ಗುಲ್ಬರ್ಗಾ

ಅಕ್ರಮ ಮರಳು; ಬಂಧನ

Published On :

ಗುಲ್ಬರ್ಗ: ತಾಲೂಕಿನ ಸೋಮನಾಥ ಹಳ್ಳಿ ಗ್ರಾಮದ ಭೀಮಾ ನದಿಯಲ್ಲಿ ಆಕ್ರಮವಾಗಿ ಹಿಟಾಚಿ ಬಳಸಿ ಮರಳು ತೆಗೆದು ಟ್ರ್ಯಾಕ್ಟರ್‌ಗಳಿಂದ ಸಾಗಿಸಲಾಗುತ್ತಿರುವ ಬಗ್ಗೆ ಖಚಿತ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಫರತಾಬಾದ್ ಪೊಲೀಸರು ದಾಳಿ ನಡೆಸಿದ್ದು, ಮರಳು ಅಗೆಯಲು ಬಳಸಿದ್ದ ಯಂತ್ರಗಳು ಸೇರಿದಂತೆ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಭೀಮಾ ನದಿಯಿಂದ ಮರಳನ್ನು ಕಳವಿನ ಮಾರ್ಗದಲ್ಲಿ ಟ್ರ್ಯಾಕ್ಟರ್‌ಗೆ ತುಂಬಿಸಿಕೊಂಡು ಸೋಮನಾಥ ಹಳ್ಳಿಯ ಕಡೆಗೆ ಕಳ್ಳರು ಹೊರಟಿದ್ದರು. ಆಗ ಕಚ್ಚಾ ರಸ್ತೆ ಮೂಲಕ ಪೊಲೀಸರು ಹೋಗಿ ಸೋಮನಾಥ ಹಳ್ಳಿ ಗ್ರಾಮದ ಹತ್ತಿರ ಹಿಡಿಯಲಾಗಿದೆ. ಭೀಮಾ ನದಿಯ ದಂಡೆಯಲ್ಲಿ ಟ್ರ್ಯಾಕ್ಟರ್‌ಗಳು ನಿಲ್ಲಿಸಿದ್ದು, ಭೀಮಾ ನದಿ ದಂಡೆಯಲ್ಲಿನ ಮರಳನ್ನು ಕಳ್ಳತನದಿಂದ ಹಿಟಾಚಿಯ ಸಹಾಯದಿಂದ ಅಗೆದು ತುಂಬುವುದನ್ನು ದೂರದಿಂದ ಜಾಲಿ ಗಿಡದ ಪೊದೆಗಳ ಮರೆಯಲ್ಲಿ ನಿಂತು ನೋಡಿ ದಾಳಿ ಮಾಡಲಾಗಿದೆ. ಪೊಲೀಸರು ಸುತ್ತುವರೆದರು ಎಂಬ ಸುದ್ದಿ ಅರಿತು ಸ್ಥಳದಿಂದ ಹಲವರು ಓಡಿ ಹೋಗಿದ್ದಾರೆ.
ಜೇವರ್ಗಿ ತಾಲೂಕಿನ ನರಿಬೋಳಿಯವರಾದ ಮಾರುತಿ ತಂದೆ ಸುಭಾಶ್ಚಂದ್ರ ನಾಯ್ಕೋಡಿ, ಗಣೇಶ ತಂದೆ ಸುಭಾಶ್ಚಂದ್ರ ನಾಯ್ಕೋಡಿ ಹಾಗೂ ಐನೋಳ್ಳಿಯ ಪ್ರದೀಪ ತಂದೆ ಶಿವರಾಯ ದೊಡ್ಮನಿ ಇವರನ್ನು ಪೊಲೀಸರು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ. ಹಣಮಂತ ತಂದೆ ಬಾಬುರಾಯ ಡೊಂಬರಿ ಸೋಮನಾಥ ಹಳ್ಳಿ ಓಡಿ ಹೋಗಿದ್ದಾನೆ. ಸ್ಥಳದಲ್ಲಿದ್ದ 1 ಟ್ರ್ಯಾಕ್ಟರ್ ಮರಳು ತುಂಬಿದ ಮತ್ತೊಂದು ಟ್ರ್ಯಾಕ್ಟರ್, ಹಿತಾಚಿ ಸೇರಿದಂತೆ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.