ಕಸಾಪ ಅಧ್ಯಕ್ಷರ ಸರ್ವಾಧಿಕಾರಿ ನಡೆವಳಿಕೆ: ಕರವೇ ಆರೋಪ
ಚಿತ್ತಾಪುರ: ಶತಮಾನೋತ್ಸವ ಅಚರಿಸಿಕೊಳ್ಳುತ್ತಿರುವ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಜಾತ್ಯಾತೀತವಾದ ಸಂಸ್ಥೆಯಾಗಿದ್ದು, ಇಲ್ಲಿ ಎಲ್ಲಾ ಜಾತಿ ಜನಾಂಗದವರನ್ನು ಒಗ್ಗೂಡಿಸಿ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಆಗಬೇಕು. ಅದರೆ ಚಿತ್ತಾಪುರ ತಾಲೂಕಿನ ಕಸಾಪ ಅಧ್ಯಕ್ಷ ನಾಗಾಯ್ಯ ಸ್ವಾಮಿ ಅಲ್ಲೂರವರು ಇವನ್ನು ಗಾಳಿಗೆ ತೂರಿ ಏಕ ಪಕ್ಷಿಯವಾಗಿ ವರ್ತಿಸುತ್ತಿದ್ದಾರೆ. ಅಲ್ಲದೇ ಕಸಪಾ ಒಂದು ಜಾತಿಗೆ, ಒಂದು ಪಕ್ಷಕ್ಕೆ ಸೀಮಿತಗೊಂಡಿದೆ ಎಂದು ಕರವೇ(ನಾರಾಯಣಗೌಡ) ಬಣದ ತಾಲುಕು ಅಧ್ಯಕ್ಷ ಮಹೇಶ ಕಾಶಿ ಅರೋಪಿಸಿದ್ದಾರೆ.
ಅವರು ಪತ್ರಿಕೆ ಹೇಳಿಕೆ ನೀಡಿ, ಚಿತ್ತಾಪುರ ಕಸಾಪದ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಸಾಹಿತ್ಯ ಸಮ್ಮೇಳನ ನಡೆದಿದ್ದು, ಕಸಾಪ ತಾಲೂಕು ಘಟಕ ಎಲ್ಲಾ ಸಮಾಜದವರ ಅಭಿಪ್ರಾಯ ಸಂಘಟನೆಗಳ ಹಾಗೂ ಕನ್ನಡ ಪ್ರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ನಡೆಸಿದ್ದರೆ ಇನ್ನೂ ವಿಜೃಂಭಣೆಯಾಗಿ ಮಾಡಬಹುದಿತ್ತು ಎಂದರು.
ಲೋಪದೋಷಗಳು
ಕಸಾಪ ಸಮ್ಮೇಳನದ ಪೂರ್ವ ಹಾಗೂ ಸಮ್ಮೇಳನಕ್ಕೆ ಸರ್ವ ಸದಸ್ಯರ ಅಭಿಪ್ರಾಯ ಪಡೆಯಲು ಒಂದು ಸಭೆ ನಡೆಸದೇ ಇರುವುದು.
ಕನ್ನಡ ಪರ ಸಂಘಟನೆಗಳನ್ನು ಸಮ್ಮೇಳನದಿಂದ ದೂರವಿಟ್ಟು, ಸಂಘಟನೆಗಳಿಗೆ ಅವಮಾನಮಾಡಿರುವುದು. ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಮಾಡಿರುವರು. ಅದರೆ ಸನ್ಮಾನಿತರಿಗೆ ಇದರ ಬಗ್ಗೆ ಮಾಹಿತಿಯೇ ನೀಡದೇ ಇರುವುದು. ನಾಗಾವಿ ನಾಡಿನ ನುಡಿ ಹಬ್ಬಕ್ಕೆ ಸ್ಥಳೀಯ ಐತಿಹಾಸಿಕ ನಾಗಾವಿ ಕ್ಷೇತ್ರದ ಬದಲು ಕಾಳಗಿ ದೇವಸ್ಥಾನದ ಭಾವಚಿತ್ರ ಹಾಕಿದ್ದಾರೆ.
ತಾಲೂಕಿನಲ್ಲಿ ಸಮ್ಮೇಳನ ನಡೆದರೂ ಅದರ ಸಂಪೂರ ಚಟುವಟಿಕೆ, ಪತ್ರಿಕಾಗೋಷ್ಠಿ, ಪೂರ್ವ ತಯಾರಿ ಜಿಲ್ಲಾ ಕೇಂದ್ರದಲ್ಲಿ ಮಾಡಿ ತಾಲೂಕು, ವಿಚಾರವಾದಿಗಳಿಗೆ ಹಾಗ ಪತ್ರಕರ್ತರಿಗೆ ಅವಮಾನಿಸಿರುವುದು.
ಕಸಾಪ ಸರ್ವ ಜಾತಿ ಜನಾಂಗಕ್ಕೂ ಸೇರಿದ್ದು, ಸಮ್ಮೇಳನಕ್ಕೆ ವೀರಶೈವ ಅಧ್ಯಕ್ಷರನ್ನು ಅಹ್ವಾನಿಸಿ ಇತರೆ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಸಮ್ಮೇಳನಕ್ಕೆ ಕನ್ನಡ ಶಾಲೆಗಳನ್ನು ನಿರ್ಲಕ್ಷ್ಯ ಮಾಡಿ ಅಂಗ್ಲ ಶಾಲೆಗಳಿಗೆ ಪ್ರಾತಿನಿಧ್ಯ ನೀಡಿ ಕನ್ನಡ ಶಾಲೆಗಳಿಗೆ, ಶಿಕ್ಷಕರಿಗೆ ಅವಮಾನ ಮಾಡಿದ್ದಾರೆ.
ಕನ್ನಡ ಪರ ಸಂಘಟನೆಗಳು ಹಿರಿಯ ರಂಗಕರ್ಮಿ ವಿಶ್ವನಾಥ ಬೆಳಗುಂಪಿಯವರನ್ನು ಸಮ್ಮೇಳನಾಧ್ಯಕ್ಷರಾಗಿಸುವಂತೆ ಮಾಡಿದ ಮನವಿಗೆ ಬೆಲೆ ನೀಡದೇ ಅವಹೇಳನ ಮಾಡಿದ್ದಾರೆಂದು ಕರವೇ ತಾಲೂಕು ಅಧ್ಯಕ್ಷ ಮಹೇಶ ಕಾಶಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

