ಗುಲ್ಬರ್ಗಾ

ಇಂದು ಅಡ್ಡ ಪಲ್ಲಕ್ಕಿ ಮಹೋತ್ಸವ

Published On :

ಗುಲ್ಬರ್ಗ: ತಾಲೂಕಿನ ಕುರಿಕೋಟಾದ ಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದ ಭೀಮಾಶಂಕರಲಿಂಗ ಶಿವಾಚಾರ್ಯರ ಅಡ್ಡ ಪಲ್ಲಕ್ಕಿ ಮಹೋತ್ಸವ, ಪುರಾಣ ಮಂಗಳ ಹಾಗೂ ಧರ್ಮ ಸಮ್ಮೇಳನ ಫೆ.13 ರಂದು ಮಧ್ಯಾಹ್ನ 1ಕ್ಕೆ ಜರುಗಲಿದೆ. ಬೆಳಗ್ಗೆ 10ಕ್ಕೆ ನಡೆಯುವ ಪುರಾಣ ಮಹಾ ಮಂಗಳ ಕಾರ್ಯಕ್ರಮದಲ್ಲಿ ರೇವಣಸಿದ್ದ ಶ್ರೀ ಸಾನ್ನಿಧ್ಯ ವಹಿಸಲಿದ್ದಾರೆ. ಪಂಡಿತರಾಧ್ಯಶ್ರೀ ಹಾಗೂ ಚನ್ನವೀರ ದೇವರು ನೇತೃತ್ವವಹಿಸುವರು. ಶಾಸಕ ಜಿ. ರಾಮಕೃಷ್ಣ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಧ್ಯಾಹ್ನ 1ಕ್ಕೆ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಸಮ್ಮೇಳನ ಜರುಗಲಿದೆ. ರೇವಣಸಿದ್ದ ಶ್ರೀ, ಗುರುಪಾದಲಿಂಗ ಮಹಾಶಿವಯೋಗಿ, ಚಂದ್ರಗುಂಡ ಶ್ರೀ, ಸಿದ್ದರಾಮಚಾರ್ಯರು ನೇತೃತ್ವವಹಿಸುವರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್.ಪಾಟೀಲ್ ಉದ್ಘಾಟಿಸುವರು. ಮಾಜಿ ಸಚಿವ ರೇವುನಾಯಕ ಬೆಳಮಗಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್, ಅಲ್ಲಂಪ್ರಭು ಪಾಟೀಲ್, ಡಾ. ಶಿವಾನಂದ ಭೀಮಳ್ಳಿ ಸೇರಿದಂತೆ ಇತರರು ಆಗಮಿಸಲಿದ್ದಾರೆ.
ಇಂದು ವಿದ್ಯುತ್ ವ್ಯತ್ಯಯ
ಗುಲ್ಬರ್ಗ: ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳುವ ಪ್ರಯುಕ್ತ ಗುಲ್ಬರ್ಗ ನಗರದ 11 ಕೆವಿ ಮಹಾವೀರನಗರ ಫೀಡರ್ ಮೇಲೆ ಫೆ.13ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಕೆಲಸ ಕೈಗೊಳ್ಳಲಾಗುತ್ತಿದೆ. ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಲು ಕೋರಲಾಗಿದೆ. ಎಸ್‌ಸಿ, ಎಸ್‌ಟಿ ವಸತಿಗೃಹ, ಡಾ. ರವೀಂದ್ರ ಆಸ್ಪತ್ರೆ, ಮೋಹನ ಲಾಡ್ಜ್, ಪಿ.ಡಬ್ಲ್ಯೂ.ಡಿ. ಕಚೇರಿ, ವಿಜಯವಾಣಿ ಕಚೇರಿ, ನಾಗಾರ್ಜುನ್ ಹೋಟೆಲ್, ಜಿ.ಕೆ. ಕಾಂಪ್ಲೆಕ್ಸ್, ಕೋಠಾರಿ ಕಣ್ಣಿನ ಆಸ್ಪತ್ರೆ, ತಿಮ್ಮಾಪುರಿ ಕಾಂಪ್ಲೆಕ್ಸ್ ಮತ್ತು  ಕ್ರಿಸ್ಟಲ್ ಪ್ಲಾಜಾ ಬಡಾವಣೆ- ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
15ರಂದು ಜನಸ್ಪಂದನ
ಗುಲ್ಬರ್ಗ: ತಾಲೂಕಿನ ಕಡಣಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಫೆ.15 ರಂದು ಬೆಳಗ್ಗೆ 11ಕ್ಕೆ ಜನಸ್ಪಂದನ ಸಭೆಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕಡಣಿ ಗ್ರಾಪಂ ವ್ಯಾಪ್ತಿಯ ಜನಪ್ರತಿನಿಧಿಗಳು, ತಾಲೂಕು ಮಟ್ಟದ ಅಧಿಕಾರಿಗಳು ತಪ್ಪದೇ ಖುದ್ದಾಗಿ ಹಾಜರಾಗುವಂತೆ ಗುಲ್ಬರ್ಗ ತಹಸೀಲ್ದಾರ್ ತಿಳಿಸಿದ್ದಾರೆ.
ಆರೋಗ್ಯ ಸಚಿವರ ಪ್ರವಾಸ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫೆ.12ರಂದೇ ಗುಲ್ಬರ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಅಂದೇ ಸಂಜೆ 5ಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು. ಫೆ.13ರಂದು ಬೆಳಗ್ಗೆ 10ಕ್ಕೆ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಯೋಜಿಸಿರುವ ಸಂತಾನೋತ್ಪತ್ತಿ, ತಾಯಂದಿರ, ನವಜಾತ ಶಿಶು, ಮಕ್ಕಳ ಹಾಗೂ ಹದಿ ಹರೆಯದವರ ಸಮಗ್ರ ಆರೋಗ್ಯ ರಕ್ಷಣೆ ಕುರಿತ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ 2ಕ್ಕೆ ರಸ್ತೆ ಮೂಲಕ ಗುಲ್ಬರ್ಗದಿಂದ ಹೈದ್ರಾಬಾದ್‌ಗೆ ಪ್ರಯಾಣಿಸುವರು.
ಅಂತರ್ಜಲ ಸದ್ಬಳಕೆ ಶಿಬಿರ 15ಕ್ಕೆ
ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಗುಲ್ಬರ್ಗ ಜಿಪಂ ಸಂಯುಕ್ತಾಶ್ರಯದಲ್ಲಿ ಫೆ.15ರಂದು ಬೆಳಿಗ್ಗೆ 11ಕ್ಕೆ ಆಳಂದ ಪಟ್ಟಣದ ಶಿವಶರಣ ಏಕಾಂತ ರಾಮಯ್ಯನ ಅನುಭವ ಮಂಟಪ ಶ್ರೀರಾಮಪೇಟ್‌ನಲ್ಲಿ ರೈತರು ಮತ್ತು ಸಾರ್ವಜನಿಕರಿಗೆ ಅಂತರ್ಜಲ ಸದ್ಬಳಕೆ ಮತ್ತು ಮಳೆ ನೀರು ಸಂಗ್ರಹಣೆ ಕುರಿತು ಜನಜಾಗೃತಿ ಶಿಬಿರವನ್ನು ಆಯೋಜಿಸಲಾಗಿದೆ.
ಕಾಶೀನಾಥಗೆ ಸಾಹಿತ್ಯ ರತ್ನ ಪ್ರಶಸ್ತಿ
ಗುಲ್ಬರ್ಗ: ಬಿಜಾಪುರ ತಾಲೂಕಿನ ಹೊನ್ನಳ್ಳಿ ಗ್ರಾಮದ ಶಿವಶರಣೆ ನಿಂಬೆಕ್ಕ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಸಂಸ್ಥೆಯ ಅಧ್ಯಕ್ಷ ಎಸ್.ಡಿ. ಕುಮಾನಿ ನೇತೃತ್ವದಲ್ಲಿ ಪ್ರೊ. ರಾಜು ಆಲಗೂರ ಹಾಗೂ ಎಂ.ಎನ್. ತೋಳ್ನೂರ ಸಮ್ಮುಖದಲ್ಲಿ ಹಿರಿಯ ಸಾಹಿತಿ ಕಾಶೀನಾಥ ಎಂ. ಹಿರೇಮಠ ಅವರಿಗೆ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.