ಗುಲ್ಬರ್ಗಾ

ಇಂದಿನಿಂದ ಉದನೂರ ಜೋಡ ಬಸವೇಶ್ವರ ಜಾತ್ರೆ

Published On :

ಗುಲ್ಬರ್ಗ: ಗುಲ್ಬರ್ಗ ಹೊರವಲಯದಲ್ಲಿರುವ ಉದನೂರು ಗ್ರಾಮದಲ್ಲಿ ಜೋಡಬಸವೇಶ್ವರ ರಥೋತ್ಸವ ಫೆ.13ರಿಂದ ಆರಂಭವಾಗಲಿದೆ. ಫೆ.13 ರಂದು ಸಂಜೆ 8ಕ್ಕೆ ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ಧಾರ್ಮಿಕ ಸಭೆ ಉದ್ಘಾಟಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಹಿರಿಯ ಮುಖಂಡ ಬಿ.ಜಿ. ಪಾಟೀಲ್, ಶಿವರಾಜ ಪಾಟೀಲ, ವೈದ್ಯ ಡಾ. ಪ್ರಶಾಂತ ಸೇರಿದಂತೆ ಹಲವರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಶಿವರಾಜ ಪೊಲೀಸ್ ಪಾಟಿಲ್ ಅಧ್ಯಕ್ಷತೆ, ರಂಗಲಿಬಾಯಿ ಧರ್ಮು ರಾಠೋಡ, ನೀಲಾಂಬಿಕಾ, ಅಶೋಕ ನಾಗನಳ್ಳಿ, ಭಾಗಮ್ಮ ರಾಜಕುಮಾರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜಿಡಗಾ- ಅಚಲೇರಿ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಬಸವರಾಜಪ್ಪಾ ಅಪ್ಪಾ ನೇತೃತ್ವದಲ್ಲಿ ಫೆ.14 ರಂದು ಸಂಜೆ 6ಕ್ಕೆ ಸುಕ್ಷೇತ್ರ ಉದನೂರ ಶ್ರೀ ಜೋಡ ಬಸವೇಶ್ವರ ಜಾತ್ರಾ ಮಹೋತ್ಸವ ನೆರವೇರಲಿದೆ. ಮಾಜಿ ಶಾಸಕಿ ಅರುಣಾದೇವಿ ಪಾಟೀಲ ರೇವೂರ, ಶಾಸಕ ಪ್ರಿಯಾಂಕ ಖರ್ಗೆ, ಅಧ್ಯಕ್ಷ ಶಶೀಲ ಜಿ, ನಮೋಶಿ, ಪತ್ರಕರ್ತ ವಾದಿರಾಜ ವ್ಯಾಸಮುದ್ರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಫೆ.15 ರಂದು ಮಾಜಿ ಶಾಸಕ ರೇವೂನಾಯಕ ಬೆಳಮಗಿ, ಎಂ.ವೈ. ಪಾಟೀಲ, ಕಾಂಗ್ರೆಸ್ ಮುಖಂಡ ಸತೀಶ ವ್ಹಿ. ಗುತ್ತೇದಾರ ಹಾಗೂ ಕಾನಿಪಸಂ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ಬೀರಪ್ಪ ಸಿದ್ದಪ್ಪ ಹಿರೆ ಪೂಜಾರಿ, ಉಷಾಲತಾ ಬಾಜಿರಾಯ ಕೊರಳ್ಳಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಪ್ಪಾಜಿ ಕಲಾ ಬಳಗ ಮತ್ತು ಕಲ್ಯಾಣ ನಾಡಿನ ಸಂಸ್ಕೃತ ಕಲಾ ಬಳಗದಿಂದ ಸಂಗೀತ ಕಾರ್ಯಕ್ರಮ ಮತ್ತು ಜಂಗಿ ಪೈಲ್ವಾನರ ಕುಸ್ತಿ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.