ಸಿಂಗನಹಳ್ಳಿಯಲ್ಲಿ ಯಲ್ಲಮಾಂಬೆ ಜಾತ್ರಾ ಮಹೋತ್ಸವ
ಶಹಾಪುರ: ತಾಲೂಕಿನ ಸಿಂಗನಹಳ್ಳಿ ಗ್ರಾಮದ ವ್ಯಾಪ್ತಿಯ ಯಲ್ಲಮಾಂಬೆ ಜಾತ್ರಾ ಮಹೋತ್ಸವ ಫೆ. 13ರಿಂದ 16 ರವರೆಗೆ ನಡೆಯಲಿದೆ. 13ರಂದು ದೇವಿಯ ಗಂಗಾಸ್ನಾನ, 14ರಂದು ಪಲ್ಲಕ್ಕಿ ಮಹೋತ್ಸವ, ಸಂಜೆ ಯಕ್ಷಗಾನ, ಜೀಕ ಪದಗಳು, 15ರಂದು ರಥೋತ್ಸವ ಕಾರ್ಯಕ್ರಮ 16ರಂದು ಕುಸ್ತಿ ಪಂದ್ಯ ಸೇರಿದಂತೆ ಗೀಗಿಪದಗಳು ಅಕ್ಕನಬಳಗ, ವಿವಿಧ ಭಜನಾ ಮಂಡಳಿಯಿಂದ ವಿಶೇಷ ಭಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಿಂಗನಹಳ್ಳಿ ಯಲ್ಲಮಾಂಬೆ ತಾಲೂಕಿನ ಸುತ್ತಲಿನ ಹಳ್ಳಿಯ ಆರಾಧ್ಯ ದೈವವಾಗಿದ್ದು ಸಮಸ್ತ ಭಕ್ತರು ಪಾಲ್ಗೊಳ್ಳಬೇಕೆಂದು ಸಿಂಗನಹಳ್ಳಿ ಹಾಗೂ ಗೋಗಿಯ ಸಮಸ್ತ ಭಕ್ತ ಮಂಡಳಿ ಮನವಿ ಮಾಡಿದೆ.
ಇಂದು ಪ್ರತಿಭಟನೆ
ಗುರುಮಠಕಲ್: ಅಂಗನವಾಡಿ ನೌಕರರ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ವತಿಯಿಂದ ಬೆಳಗ್ಗೆ 11ಕ್ಕೆ ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಪತ್ರವನ್ನು ಸಲ್ಲಿಸಲಾಗುತ್ತಿದೆ. ನಂತರ ನಡೆಯುವ ಪ್ರತಿಭಟನಾ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಮತ್ತು ರಾಜ್ಯ ಕಾರ್ಯದರ್ಶಿ ರಮಾ ಟಿ.ಸಿ. ಬೆಂಗಳೂರು ಮಾತನಾಡಲಿದ್ದಾರೆ. ಅದಕ್ಕಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಲು ಜಿಲ್ಲಾಧ್ಯಕ್ಷ ಡಿ. ಉಮಾದೇವಿ ತಿಳಿಸಿದ್ದಾರೆ.
ವಿಜಯಾ ಬ್ಯಾಂಕ್ ಸಿಬ್ಬಂದಿಯಿಂದಲೇ 5.57 ಲಕ್ಷ ವಂಚನೆ
ಶಹಾಪುರ: ಬ್ಯಾಂಕ್ ಸಿಬ್ಬಂದಿಯೇ ವಂಚನೆಯಲ್ಲಿ ಶಾಮೀಲಾಗಿದ್ದು 5.57 ಲಕ್ಷ ಅವ್ಯವಹಾರ ನಡೆದ ಪ್ರಕರಣ ನಗರದ ವಿಜಯ ಬ್ಯಾಂಕ್‌ನಲ್ಲಿ ನಡೆದಿದೆ.
ಘಟನೆ ವಿವರ: 2012ರಲ್ಲಿ ವಿಜಯ ಬ್ಯಾಂಕ್ ಸಿಬ್ಬಂದಿ ಪೈಕಿ ಕೆಲವರು ವ್ಯವಸ್ಥಿತವಾಗಿ ನಕಲಿ ದಾಖಲೆ ಸೃಷ್ಟಿಸಿ ಮುಂಗಡ ಠೇವಣಿ 5 ಲಕ್ಷ 57 ಸಾವಿರ 251 ಪಡೆದುಕೊಂಡಿದ್ದಾರೆ ಎಂಬುದು ಪರಿಶೀಲನೆಯಿಂದ ತಿಳಿದು ಬಂದಿದೆ. ಆ ಅವಧಿಯಲ್ಲಿ ಶಹಾಪುರ ವಿಜಯಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಸಂತಕುಮಾರ ಸದ್ಯ ತೋರಣಗಲ್‌ನಲ್ಲಿ, ವಸೀಮ ಅಹ್ಮದ್, ಮೈನೊದ್ದೀನ್, ವಿಜಯಬ್ಯಾಂಕ್ ಸೂಪರಮಾರ್ಕೆಟ ಗುಲ್ಬರ್ಗದಲ್ಲಿ, ಮಂಜುನಾಥ ನಿಂಬಲಗುಂದಿ ಬ್ಯಾಂಕಿನ ಕೃಷಿ ಅಧಿಕಾರಿಯಾಗಿ ಲಿಂಗಸ್ಗೂರದಲ್ಲಿ, ಅರವಿಂದ ವೈದ್ಯ ಬ್ರ್ಯಾಂಚ್ ಮ್ಯಾನೇಜರ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮ್ಯಾನೇಜರ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

