿಗೆ 59 ಹಾಗೂ ಆಸೀಫ್ ಅಲಿ ಖಾನರವರಿಗೆ 40 ಮತಗಳು ಬಂದವು.
ಅದೇ ರೀತಿ ಉಪಾಧ್ಯಕ್ಷರಾಗಿ ರಮೆಶ ದೊಡ್ಡಮನಿ ಆಯ್ಕೆಯಾಗಿದ್ದಾರೆ. ಅವರು ತಮ್ಮ ಪ್ರತಿ ಸ್ಪರ್ಧಿ ನಾಗೇಂದ್ರಪ್ಪ ಎಸ್. ಪೊಲೀಸ್ ಪಾಟೀಲರನ್ನು 390 ಮತಗಳ ಅಂತರದಿಂದ ಸೋಲಿಸಿದರು.
ದೊಡ್ಡಮನಿಯವರಿಗೆ 704 ಮತಗಳು ದೊರೆತರೆ, ನಾಗೇಂದ್ರವರಿಗೆ 314 ಮತಗಳು ಬಂದವು. ಇದಲ್ಲದೇ ಪ್ರಧಾನ ಕಾರ್ಯದರ್ಶಿಗಳಾಗಿ ಶಾಂತವೀರ ತುಪ್ಪದ ಅವರು ಆಯ್ಕೆಗೊಂಡರು. ಶಾಂತವೀರ ತಮ್ಮ ಸಮೀಪ ಸ್ಪರ್ಧಿ ಶ್ರೀರಂಗ ಖೇಡಗಿಕರ್ ಅವರನ್ನು 124 ಮತಗಳಿಂದ ಪರಾಭವಗೊಳಿಸಿದರು. ಶಾಂತವೀರರಿಗೆ 335 ಮತಗಳು ಬಂದರೆ, ಶ್ರೀರಂಗರವರು 311 ಮತ ಪಡೆದರು. ಕಣದಲ್ಲಿದ್ದ ಭುಪೇಂದ್ರ ಸಿಂಗ್ ಹಜಾರೆ 144, ಪಿಎಸ್ ಮಠ 90, ಹಾಗೂ ವಿನೋದ ಜನವರಿ ಅವರು 52 ಮತಗಳನ್ನು ಪಡೆದರು.
ಸಂಘದ ಜಂಟಿ ಕಾರ್ಯದರ್ಶಿಯಾಗಿ ಪಿ.ಎನ್. ಕಪನೂರ ಅವರು ತಮ್ಮ ಸಮೀಪ ಸ್ಪರ್ಧಿ ಅರ್ಜೂನ ಕೇರೂರವರನ್ನು 115 ಮತಗಳಿಂದ ಪರಾಭವಗೊಳಿಸಿದರು. ಕಪನೂರ ಅವರು 356 ಮತಗಳನ್ನು ಪಡೆದರೆ, ಅರ್ಜುನ ಅವರಿಗೆ 241 ಮತಗಳು ದೊರೆತವು. ಅಖಾಡದಲ್ಲಿದ್ದ ಸಿದ್ದಣ್ಣ ಮರಮಕಲ್ 224, ಅಟ್ಟೂರ್ ಹಣಮಂತರಾಯ 124 ಹಾಗೂ ನಾಗೇಂದ್ರ ಪೂಜಾರಿಯವರಿಗೆ 82 ಮತಗಳು ಬಂದವು. ಸಂಘದ ಖಜಾಂಚಿಯಾಗಿ ಶಿವಲಿಂಗ ಪಡಶೆಟ್ಟಿ ಆಯ್ಕೆಯಾದರು. ಅವರು ತಮ್ಮ ಸಮೀಪ ಸ್ಪರ್ಧಿ ಮಹೇಶ ಕೊಹಿನೂರವರನ್ನು 113 ಮತಗಳಿಂದ ಸೋಲಿಸಿದರು. ಪಡಶೆಟ್ಟಿರವರಿಗೆ 481 ಮತಗಳು ಬಂದರೆ, ಕೋಹಿನೂರು 348 ಮತಗಳು ಪಡೆದರು. ಕುಶಾಲ ಕುಮಸಿ ಅವರಿಗೆ 237 ಮತಗಳು ಬಂದವು. ಚುನಾವಣಾಧಿಕಾರಿ ವಾಸುದೇವ ಅವರು ಫಲಿತಾಂಶ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಸುರೇಶ ಟೆಂಗಳಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

