ಪಿಡಿಒ ಮೇಲಿನ ಹಲ್ಲೆ ಖಂಡಿಸಿ ಪತ್ರಿಭಟನೆ
ಯಾದಗಿರಿ: ಚಿತ್ತಾಪುರ ತಾಲೂಕಿನ ಭೀಮನಳ್ಳಿ ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದುದನ್ನು ಖಂಡಿಸಿ ಜಿಲ್ಲಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನೌಕರರ ಸಂಘ ಮೌನ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಬಸವಣ್ಣಯ್ಯ ಉಮಚಿಗಿಮಠ ಮಾತನಾಡಿ, ಪಿಡಿಒ ಮೇಲೆ ರಾಜಕೀಯ ಪುಢಾರಿಗಳು ಇಒ ಎದುರಿನಲ್ಲಿಯೇ ಮಾರಣಾಂತಿಕ ಹಲ್ಲೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪಿಡಿಒಗಳಾದ ಮಲ್ಲಿಕಾರ್ಜುನ ಸಂಗವಾರ, ಮಹಾದೇವಪ್ಪ, ಶರಣಪ್ಪ ಮೈಲಾರಿ, ಪ್ರಶಾಂತ ಎಚ್.ಎಲ್, ಹನುಮಂತರಾಜ್, ಶೋಭಾ ಶಾಂತಪ್ಪ, ಗಾಯತ್ರಿ ತೆಗ್ಗಿಹಳ್ಳಿ, ವಿಜಯಲಕ್ಷ್ಮಿ, ಭೀಮರಾಯ, ಕಾರ್ಯದರ್ಶಿಗಳಾದ ಶ್ರೀಮಂತ, ವಿಶ್ವನಾಥ ಮೋಟಗಿ, ಚನಬಸಪ್ಪ, ಲೆಕ್ಕ ಸಹಾಯಕ ಮತ್ತು ಸಂಘದ ಸಂಘಟನಾ ಖಜಾಂಚಿ ಮಹ್ಮದ ಅಲಿ ಜಮಾದಾರ ಮತ್ತಿತರರು ಪಾಲ್ಗೊಂಡಿದ್ದರು.
ಚುನಾವಣೆ ನೀತಿ ಸಂಹಿತೆ ಸಡಿಲಗೊಳಿಸಲು ಗದ್ದುಗೆ ಮನವಿ
ಯಾದಗಿರಿ: ರಾಜ್ಯ ಚುನಾವಣಾ ನೀತಿ ಸಂಹಿತೆಯ ಕುರಿತು ಹಲವಾರು ಪ್ರಮುಖ ಅಂಶಗಳ ಬದಲಾವಣೆ ಮಾಡುವಂತೆ ಆಗ್ರಹಿಸಿ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನೀಲಕುಮಾರ ಝಾ ಅವರಿಗೆ ಉತ್ತರ ಕರ್ನಾಟಕದ ಕರವೇ ಅಧ್ಯಕ್ಷ ಶರಣು ಬಿ.ಗದ್ದುಗೆ ಮನವಿ ಸಲ್ಲಿಸಿದರು. ಅವುಗಳಲ್ಲಿ ಪ್ರಮುಖವಾಗಿ ಜನಪ್ರತಿನಿಧಿಗಳಾದವರು ಐದು ವರ್ಷಗಳ ಅವಧಿಗೆ ಯಾವ ಪಕ್ಷದಿಂದ ಮತ್ತು ಯಾವ ಸ್ಥಾನದಿಂದ (ವಿಧಾನಸಭೆ ಅಥವಾ ಲೋಕಸಭೆ) ಆಯ್ಕೆಯಾಗಿ ಹೋಗಿರುತ್ತಾರೆ ಅವಧಿ ಮುಗಿಯುವವರೆಗೆ ಅಲ್ಲಿಯೇ ಉಳಿಯತಕ್ಕದ್ದು. ಅವಧಿ ಮುಗಿಯುವವರೆಗೆ ಪಕ್ಷಾಂತರ ಮಾಡುವ ಅವಕಾಶ ನೀಡಬಾರದು. ಹಾಗೇನಾದರು ಪಕ್ಷಾಂತರ ಮಾಡಿ ಚುನಾವಣೆಗೆ ಅವಕಾಶ ಮಾಡಿಕೊಟ್ಟಂತ ಸಂದರ್ಭ ಬಂದಾಗ ಆ ಅಭ್ಯರ್ಥಿಯೇ ಚುನಾವಣಾ ಸಂಪೂರ್ಣ ಖರ್ಚು-ವೆಚ್ಚ ಭರಿಸುವಂತಾಗಬೇಕು. ಜನಸಾಮಾನ್ಯರಿಗೆ ಚುನಾವಣಾ ವೆಚ್ಚದಿಂದ ಹೊರಬರುವಂತಾಗಬೇಕು. ಅಲ್ಲದೆ ಚುನಾವಣೆ ಮತದಾನ ಮುಗಿದ ಮರುದಿನದಿಂದ ನೀತಿಸಂಹಿತೆಯನ್ನು ಆದಷ್ಟು ಸಡಿಲಿಸತಕ್ಕದ್ದು ಅಂದಾಗ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಕ್ಕಂತಾಗುತ್ತದೆ ಎಂದು ಹಲವು ಹತ್ತು ಅಂಶಗಳ ಕುರಿತು ಮನವಿಪತ್ರ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

