ಕಾನೂನು ಅರಿವಿಗಾಗಿ ಸಂಚಾರಿ ಕಾನೂನು ರಥ ಅಭಿಯಾನ
ಶಹಾಪುರ: ತಾಲೂಕಿನಲ್ಲಿ ಕಾನೂನಿನ ಕುರಿತು ಕನಿಷ್ಠ ಜ್ಞಾನ, ಅರಿವು ಮೂಡಿಸುವ ದಿಸೆಯಲ್ಲಿ ಕನೂನಿನ ಬಗ್ಗೆ ಮಾಹಿತಿ ನೀಡಲು ಫೆ.16ರಿಂದ 18ರವರೆಗೆ ಶಹಾಪುರ ತಾಲೂಕಿನ ನಾನಾ ಕಡೆ ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಹೆಚ್. ದೇವರಾಜ ಶಹಾಪುರ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಆಯೋಜಿಸಿದಂತೆ ಶಹಾಪುರ ತಾಲೂಕಿನಲ್ಲಿ ಕಾನೂನು ರಥ ಸಂಚರಿಸಲಿದ್ದು, ಜತೆಜತೆಗೆ ಹಳ್ಳಿಗಳಲ್ಲಿ ನುರಿತ ಕಾನೂನು ತಜ್ಞರಿಂದ ಕಾನೂನಿನ ಉಪನ್ಯಾಸ ಮತ್ತು ತಿಳಿವಳಿಕೆ ನೀಡಲಾಗುತ್ತದೆ. ಕಾನೂನು ಅರಿವು ಶಿಬಿರದ ಮೂಲಕ ಈಗಾಗಲೇ ನಿಗದಿ ಪಡಿಸಿದ ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಖರ್ಚು ಇಲ್ಲದೆ, ರಾಜಿ ಸಂಧಾನಗಳ ಮೂಲಕ ಪ್ರಕರಣ ಇತ್ಯರ್ಥ ಪಡಿಸಲಾಗುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಕಾನೂನು ಪ್ರಾಧಿಕಾರ ಯಾದಗಿರಿ, ತಾಲೂಕಾ ಕಾನೂನು ಸೇವಾ ಸಮಿತಿ ಶಹಾಪುರ, ಹಾಗು ತಾಲೂಕಾ ನ್ಯಾಯಾವಾದಿಗಳ ಸಂಘ ಮತ್ತು ತಾಲೂಕಾಡಳಿತ, ತಾಲೂಕ ಪಂಚಾಯತ, ಶಿಕ್ಷಣ ಇಲಾಖೆ, ಹಾಗು ಪೊಲೀಸ್ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಗಳ ಇಲಾಖೆಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ.
ಕಾರ್ಯಕ್ರಮದ ವಿವರ: ಫೆ.16ರಂದು ಸ್ಥಳೀಯ ನ್ಯಾಯಾಲಯದ ಆವರಣ, ತಾಲೂಕಿನ ವಡಗೇರಾ, ತುಮಕೂರ, ಬೆಂಡೆಬೆಂಬಳಿ ಗ್ರಾಮಗಳಲ್ಲಿ ಕಾನೂನು ರಥ ಸಂಚರಿಸಲಿದೆ. 17ರಂದು ಗೋಗಿ, ನಾಗನಟಗಿ, ಹೋತಪೇಟದಲ್ಲಿ ಕಾನೂನು ತಿಳಿವಳಿಕೆ ನೀಡಲಾಗುವುದು.
18ರಂದು ಭೀಮರಾಯನಗುಡಿ ಕೃಷಿ ಕಾಲೇಜಿನಲ್ಲಿ, ಶಿರವಾಳ, ಸಗರ ಗ್ರಾಮದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಕೆಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

