ಇಂದಿನಿಂದ ಮಹಾಲಕ್ಷ್ಮಿ ಉತ್ಸವ
ಶಹಾಬಾದ್: ನಗರದ ರಾಮಾ ಮೊಹಲ್ಲಾ ಪ್ರದೇಶದಲ್ಲಿರುವ ಕೊಲ್ಲಾಪುರ ಮಹಾಲಕ್ಷ್ಮೀ ದೇವಿಯ 10 ನೇ ಮಹೋತ್ಸವ ಫೆ.11,12 ರಂದು ಸಂಗೀತಾ ಅಮ್ಮನವರ ನೇತೃತ್ವದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಶಂಕರಾವ ಕುಲ್ಕರ್ಣಿ ಸರಡಗಿ ತಿಳಿಸಿದ್ದಾರೆ. ಫೆ.11 ರಂದು ಬೆ.5ಕ್ಕೆ ಕಾಕಡಾರತಿ, 6ಕ್ಕೆ ಅಭೀಷೇಕ, ಅಲಂಕಾರ, 8ಕ್ಕೆ ಗಣಪತಿ ಹವನ, 10ಕ್ಕೆ ಲಲಿತಾ ಸಹಸ್ರನಾಮ ಪಾರಾಯಣ, 12ಕ್ಕೆ ಸತ್ಯನಾರಾಯಣ ಪೂಜೆ, ಮ.1ಕ್ಕೆ ನೈವೆದ್ಯ, ಆರುತಿ, ಮಹಾಪ್ರಸಾದ ವಿತರಣೆ. ಸಂ.5ಕ್ಕೆ ಸಂಗೀತ, 7ಕ್ಕೆ ಋತ್ವೀಜರಿಂದ ವೇದ ಘೋಷ, ಮಂಗಳಾರತಿ, ಮಂತ್ರಪುಷ್ಪ, ರಾ. 9ಕ್ಕೆ ಅನಂತ ಕುಲ್ಕರ್ಣಿ ಬಾಗಲಕೋಟೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯುವುದು. ಫೆ.12ರಂದು ಬೆ.5ಕ್ಕೆ ಕಾಕಡಾರತಿ, 5ಕ್ಕೆ ಅಭಿಷೇಕ, ಅಲಂಕಾರ, 8ಕ್ಕೆ ಲಕ್ಷ್ಮೀ ಹವನ, ಕುಂಕುಮಾರ್ಚನೆ, ಥಿಟೆ ಸಹೋದರಿಯರಿಂದ ಸಂಗೀತ ಸೇವೆ. ಮ.12ಕ್ಕೆ ಲಕ್ಷ್ಮೀ ಹವನದ ಪೂರ್ಣಾಹುತಿ, ಮ.1ಕ್ಕೆ ರಥೋತ್ಸವ, 2ಕ್ಕೆ ಮಂಗಳಾರತಿ ನೈವೇದ್ಯ, ಮಹಾಪ್ರಸಾದ ವಿತರಣೆ. ಮ.3ಕ್ಕೆ ಅಮ್ಮನವರಿಂದ ಪ್ರಸಾದ ವಿತರಣೆ, ಆಶೀರ್ವಾದ, ಸಂಜೆ 7.30ಕ್ಕೆ ತೊಟ್ಟಿಲು ಸೇವೆ ನಡೆಯುವುದು.
ಸಂಭಾಜಿರಾವ್ ಬಂಧನಕ್ಕೆ ಆಗ್ರಹ
ಗುಲ್ಬರ್ಗ: ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಮತ್ತು ಅನೈತಿಕ ಜೂಜಾಟದ ಅಡ್ಡೆಗಳನ್ನು ನಡೆಸುತ್ತಿರುವ ನಾಡದ್ರೋಹಿ ಸಂಭಾಜಿ ಪಾಟೀಲ್ ಅವರನ್ನು ಬಂಧಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಕನ್ನಡಿಗರು ಹಾಗೂ ಕರ್ನಾಟಕ ಬಗ್ಗೆ ನಿರಂತರವಾಗಿ ಅವಹೇಳನಕಾರಿಯಾಗಿ ಮಾತನಾಡಿ, ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ವಿಷ ಬೀಜ ಬಿತ್ತಿ ಕೆರಳಿಸುತ್ತಿದ್ದಾನೆ. ಅನೈತಿಕ ದಂಧೆಯಲ್ಲಿ ತೊಡಗಿರುವ ಸಂಭಾಜಿ ಪಾಟೀಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಆತನನ್ನು ಬಂಧಿಸಬೇಕು, ಆತನ ಶಾಸಕತ್ವ ರದ್ದುಪಡಿಸಬೇಕೆಂದು ಕರವೇ ಜಿಲ್ಲಾಧ್ಯಕ್ಷ ಶಿಮಕುಮಾರ ನಾಟೀಕಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಲಂಡನಕರ್, ಶರಣಗೌಡ ಪಾಟೀಲ್. ಅಶೋಕ ಭೀಮಳ್ಳಿ, ರಾಜೇಂದ್ರ ಸರಾದರ, ರಾಜು ಉಕ್ಕಲಿ, ಸಂತೋಷ ಖಣದಾಳ ಸೇರಿದಂತೆ ಇನ್ನಿತರರು ಇದ್ದರು.
ಲೋಹ ಸಂಗ್ರಹಣೆಗೆ ಚಾಲನೆ
ಗುಲ್ಬರ್ಗ: ತಾಲೂಕಿನ ಬಬಲಾದ ಐ.ಕೆ. ಗ್ರಾಮ ಮಠದ ಆವರಣದಲ್ಲಿ ಫೆ.11ರಂದು ಮಧ್ಯಾಹ್ನ 3ಕ್ಕೆ ಗುಲ್ಪರ್ಗ ಗ್ರಾಮೀಣ ಮಂಡಳವತಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲರ ಪುತ್ಥಳಿಗಾಗಿ ಲೋಹ ಸಂಗ್ರಹಣ ಅಭಿಯಾನಕ್ಕೆ ಗುರುಪಾದಲಿಂಗ ಶಿವಯೋಗಿಗಳ ಚಾಲನೆ ನೀಡಲಿದ್ದಾರೆ.
ಜಿಲ್ಲೆಯ ಲೋಹ ಸಂಗ್ರಹ ಸಮಿತಿಯ ಸಂಚಾಲಕ ದೊಡ್ಡಪ್ಪಗೌಡ ಎಸ್. ಪಾಟೀಲ್ ನರಿಬೋಳ, ಮಾಜಿ ಸಚಿವ ರೇವೂನಾಯಕ ಬೆಳಮಗಿ, ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ವಿದ್ಯಾಸಾಗರ ಕುಲ್ಕರ್ಣಿ, ಶಿವಯೋಗಿ ನಾಗನಳ್ಳಿ, ಜಿಪಂ ಸದಸ್ಯ ಶಿವಪ್ರಭು ಪಾಟೀಲ್, ಗಣೇಶ ನಾಯಕ ಬೆಳಮಗಿ, ಸೇರಿದಂತೆ ಇತರೆ ಪದಾಧಿಕಾರಿಗಳು ಉಪಸ್ಥಿತರಿರುವರು.
ಚುನಾವಣೆಗೆ ಅಧಿಸೂಚನೆ
ಚಿತ್ತಾಪುರ: ತಾಲೂಕಿನ ಡೊಣ್ಣೂರ ಗ್ರಾಮದ ನೀರು ಬಳಕೆದಾರರ ಸಹಕಾರ ಸಂಘ 2014-15 ರಿಂದ 2018-19 ನೇ ಸಾಲಿಗಾಗಿ ಅಡಳಿತ ಮಂಡಳಿಯ ಅಯ್ಕೆಗಾಗಿ ಚುನಾವಣೆ ಅಧಿಸೂಚನೆ ಹೋರಡಿಸಲಾಗಿದೆ ಎಂದು ಚುನಾವಣಾಧಿಕಾರಿ ಸುರೇಶ ವರ್ಮಾ ತಿಳಿಸಿದ್ದಾರೆ. ಫೆ.15 ರೊಳಗಾಗಿ ನಾಮಪತ್ರ ಸಲ್ಲಿಸಲು ಸೂಚಿಸಲಾಗಿದೆ. ಫೆ.23 ರಂದು ಬೆಳಗ್ಗೆ 9ರಿಂದ 4 ಗಂಟೆವರೆಗೆ ನಡೆಯುತ್ತದೆ ಚುನಾವಣೆ ನಡೆಯಲಿದೆ.
ಬೆಂಕಿ; ಕಬ್ಬಿನ ಗದ್ದೆ ಬೆಂಕಿಗಾಹುತಿ
ಕಮಲಾಪುರ: ಓಕಳಿ ಸೀಮಾಂತರದಲ್ಲಿರುವ ಹೊಲ ಸರ್ವೆ ನಂ. 14/1ರಲ್ಲಿ ಬೆಳೆದ ಎರಡು ಎಕರೆ ಕಬ್ಬು ಬೆಂಕಿಗಾಹುತಿಯಾದ ಘಟನೆ ಫೆ.8ರಂದು ಮಧ್ಯಾಹ್ನ 12.30 ಗಂಟೆ ಸುಮಾರಿಗೆ ನಡೆದಿದೆ. ವಿದ್ಯುತ್ ತಂತಿಗಳು ಕೂಡುವಿಕೆಯಿಂದ ಬೆಂಕಿ ತಗುಲಿ ಕಬ್ಬು ಸುಟ್ಟಿದ್ದು ಇದರಿಂದ ಅಂದಾಜು 2 ಲಕ್ಷ ಹಾನಿ ಸಂಭವಿಸಿದೆ ಎಂದು ರೈತ ಶಿವಪುತ್ರ ಬಸಣ್ಣ ಮುಗಳಿ ಕಮಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
15 ಎಕರೆ ತೊಗರಿ ಬೆಳೆ ಭಸ್ಮ
ಚಿಂಚೋಳಿ ತಾಲೂಕಿನ ಕರ್ಚಖೇಡದಲ್ಲಿ 15 ಎಕರೆ ಹೊಲದಲ್ಲಿ ಬೆಳೆದು ರಾಶಿಗೆಂದು ಸಿದ್ಧಪಡಿಸಿ ಇಡಲಾಗಿದ್ದ ತೊಗರಿಗೆ ಬೆಂಕಿ ತಗುಲಿ ಭಸ್ಮವಾಗಿದೆ. ಪ್ರಲ್ಹಾದ ಕುಲಕರ್ಣಿ ಎಂಬುವವರಿಗೆ ಸೇರಿದ ಸುಮಾರು 100 ಕ್ವಿಂಟಲ್ ತೊಗರಿ ಹಾನಿಯಾಗಿದೆ. ಈ ಸಂಬಂಧ ತಹಸೀಲ್ದಾರ್ ಅವರಿಗೆ ದೂರು ಸಲ್ಲಿಸಿ, ಹಾನಿ ತುಂಬಿಕೊಡಲು ಕೋರಿದ್ದಾರೆ. ಮಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

