ಕೆ - ಸೆಟ್ ಅವಾಂತರ; ಪರೀಕ್ಷೆ ಬರೆದೋರು ತತ್ತರ!
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.9
ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕರ್ನಾಟಕ ಸ್ಟೇಟ್ ಎಲಿಜಿಬಲಿಟಿ ಟೆಸ್ಟ್- ಕೆ ಸೆಟ್) ಯ ರಾಜ್ಯಶಾಸ್ತ್ರ (ಪೊಲಿಟಿಕಲ್ ಸೈನ್ಸ್) ವಿಷಯದ ಪರೀಕ್ಷೆ ಬರೆದಿರುವ ಏಳು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಇದೀಗ ಕಂಗಾಲಾಗಿದ್ದಾರೆ.
ಏಕೆಂದರೆ ಯುಜಿಸಿ ಆದೇಶದಂತೆ ಕೆ ಸೆಟ್ ಪರೀಕ್ಷೆ ನಡೆಸಿರುವ ಮೈಸೂರು ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ 2 ಮತ್ತು 3ನೇ ಪತ್ರಿಕೆಗಳಲ್ಲಿ ಹತ್ತಕ್ಕೂ ಹೆಚ್ಚು ತಪ್ಪು ಉತ್ತರಗಳನ್ನೇ ಸರಿ ಎಂದು ಮಾದರಿ ಉತ್ತರ (ಕೀ ಆನ್ಸರ್ ಶೀಟ್) ಪತ್ರವನ್ನು ಅಂತಿಮವಾಗಿ ಅಂತರ್ಜಾಲದಲ್ಲಿ ಪ್ರಕಟಿಸಿದೆ. ಈ ಬೆಳವಣಿಗೆಯೇ ಪರೀಕ್ಷೆ ಬರೆದ ಅಭ್ಯರ್ಥಿಗಳ ನೆಮ್ಮದಿಹರಣ ಮಾಡಿದೆ.
ಮಾದರಿ ಉತ್ತರ ಪತ್ರಿಕೆಯಲ್ಲಿ ನಮೂದಾಗಿರುವ ಉತ್ತರಗಳಿಗೆ ಅನುಸಾರವಾಗಿಯೇ ಪತ್ರಿಕೆಗಳ ಮೌಲ್ಯಮಾಪನ ಸಾಗುವುದರಿಂದ ಕೀ ಉತ್ತರ ಪತ್ರಿಕೆಯಲ್ಲೇ ತಪ್ಪುಗಳಿದ್ದರೂ ಅವುಗಳನ್ನು ಸರಿಪಡಿಸಲು ಕೆ ಸೆಟ್ ಪರೀಕ್ಷೆ ನಡೆಸಿರುವ ಮೈಸೂರು ವಿವಿ ಯಾಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ.
2013ರ ಡಿ.8 ರಂದು ನಡೆದ ಕೆ ಸೆಟ್ನ ರಾಜ್ಯಶಾಸ್ತ್ರ ವಿಷಯದಲ್ಲಿ 7 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆದರೀಗ ಅವರೆಲ್ಲರೂ ಯಾವ ಉತ್ತರ ಸರಿ, ಯಾವುದು ತಪ್ಪು ಎಂಬ ಗೊಂದಲದಲ್ಲಿದ್ದಾರೆ. ಏಕೆಂದರೆ ಕೆ ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣಕ್ಕೆ ಅಂಕ ನಿಗದಿಯಾಗಿಲ್ಲ. ಅತ್ಯಂತ ಹೆಚ್ಚಿನ ಅಂಕ ಪಡೆದ ಮೊದಲ 15 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಫಲಿತಾಂಶ ಘೋಷಿಸಲಾಗುತ್ತದೆ. ಹೀಗಾಗಿ ಈ ಪರೀಕ್ಷೆಗೆ ಹೆಚ್ಚಿನ ಮಹತ್ವ. ಇಲ್ಲಿ ಒಂದೊಂದು ಅಂಕವೂ ಅಭ್ಯರ್ಥಿಗೆ ಮಹತ್ವದ್ದಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕೀ ಆನ್ಸರ್ ಶೀಟ್ನಲ್ಲಿ ತಪ್ಪುಗಳೇ ಕಂಡಿದ್ದರಿಂದ ಅದೆಲ್ಲಿ ಅಂಕಗಳು ಕೈತಪ್ಪಿ ಹೋಗುತ್ತವೆಯೋ ಎಂಬ ಭೀತಿ ಆವರಿಸಿದೆ.
ಸಾಲು ಸಾಲು ತಪ್ಪುಗಳು: ಪರೀಕ್ಷೆ ಬರೆದ ಎಂ.ಎಸ್. ಭಾಸಗಿ ಎಂಬುವರು “OÚ«ÚsÚ®ÚúڒOæQ ಕೆ ಸೆಟ್ ಪ್ರಶ್ನೆ ಪತ್ರಿಕೆ, ತಾವು ಸಲ್ಲಿಸಿದ ಆಕ್ಷೇಪಣೆ ಹಾಗೂ ಕೀ ಆನ್ಸರ್ ಶೀಟ್ನಲ್ಲಿ ಮರುಕಳಿಸಿದ ತಪ್ಪುಗಳ ಬಗ್ಗೆ ದಾಖಲೆ ಸಮೇತ ಮಾಹಿತಿ ವಿವರಗಳು ಇಲ್ಲಿವೆ.
ರಾಜ್ಯಶಾಸ್ತ್ರ- 2ನೇ ಪತ್ರಿಕೆ: ಪ್ರಶ್ನೆ- 17) ತೌಲನಿಕ ರಾಜಕೀಯ ಸಾಂಪ್ರದಾಯಿಕ ವಿಧಾನವು ಈ ಕೆಳಗಿನ ಅಂಶಗಳನ್ನು ಉಪೇಕ್ಷಿಸಿತ್ತು. ಬಿ) ಸಂಸ್ಥೆಗಳ ಕುರಿತಾದ ವಿವರಣೆ ಎಂಬುದು ಮಾದರಿ ಉತ್ತರ ಪತ್ರಿಕೆಯ ಉತ್ತರ. ಆದರೆ ಇದು ತಪ್ಪು ಎನ್ನುತ್ತಾರೆ ಭಾಸ್ಗಿ. ಕಂಪೇರಿಟಿವ್ ಪಾಲಿಟಿಕ್ಸ್ ಮತ್ತು ಗೋವಾ (ಯೂಆರ್ ಗಾಯ್ ಬರೆದ ಪುಸ್ತಕ) ಕೃತಿಯ ಆಧಾರದಲ್ಲಿ ಸಾಂಪ್ರದಾಯಿಕ ತೌಲನಿಕ ವಿಧಾನವು ಸಂಸ್ಥೆಗಳ ಕುರಿತಾದ ವಿವರಣೆ ಮಾಡುತ್ತಿತ್ತು. ಪ್ರಾಯೋಗಿಕ ಸಂಶೋಧನೆಗಳನ್ನು ಮಾಡುತ್ತಿರಲಿಲ್ಲ ಎಂಬ ಸಾಲನ್ನು ಉಲ್ಲೇಖಿಸಿ ಡಿ) ಪ್ರಾಯೋಗಿಕ ಸಂಶೋಧನೆಗಳು ಎಂಬುದು ಉತ್ತರವಾಗಿರಬೇಕಿತ್ತು ಎನ್ನುತ್ತಾರೆ.
ಪ್ರಶ್ನೆ- 43) ಏಕದೇಶ ಪರಿಕಲ್ಪನೆಯು ಈ ತತ್ವಕ್ಕೆ ಪೂರಕವಾಗಿದೆ. ಸಿ) ಅಳತೆ ಗೋಲು ಎಂಬುದು ಮಾದರಿ ಉತ್ತರ ಪತ್ರಿಕೆಯ ಉತ್ತರ. ಆದರೆ ಎಸ್ಎನ್ಸಿ ರಾವ್ರ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಪ್ರೊ. ಎನ್. ಹಾಲಪ್ಪ ಅವರ ರಾಜ್ಯಶಾಸ್ತ್ರ ಕೃತಿಗಳನ್ನು ಆಧರಿಸಿ ಉತ್ತರ ಶ್ರೇಣಿಕೃತ ಎಂಬುದಾಗಿರಬೇಕಿತ್ತು ಎನ್ನುತ್ತಾರೆ ಭಾಸ್ಗಿ. ಇದೇ ರೀತಿ ಈ ಪತ್ರಿಕೆಯಲ್ಲಿನ 18, 27, 31,43, 46 ಪ್ರಶ್ನೆಗಳಲ್ಲಿಯೂ ತಪ್ಪುಗಳ ಢಾಳವಾಗಿವೆ ಎಂದು ಆಧಾರ ಸಮೇತ ಭಾಸ್ಗಿಯವರು ವಿವರಿಸುತ್ತಾರೆ. ರಾಜ್ಯಶಾಸ್ತ್ರ- 3ನೇ ಪತ್ರಿಕೆಯ ಪ್ರಶ್ನೆ- 22, 48,55 ಹಾಗೂ 74ರ ಪ್ರಶ್ನೆಗಳ ಉತ್ತರಗಳು ಕೀ ಆನ್ಸರ್ ಶೀಟ್ನಲ್ಲಿ ತಪ್ಪಾಗಿ ನಮೂದುಗೊಂಡಿದೆ ಎಂದು ಪರೀಕ್ಷೆ ಬರೆದ ಭಾಸ್ಗಿ ಹೇಳುತ್ತಾರೆ.
ಆಕ್ಷೇಪಣೆಗೆ ಅರೆಬರೆ ಸ್ಪಂದನೆ: ಕಳೆದ ವರ್ಷ ಡಿ.8ಕ್ಕೆ ಪರೀಕ್ಷೆಯಾಯ್ತು. ಕೀ ಆನ್ಸರ್ ಶೀಟ್ ಅಂತರ್ಜಾಲದಲ್ಲಿ ಡಿ.31 ರಂದು ಪ್ರಕಟಣೆಗೊಂಡಿದೆ. ಮಾದರಿ ಉತ್ತರಗಳನ್ನೆಲ್ಲ ಪರಿಶೀಲಿಸಿದೆವು. 13 ಉತ್ತರಗಳು ತಪ್ಪಾಗಿರುವುದು ಗಮನಕ್ಕೆ ಬಂತು. ತಕ್ಷಣ ಲಭ್ಯವಿರುವ ಉಲ್ಲೇಖಗಳನ್ನೆಲ್ಲ ಸಿದ್ಧಪಡಿಸಿ, ಆಧಾರ ಸಮೇತ ಮೈಸೂರು ವಿವಿ ಕೆ ಸೆಟ್ ಸಂಯೋಜಕರಿಗೆ ಆಕ್ಷೇಪಣೆ ಸಲ್ಲಿಸಿ ಪತ್ರ ಬರೆದೆವು. ಆಕ್ಷೇಪಣೆಗಳ ಪರಿಶೀಲನೆ ನಂತರ ಫೆ.1 ರಂದು ಅಂತಿಮ ಕೀ ಆನ್ಸರ್ ಶೀಟ್ ಬಿಡುಗಡೆಯಾಯ್ತು. ಆದರೆ 13 ಉತ್ತರಗಳಲ್ಲಿ 3ನ್ನು ಮಾತ್ರ ಸರಿಪಡಿಸಿದ್ದರು ಎನ್ನುತ್ತಾರೆ ಭಾಸ್ಗಿ.
ಈ ರೀತಿ ಅಲಕ್ಷತನ ತೋರಿದರೆ ಹೇಗೆ? ಪರೀಕ್ಷೆ ಬರೆದವರು ವಿನಾಕಾರಣ ಅಂಕಗಳನ್ನು ಕಳೆದುಕೊಳ್ಳುವಂತಾದಲ್ಲಿ ಯಾರು ಹೊಣೆ ಎನ್ನುವ ಪರೀಕ್ಷಾರ್ಥಿಗಳು ಮೈಸೂರು ವಿವಿ ಮತ್ತೊಮ್ಮೆ ಕೀ ಉತ್ತರ ಪತ್ರಿಕೆ ಪರಿಷ್ಕರಿಸಿ ನ್ಯಾಯ ಕೊಡಲಿ ಎಂದು ಆಗ್ರಹಿಸುತ್ತಿದ್ದಾರೆ.
ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

