ಬಾಬಾ ರಾಮದೇವ ಹೇಳಿಕೆ ಖಂಡಿಸಿ ಡಿಎಸ್‌ಎಸ್ ಪ್ರತಿಭಟನೆ
ಯಾದಗಿರಿ: ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ದಲಿತರ ಕೇರಿಗಳಲ್ಲಿ ಹನಿಮೂನ್ ನಡೆಸಲು ಹೋಗುತ್ತಾರೆ ಎಂಬ ಬಾಬಾ ರಾಮ್‌ದೇವ ಗುರೂಜಿ ಅವರ ವಿವಾದಾತ್ಮಕ ಹೇಳಿಕೆಯನ್ನು ಇಲ್ಲಿನ ದಲಿತಪರ ಸಂಘಟನೆಗಳು ಖಂಡಿಸಿ ನಗರದ ಡಾ. ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ರಸ್ತೆತಡೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಪ್ರಭು ಬೊಮ್ಮನ್, ಚುನಾವಣೆಗಳಂತಹ ಸಂದರ್ಭದಲ್ಲಿ ರಾಜಕೀಯ ಮುಖಂಡರುಗಳ ಬಗ್ಗೆ ಹೇಳಿಕೆ ನೀಡುವುದನ್ನು ಸ್ವಾಮಿಜಿಗಳು ನಿಲ್ಲಿಸಬೇಕಿದೆ. ರಾಮ್‌ದೇವ ಗುರೂಜಿ ಅವರು ರಾಹುಲ್ ಗಾಂಧಿ ದಲಿತ ಕೇರಿಗಳಿಗೆ ಹನಿಮೂನ್ ನಡೆಸಲು ಹೋಗುತ್ತಾರೆ. ದೇಶದಲ್ಲಿನ ಇಡೀ ದಲಿತ ಸಮುದಾಯಕ್ಕೆ ಬಗೆದ ಅಪಮಾನವಾಗಿದೆ. ಈ ರೀತಿ ವಿವಾದಾತ್ಮಕ ಹೇಳಿಕೆ ಕೊಡುವ ಮೊದಲು ಯೋಚಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಯುವ ಮುಖಂಡ ಮಲ್ಲಿನಾಥ ಸುಂಗಲಕರ್ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಬಾಬಾ ರಾಮದೇವ್, ದಲಿತರಿಗೆ ಅಪಮಾನ ಮಾಡಿದ್ದಾರೆ. ಅವನ್ನು ಕೂಡಲೆ ಬಂಧಿಸಿ, ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು. ಮುಖಂಡರಾದ ಮಲ್ಲಿಕಾರ್ಜುನ ಈಟೆ, ಶಿವಯೋಗಿ ಬಂಢಾರಿ, ಬುಗ್ಗಪ್ಪ ಅರಿಕೇರಾ, ಶರಣಪ್ಪ ಕೂಲೂರ, ಶಿವುಕುಮಾರ, ಚಂದ್ರು, ಚಂದ್ರಶೇಖರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

