ಮರೆಯಾಗುತ್ತಿರುವ ಬಸವೇಶ್ವರರ ಭಾವಚಿತ್ರ
ಶಹಾಪುರ: ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿಯ ಶಹಾಪುರ ಪಟ್ಟಣದಲ್ಲಿ ಪ್ರಮುಖ ವೃತ್ತವೊಂದಕ್ಕೆ ಬಸವೇಶ್ವರ ಚೌಕ್ ಎಂದು ನಾಮಕರಣ ಮಾಡಿ ಹಲವಾರು ವರ್ಷಗಳೇ ಗತಿಸಿ ಹೋಗಿವೆ. ಆದರೆ ಈವರೆಗೆ ಬಸವೇಶ್ವರರ ಪ್ರತಿಮೆಯನ್ನು ಸ್ಥಾಪಿಸುವ ಕೆಲಸ ಆಗಿಲ್ಲ. ಇದೀಗ ಪ್ರತಿಮೆಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಇತ್ತೀಚಿನ ದಿನಳಲ್ಲಿ ಈ ವೃತ್ತ ಅನ್ಯ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ ಎಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ. ಇತ್ತೀಚೆಗೆ ತಾಲೂಕಿನ ಸಗರ ಗ್ರಾಮದ ಯೋಧನೊಬ್ಬ ದೇಶದ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಸೈನಿಕರ ಗುಂಡಿಗೆ ಬಲಿಯಾದ. ಆತನ ಪ್ರತಿಕೃತಿಯನ್ನು ಚೌಕ್ನಲ್ಲಿ ಇಟ್ಟು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದರೇ ಎನ್ನುವಂತೆ ನಗರದಲ್ಲಿ ಈಗ ಯಾರೇ ನಿಧನ ಹೊಂದಿದರೂ ಅವರ ಭಾವಚಿತ್ರವನ್ನು ಚೌಕ್ನಲ್ಲಿನ ವಿದ್ಯುದ್ದೀಪದ ಕಂಬಕ್ಕೆ ಕಟ್ಟುತ್ತಾರೆ. ಈ ಅರ್ಭಟದಲ್ಲಿ ಬಸವೇಶ್ವರರ ಭಾವಚಿತ್ರ ಮೂಲೆಗುಂಪಾಗುತ್ತಿದೆ ಎಂದು ಪ್ರಜ್ಞಾವಂತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕಾಯಕ-ದಾಸೋಹ ಹಾಗು ಅನುಭವ ಮಂಟಪದ ಪರಿಕಲ್ಪನೆಯನ್ನು ನೀಡಿದ ಬಸವೇಶ್ವರರ ಹೆಸರಿನ ಚೌಕ್ನಲ್ಲಿ ಅವರ ಭಾವಚಿತ್ರವನ್ನೇ ಮರೆಮಾಡಿ ಸತ್ತವರ ಫ್ಲೆಕ್ಸ್ಗಳನ್ನು ತೂಗು ಹಾಕುವುದು ಸರಿಯಾದ ಕ್ರಮವಲ್ಲ ಎಂದು ಬಸವಾಭಿಮಾನಿಗಳು ನೊಂದು ನುಡಿಯುತ್ತಾರೆ.
ಸ್ಥಳೀಯ ಪುರಸಭೆ ಹಾಗು ಪೋಲಿಸ್ ಇಲಾಖೆಗೆ ಮೌಖಿಕವಾಗಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನಸಾಮಾನ್ಯರಲ್ಲಿ ಚರ್ಚೆಗೆ ಕಾರಣವಾಗಿರುವ ಈ ವಿಷಯದ ಬಗ್ಗೆ ತಕ್ಷಣ ಸ್ಪಂದಿಸಿಬೇಕೆಂದು ಪಟ್ಟಣದ ಹಿರಿಯ ನಾಗರಿಕರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

