ಅಧಿಕಾರಿಗಳ ವರ್ತನೆಗೆ ಕೇಂದ್ರ ಸಚಿವ ಖರ್ಗೆ ಅಸಮಾಧಾನ
ಗುರುಮಠಕಲ್: ಪಟ್ಟಣದಲ್ಲಿ ಲೋಕೊಪಯೋಗಿ ಬಂದರು ಹಾಗೂ ಒಳನಾಡು ಜಲ ಸಾರಿಗೆ ಇಲಾಖೆ ವತಿಯಿಂದ ಸುಮಾರು ರು. 1ಕೋಟಿ 40 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಿಸಿದ ನೂತನ ಸಕ್ಯೂಟ್ ಹೌಸ್ ಕಟ್ಟಡದ ಉದ್ಘಾಟನಾ ಫಲಕದಲ್ಲಿ ತಮ್ಮ ಹೆಸರನ್ನು ಪೋರ್ಟ್ಕಾಲಿನ ಪ್ರಕಾರ ಹಾಕದೆ, ತಮ್ಮನ್ನು ಅವಮಾನಿಸಲಾಗಿದೆ ಎಂದು ಕೇಂದ್ರ ರೇಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಅಧಿಕಾರಿಗಳ ವಿರುದ್ಧ ಗರಂ ಆದರು.
ನೂತನವಾಗಿ ನಿರ್ಮಿಸಿದ್ದ ಸರ್ಕ್ಯೂಟ್ ಹೌಸ್ನ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಅಗಮಿಸಿದ ರೇಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಪೋರ್ಟ್ಕಾಲ್ ಪ್ರಕಾರ ಮುಖ್ಯ ಮಂತ್ರಿಗಳಾದ ನಂತರದಲ್ಲಿ ಹಾಕಬೇಕಾಗಿತ್ತು ಅದರೆ ಅದನ್ನು ಬಿಟ್ಟು ಕೇಂದ್ರ ಸಚಿವರ ಹೆಸರುಗಳನ್ನು ಬಿಟ್ಟು ಮುಖ್ಯ ಮಂತ್ರಿಗಳ ಹೆಸರಿನ ನಂತರ ಗುರುಮಠಕಲ್ ಶಾಸಕ ಬಾಬುರಾವ್ ಚಿಂಚನಸೂರ ಅವರ ಹೆಸರು ಹಾಕಿದ ನಂತರ ವೀರಪ್ಪ ಮೋಯ್ಲಿ ಹಾಗೂ ಹಾಗೂ ಖರ್ಗೆಯವರ ಹೆಸರನ್ನು ನಾಲ್ಕನೇ ಸಾಲಿನಲ್ಲಿ ಹಾಕಿರುವುದು ಅವರ ಅಸಮಾಧಾನಕ್ಕೆ ಕಾರಣವಾಯಿತು.
ತರಾಟೆ: ಉದ್ಘಾಟನೆಯ ನಾಮಫಲಕವನ್ನು ಮುಖ್ಯಮಂತ್ರಿಗಳು ಉದ್ಘಾಟನೆ ಮಾಡುತ್ತಿದ್ದಂತೆ, ತಮ್ಮ ಹೆಸರನ್ನು ನಾಲ್ಕನೇ ಸಾಲಿನಲ್ಲಿ ಹಾಕಿರುವುದನ್ನು ಗಮನಿಸಿ, ಅಲ್ಲಿಯೇ ಇದ್ದ ಇಲಾಖೆಯ ಹಿರಿಯ ಎಂಜಿನಿಯರ್ ಶಿವಶರಣಪ್ಪ ಗುರಗುಂಟಿ ಅವರನ್ನು ತರಾಟೆಗೆ ತೆಗೆದುಕೊಂಡ ಖರ್ಗೆ ನಿಮಗೆ ಪೋರ್ಟ್ಕಾಲ್ ಪ್ರಕಾರ ಹೆಸರುಗಳನ್ನು ಹಾಕುವುದು ಗೊತ್ತಿಲ್ಲವೆ ಎಂದು ತರಾಟೆಗೆ ತೆಗೆದುಕೊಂಡರು. ಖರ್ಗೆ ಗರಂ ಅಗುತ್ತಿದ್ದಂತೆ 3 ಜಿಲ್ಲೆಗಳ ಉಸ್ತುವಾರಿ ಸಚಿವರಾದ ಶರಣ ಪ್ರಕಾಶ ಪಾಟೀಲ್ ಸೇಡಂ, ಖಮರುಲ್ ಇಸ್ಲಾಂ, ಬಾಬೂರಾವ್ ಚಿಂಚನಸೂರ ಹಾಗೂ ಅಲ್ಲಂಪ್ರಭು ಪಾಟೀಲ್ ಸೇರಿದಂತೆ ಪಕ್ಷದ ಮುಖಂಡರು ತಮ್ಮ ಹೆಜ್ಜೆಯನ್ನು ಹಿಂದಕ್ಕೆ ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

