ಗುಲ್ಬರ್ಗಾ

ವಾರಕ್ಕೆ ಕಾಲಿಟ್ಟ ಕಾರ್ಖಾನೆ ಕಾರ್ಮಿಕರ ಧರಣಿ

Published On :

ಆಳಂದ: ಸಕ್ಕರೆ ಕಾರ್ಖಾನೆಯ ಗುತ್ತಿಗೆ ಆಧಾರ ಮೇಲೆ ನಡೆಸುತ್ತಿರುವ ಎನ್‌ಎಸ್‌ಎಲ್ ಕಾರ್ಖಾನೆ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗೆ ಒತ್ತಾಯಿಸಿ ಆರಂಭಿಸಿದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಾಹ ಭಾನುವಾರ 7ನೇ ದಿನಕ್ಕೆ ಕಾಲಿಟ್ಟಿದೆ.
  ಶಾಸಕ ಬಿ.ಆರ್. ಪಾಟೀಲ ಭಾನುವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಸಂಬಂಧಿತ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಡಳಿತ ಮಧ್ಯಸ್ಥಿಕೆ ಇರಲಿ: ಸ್ಥಳಕ್ಕೆ ಶನಿವಾರ ಜಿಪಂ ಸದಸ್ಯೆ ಪೂಜಾ ರಮೇಶ ಮತ್ತು ಬಿಜೆಪಿ ತಾಲೂಕು ಅಧ್ಯಕ್ಷ ರಮೇಶ ಲೋಹಾರ ಅವರು ಭೇಟಿ ನೀಡಿ ಕಾರ್ಮಿಕರ ನ್ಯಾಯಯುತ ಬೇಡಿಕೆಗಳಾಗಿದ್ದು, ಕೂಡಲೇ ಜಿಲ್ಲಾಡಳಿತ ಮಧ್ಯಸ್ಥಿಕೆ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಬೇಡಿಕೆ ಈಡೇರಿಸಲು ಹಿಂದೆಟ್ಟು ಹಾಕಿದರೆ ಕಾರ್ಮಿಕರು ಕೈಗೊಳ್ಳುವ ಎಲ್ಲ ಹೋರಾಟಕ್ಕೆ ಬೆಂಬಲ ನೀಡಲಾಗುವುದು. ಈ ಕುರಿತು ಜಿಪಂ ಸಭೆಯಲ್ಲಿ ಹಾಗೂ ಸರ್ಕಾರದ ಗಮನ ಸೆಳೆಯಲಾಗುವುದು, ಕಾರ್ಮಿಕರು ತಮ್ಮ ಹಕ್ಕಿಗಾಗಿ ಸಂಘಟಿತವಾಗಿ ಹೋರಾಟ ಮುಂದುವರೆಸಬೇಕು ಎಂದು ಧೈರ್ಯ ತುಂಬಿದರು. ಮುಖಂಡ ಮಲ್ಲಿಕಾರ್ಜುನ ಕಂದಗುಳೆ, ಯುವ ಮೋರ್ಚಾ ಅಧ್ಯಕ್ಷ ರಾಜು ಕೋರೆ ಮತ್ತಿತರು ಬೆಂಬಲಿಸಿದರು.
ಹಿತ ಕಾಪಾಡಲು ವಿಫಲ: ಸಿಐಟಿಯು ಸಂಘಟನೆಯ ರಾಜ್ಯ ಮುಖಂಡ ಪ್ರಭುದೇವ ಯಳಸಂಗಿ ಮಾತನಾಡಿ, ಕಂಪನಿಗಳು ಕಾರ್ಮಿಕರ ಹಿತ ಕಾಪಾಡಲು ವಿಫಲವಾಗಿವೆ. ಕೂಡಲೇ ಬೇಡಿಕೆ ಈಡೇರಿಸಬೇಕು ಎಂದರು. ನಂತರ ಎನ್‌ಎಸ್‌ಎಲ್ ಆಡಳಿತ ಮಂಡಳಿ  ಕಚೇರಿಯಲ್ಲಿ ಉಪಾಧ್ಯಕ್ಷ ರಾಮಮೂರ್ತಿ ಎಂ, ಹಿರಿಯ ವ್ಯವಸ್ಥಾಪಕ ಮಾನವ ಅಭಿವೃದ್ಧಿ ವಿಭಾಗದ ಅರುಣಕುಮಾರ ಅವರೊಂದಿಗೆ ಜಿಪಂ ಸದಸ್ಯೆ ಪೂಜಾ ರಮೇಶ ಹಾಗೂ ರಮೇಶ ಲೋಹಾರ, ಕಾರ್ಖಾನೆ ಕಾರ್ಮಿಕ ಸಂಘದ ಅಧ್ಯಕ್ಷ ಕೃಷ್ಣಾ ಟಿಕೋಳೆ ಮಾತುಕತೆ ನಡೆಯಿತು.
  ಕಾರ್ಮಿಕರ ಶ್ರಮದಿಂದ ಲಾಭ ಪಡೆದು ಅವರಿಗೆ ಸೌಲಭ್ಯಗಳು ನೀಡಲು ಹಿಂದೆಟು ಹಾಕಬೇಡಿ, ಧರಣಿ ಸ್ಥಳಕ್ಕೆ ಭೇಟಿ ಕೊಟ್ಟು ಮಾನವೀಯತೆ ತೋರದೆ ಇರುವುದು ಆಡಳಿತ ಮಂಡಳಿಯ ನಿರ್ಲಕ್ಷ್ಯ ಸರಿಯಲ್ಲ ಎಂದು ಲೋಹಾರ ಗಡುಗಿದರು.
  ಬೇಡಿಕೆ ಕುರಿತು ಉನ್ನತ ಮಟ್ಟದ ಆಡಳಿತ ಮಂಡಳಿಯ ಗಮನಕ್ಕೆ ತರಲಾಗುವುದು ಎಂದು ಉಪಾಧ್ಯಕ್ಷ ರಾಮಮೂರ್ತಿ ಮತ್ತು ವ್ಯವಸ್ಥಾಪಕ ಅರುಣ ಹೇಳಿದರು.
   ಭರವಸೆ ಕೊಟ್ಟರೆ ಮಾತ್ರ ಧರಣಿ ವಾಪಸ್ ಪಡೆಯಲಾಗುತ್ತದೆ. ಇಲ್ಲವಾದಲ್ಲಿ ಬುಧವಾರ ಕಾರ್ಖಾನೆಗೆ ಬೀಗ ಹಾಕಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಟಿಕೋಳೆ ಎಚ್ಚರಿಸಿದರು.  
ಮುಖಂಡರ ಬೆಂಬಲ: ಕಾರ್ಮಿಕರ ಧರಣಿ ಸತ್ಯಾಗ್ರಹಕ್ಕೆ ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ದಿನಗೂಲಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಜಿಲ್ಲಾ ರೈತ ಮುಖಂಡ ಮೌಲಾ ಮುಲ್ಲಾ, ಕಬ್ಬು ಬೆಳೆಗಾರರ ಮುಖಂಡ ಧರ್ಮರಾಜ ಸಾಹು, ಶಾಂತಮಲ್ಲಪ್ಪಾ ನೆಲ್ಲೂರ, ರೇವಣಿಸಿದ್ಧಪ್ಪಾ ಪಟ್ನೆ ಮತ್ತಿತರ ಮುಖಂಡರು ಭೇಟಿ ನೀಡಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.