ಬೈಪಾಸ್ ರಸ್ತೆಗಾಗಿ ಪ್ರಸ್ತಾವನೆ ಸಲ್ಲಿಕೆ
ಹಿರೇವಡಗೇರಾ: ಜನಸಂಖ್ಯೆ ಹೆಚ್ಚಾದಂತೆ ಮೂಲ ಸೌಕರ್ಯಗಳ ಬೇಡಿಕೆಯು ಹೆಚ್ಚಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಒಂದು ವೇಳೆ ಸರ್ಕಾರದ ಆಡಳಿತ ಯಂತ್ರಕ್ಕೆ ತುಕ್ಕು ಹಿಡಿದರೆ ಏನಾಗುತ್ತದೆ ಎಂಬುದಕ್ಕೆ ಇಲ್ಲಿಯ ಪೊಲೀಸ್ ಠಾಣೆಯಿಂದ ಗ್ರಾಮದ ಮಹಾದ್ವಾರದವರೆಗೆ ವಾಹನದಲ್ಲಿ ಸಂಚರಿಸಿದರೆ ಗೊತ್ತಾಗುತ್ತದೆ.
ಈ ಹಿಂದೆ ಗ್ರಾಮದಲ್ಲಿ ವಾಹನ ಸಂಚಾರ ಅತೀ ವಿರಳವಾಗಿತ್ತು. ಆಗ ವಾಹನಗಳು ಗ್ರಾಮದ ಮಧ್ಯದಲ್ಲಿರುವ ಮುಖ್ಯರಸ್ತೆಯ ಮುಖಾಂತರ ಸಂಚರಿಸುತ್ತಿದ್ದವು. ಇದರಿಂದಾಗಿ ರಸ್ತೆ ಸಂಚಾರಕ್ಕೆ ಯಾವುದೇ ತೊಂದರೆಯಾಗುತ್ತಿರಲಿಲ್ಲ.
ವಾಹನಗಳ ಸಂಚಾರ ವಿಪರೀತ: ಯಾವಾಗ ಈ ಗ್ರಾಮವನ್ನು ಸಮಿತಿಗಳು ತಾಲೂಕಾ ಕೇಂದ್ರಕ್ಕೆ ಶಿಫಾರಸ್ಸು ಮಾಡಿ, ಗ್ರಾಮದಲ್ಲಿ ಬದಲಾವಣೆಯ ಗಾಳಿ ಬಿಸ ತೊಡಗಿತು. ಇದರ ಜೊತೆ ಪಕ್ಕದಲ್ಲಿಯೇ ಕೋರಗ್ರೀನ್ ಸಕ್ಕರೆ ಕಾರ್ಖಾನೆ ಹಾಗೂ ಪಕ್ಕದ ಗೂಗಲ್ ಬ್ರಿಜ್ ರಸ್ತೆ ಸಂಚಾರಕ್ಕೆ ಅನುಕೂಲವಾಯಿತು. ಅಂದಿನಿಂದ ವಾಹನಗಳ ಸಂಚಾರ ವಿಪರೀತವಾಯಿತು.
ದಿನಾಲೂ ನೂರಾರು ಲಾರಿಗಳು ಕಬ್ಬನ್ನು ತುಂಬಿಕೊಂಡು ಗ್ರಾಮ ಮಧ್ಯದ ಕಿರಿದಾದ ರಸ್ತೆಯ ಮುಖಾಂತರ ಸಕ್ಕರೆ ಕಾರ್ಖಾನೆಗೆ ಬರತೊಡಗಿದವು. ಆಗ ಎರಡು ವಾಹನಗಳು ಎದುರಾದಾಗ ಕಿರಿದಾದ ರಸ್ತೆಯ ಮೇಲೆ ಹರಸಾಹಸ ಪಟ್ಟು ವಾಹನಗಳನ್ನು ಹಿಂದಕ್ಕೆ ಸಂಚರಿಸುವಾಗ ಅಪಘಾತಗಳಾಗುತ್ತಿದ್ದವು.
ಅಗಲೀಕರಣಕ್ಕೆ ಆದೇಶ: ಇದರಿಂದ ಬೇಸತ್ತ ಗ್ರಾಮದ ಮುಖಂಡರು, ಸಂಘ ಸಂಸ್ಥೆಯವರು ಆಗೀನ ಜಿಲ್ಲಾಧಿಕಾರಿಯಾಗಿದ್ದ ಗುರುನೀತ ತೆಜ ಮೇನನ್ರವರಿಗೆ ರಸ್ತೆ ಅಗಲೀಕರಣಕ್ಕಾಗಿ ಮನವಿಯನ್ನು ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಪರಿಶೀಲಿಸಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ರಸ್ತೆ ಅಗಲೀಕರಣಕ್ಕಾಗಿ ಆದೇಶ ಮಾಡಿದರು. ಆಗ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆಯ ಮಧ್ಯ ಭಾಗದಿಂದ ಎಡಕ್ಕೆ ಐವತ್ತು ಅಡಿ ಹಾಗೂ ಬಲಕ್ಕೆ ಐವತ್ತು ರಸ್ತೆ ಅಗಲೀಕರಣಕ್ಕಾಗಿ ಕೆಂಪು ಶಾಹಿಯಿಂದ ಗುರುತನ್ನು ಮಾಡಿದರು.
ನೋಟಿಸ್ ಜಾರಿ: ಸುಮಾರು ತಿಂಗಳ ನಂತರ ಜಿಲ್ಲಾಧಿಕಾರಿ ಪತ್ರದ ಉಲ್ಲೇಖ 9113 ದಿನಾಂಕ 09-12- 2011 ಹಾಕಿ ದಿನಾಂಕ 02-06- 2012 ರಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸರ್ಕಾರದ ಒತ್ತುವರಿ ಮಾಡಿಕೊಂಡ ಸ್ಥಳವನ್ನು ಏಳು ದಿನಗಳೊಳಗೆ ತೆರವುಗೊಳಿಸಬೇಕೆಂದು ಮುಖ್ಯರಸ್ತೆಯ ಎಡ- ಬಲವುಳ್ಳ ಮನೆ ಮಾಲೀಕರಿಗೆ ಹಾಗೂ ವ್ಯಾಪಾರಸ್ಥರಿಟ್ಞಗೆ ನೋಟಿಸ್ ಜಾರಿ ಮಾಡಿದರು.
ನೋಟಿಸ್ ಜಾರಿ ಮಾಡಿ ಎರಡು ವರ್ಷಗಳಾಗುತ್ತಾ ಬಂದರು ಇನ್ನು ರಸ್ತೆ ಅಗಲೀಕರಣದ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇದರಿಂದಾಗಿ ಈ ಕಿರಿದಾದ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸಲು ಚಾಲಕರು ಹರ ಸಾಹಸ ಪಡುವಂತಾಗಿದೆ.
ಈ ರಸ್ತೆಯನ್ನು ಅಗಲೀಕರಣ ಮಾಡಲು ಏನಾದರು ತೊಂದರೆಗಳಿದ್ದರೆ ಬೈಪಾಸ್ ರಸ್ತೆಯನ್ನು ಶೀಘ್ರದಲ್ಲಿಯೇ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ವಾಹನ ಚಾಲಕರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

