ಗುಲ್ಬರ್ಗಾ

ನವೀಕರಣ ನೆಪದಲ್ಲಿ ಅಕ್ರಮ ಮರಳು ಸಾಗಣೆ: ದೂರು

Published On :


ಶಹಾಪುರ: ಕಾಲುವೆ ನವೀಕರಣ ನೆಪದಲ್ಲಿ ಮರಳು ಮಾಫಿಯಾದಲ್ಲಿ ತೊಡಗಿಸಿಕೊಂಡವರು ಅನ್ಯ ಜಿಲ್ಲೆ, ರಾಜ್ಯಗಳಿಗೆ ಮರಳು ಸಾಗಾಟ ಮಾಡುತ್ತಿದ್ದರೂ ಜಿಲ್ಲಾಡಳಿತ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿರುವ ಬಿಜೆಪಿ ರೈತ ಮೋರ್ಚಾ, ಸೂಕ್ತ ಕ್ರಮಕ್ಕಾಗಿ ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದೆ.
  ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಸಂಘಟನಾ ಕಾರ್ಯದರ್ಶಿ ಯಲ್ಲಯ್ಯ ನಾಯಕ ಶಹಾಪುರ ತಾಲೂಕಿನಲ್ಲಿ ರಾಜಾರೋಷವಾಗಿ ಮರಳು ಸಾಗಣೆ ಮಾಡಿದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಸಹಾಯಕ ರೀತಿಯಲ್ಲಿದೆ. ಕಾಲುವೆ ನವೀಕರಣಕ್ಕೆ ಮರಳು ಬೇಕು. ಆದರೆ ಅದರ ನೆಪದಲ್ಲಿ ಬೇರೆ ಬೇರೆ ಕಡೆ ಮರಳು ಸಾಗಾಟವಾಗುತ್ತಿದ್ದು ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಅಧಿಕಾರಿಗಳು ಈ ಕುರಿತು ಕೂಡಲೇ ಗಮನಹರಿಸಿ ಮರಳು ಸಾಗಾಣಿಕೆಗೆ ನಿರ್ಬಂಧ ಹೇರಬೇಕೆಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
  ಡಾ. ಮಲ್ಲನಗೌಡ ಉಕ್ಕನಾಳ, ಶಾಂತಕುಮಾರ ಹಿರೇಮಠ, ಆರ್.ಚನ್ನಬಸ್ಸು ವಕೀಲರು, ನಾಗಣ್ಣ ಸಾಹು ಚಿಂಚೋಳಿ, ಬಸವರಾಜ ಅರುಣಿ, ಸಾಯಬಣ್ಣ ಪುರ್ಲೆ, ಮಲ್ಲಿಕಾರ್ಜುನ ಚಿಲ್ಲಾಳ, ಬಸಯ್ಯಸ್ವಾಮಿ ಯಕ್ತಾಪುರ, ಶರಭಣ್ಣ ರಸ್ತಾಪುರ, ದೇವಿಂದ್ರಪ್ಪ ಕೋನೇರ, ಸೋಫಿ ಸಾಬ ಜಮಾದಾರ, ರಾಮಣ್ಣಗೌಡ ಚಿತ್ತರಿಗಿ, ತ್ರಿಶೂಲ ಹವಾಲ್ದಾರ, ಚಂದ್ರು ಯಾಳಗಿ, ಮಂಜುನಾಥ ಗಂಗಾಧರಮಠ, ಗುರು ಅಣಬಿ, ನಯಿಮ ಅಫಗಾನ, ತಿಪ್ಪಣ್ಣ, ರಮೇಶ ಹೆಗ್ಗಣದೊಡ್ಡಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.