ಕೊಳವೆಬಾವಿ ಸುರಕ್ಷೆ ಮರೆತ ಅಧಿಕಾರಿ ವರ್ಗ
ಹುಣಸಗಿ: ಇತ್ತೀಚಿನ ದಿನಗಳಲ್ಲಿ ಸರ್ಕಾರ ಅಥವಾ ರೈತರು ಕೊರೆಸುವ ಕೊಳವೆ ಬಾವಿಗಳ ಸುರಕ್ಷತೆಯ ಬಗ್ಗೆ ಕಿಂಚಿತ್ತೂ ಚಿಂತಿಸದಿರುವ ಅಧಿಕಾರಿಗಳ ಕುರಿತು ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಈ ಹಿಂದೆ ಕೊಳವೆ ಬಾವಿಗಳ ಅಸುರಕ್ಷತೆ ಕಾರಣ ಅನೇಕ ಮಕ್ಕಳು ತೆರೆದ ಬಾವಿಯಲ್ಲಿ ಬಿದ್ದು ಮೃತರಾದ, ಹಾಗೂ ಅವರನ್ನು ರಕ್ಷಿಸಲು ನಡೆಸಿದ ಕಾರ್ಯಾಚರಣೆ, ದಿನವಿಡಿ ದೃಶ್ಯ ಮಾಧ್ಯಮಗಳು ಬಿತ್ತರಿಸಿದ್ದನ್ನು ಸ್ಮರಿಸಬಹುದು. ಅದರಂತೆ ಇತ್ತೀಚೆಗೆ ಪ್ರತಿಯೊಂದು ಗ್ರಾಮಗಳಲ್ಲಿ ಬೇಸಿಗೆ ಹಂಗಾಮು ಗಮನದಲ್ಲಿಟ್ಟುಕೊಂಡು ಜಿಪಂ, ಗ್ರಾಪಂ ರೈತರು ಕೃಷಿ ಚಟುವಟಿಕೆಗೆ, ವೈಯಕ್ತಿಕ ಹಾಗೂ ಮನೆಯ ಉಪಯೋಗಕ್ಕಾಗಿ ಬೋರ್ವೆಲ್ ಕೊರೆಸುತ್ತಿದ್ದಾರೆ.
ನೀರು ಬಿದ್ದರೂ ಸರಿ, ಬೀಳದೆ ಇದ್ದರೂ ಸರಿ, ನಂತರ ಹಲವು ದಿವಸ, ತಿಂಗಳು, ವರ್ಷಗಳ ನಂತರ ಬೋರ್ವೆಲ್ ಕೊರೆಸಿದ ಸ್ಥಳದಲ್ಲಿನ ಹಳ್ಳವನ್ನು ಹಾಗೆಯೇ ಬಿಟ್ಟುಬಿಡುವ ಪರಿಪಾಠ ಮುಂದುವರಿದಿದೆ. ಅದಕ್ಕೆ ತಾಜಾ ಉದಾಹರಣೆ ಅಂದರೆ ಹುಣಸಗಿ ಯುಕೆಪಿ ಕ್ಯಾಂಪಿನ ಬಿಎಎನ್ಎಲ್ ಕಚೇರಿಯ ಸಮೀಪದಲ್ಲಿಯೆ ಬೋರ್ವೆಲ್ ಕೊರೆಯಲಾಗಿದೆ.
ಸಣ್ಣ ಮಕ್ಕಳಿದ್ದಾವೆ...ಅಲ್ಲಿಯ ನಿವಾಸಿಗಳ ಮನೆಯಲ್ಲಿ ಸಣ್ಣ ಮಕ್ಕಳಿದ್ದು, ಈ ಅಪಾಯದ ಕುರಿತು ಕ್ಯಾಂಪ್ ನಿರ್ವಹಣಾ ಅಧಿಕಾರಿಗಳಿಗೆ ಹೇಳಿದರೂ ಕೂಡಾ ಲಕ್ಷ್ಯಕ್ಕೆ ತೆಗೆದುಕೊಳ್ಳುತ್ತಿಲ್ಲಾ ಎಂದು ನಾಗರಿಕರು ದೂರಿದ್ದಾರೆ.
ಬೋರ್ ಕೊರೆದು ಬಳಕೆ ಮಾಡದೆ, ಹಾಗೆಯೆ ತೆರೆದು ಕೇವಲ ಅದರ ಮೇಲೊಂದು ಕಲ್ಲು ಇಟ್ಟಿರುವುದು ನಾಗರಿಕರ ನಿದ್ದೆಗೆಡಿಸಿದೆ.
ಮೈ ನಡುಕ..: ಇತ್ತೀಚೆಗೆ ಹುಣಸಗಿ ಯುಕೆಪಿ ಕ್ಯಾಂಪಿನಲ್ಲಿ ಕುಡಿಯುವ ನೀರಿನ ಅನೂಕೂಲಕ್ಕಾಗಿ ಯುಕೆಪಿ ಕ್ಯಾಂಪಿನ ಹಲವು ಕಡೆ ಬೋರವೆಲ್ ಕೊರೆಯಲಾಗಿದೆ. ಅಲ್ಲಿ ಸಮೀಪದ ಮನೆಗಳಲ್ಲಿ ಎರಡು ಮೂರು ವರುಷದ ಮಕ್ಕಳು ಇದ್ದು ಈ ಹಿಂದೆ ನಡೆದ ಬೋರವೆಲ್ಗಳ ದುರಂತ ಗಮನಿಸಿದರೆ ಮೈ ನಡುಕವಾಗುತ್ತದೆ ಎಂದು ಗೃಹಿಣಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಉಪಯೋಗ ಮಾಡೋವರೆಗೆ ಮುಚ್ಚಿ..: ನಮಗೆ ಕ್ಯಾಂಪಿಗೆ ಕುಡಿಯುವ ನೀರಿನ ಅನೂಕೂಲ ಬೇಕೆ ಬೇಕು. ಆದಕ್ಕೆ, ಸದ್ಯ ಕೊರೆದಿರುವ ಬೋರವೆಲ್ಗಳನ್ನು ಉಪಯೋಗ ಮಾಡುವವರೆಗೂ ಅವುಗಳನ್ನು ಪೂರ್ತಿಯಾಗಿ, ಮಕ್ಕಳಿಗೆ ಅಪಾಯವಾಗದಂತೆ ತಾತ್ಕಾಲಿಕವಾಗಿ ಮುಚ್ಚಬೇಕು ಎಂದು ಕ್ಯಾಂಪಿನ ನಿವಾಸಿಗಳು ಆಗ್ರಹಿಸಿದ್ದಾರೆ.
ಅನೇಕ ಕಡೆ ರೈತರು ಕೂಡಾ ಹಾಕಿದ ಬೋರವೆಲ್ಗಳು ಕೂಡ ತೆರೆದ ಸ್ಥಿತಿಯಲ್ಲಿ ಇವೆ. ಈ ಬಗ್ಗೆ ಪೋಲಿಸ್ ಇಲಾಖೆ, ಗ್ರಾಪಂ, ಯುಕೆಪಿ ಅಧಿಕಾರಿಗಳು ಬರುವ ಅಪಾಯವನ್ನು ತಡೆಯುವ ಎಲ್ಲ ಪ್ರಯತ್ನ ಮಾಡಲಿ ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

