ಗುಲ್ಬರ್ಗಾ

ಮೂಲ ಸೌಲಭ್ಯ ಕಲ್ಪಿಸುವುದು ನನ್ನ ಗುರಿ: ಶಾಸಕ ಸಿರವಾಳ

Published On :

ಕೆಂಭಾವಿ: ಕ್ಷೇತ್ರದ ಪ್ರತಿ ಗ್ರಾಮಗಳಿಗೂ ಉತ್ತಮ ರಸ್ತೆ, ಕುಡಿವ ನೀರು, ಶಿಕ್ಷಣ ಒದಗಿಸುವುದು ನನ್ನ ಗುರಿ ಎಂದು ಶಾಸಕ ಗುರು ಪಾಟೀಲ ಸಿರವಾಳ ಹೇಳಿದರು. ಸಮೀಪದ ಮಲ್ಲಾ ಗ್ರಾಮದಲ್ಲಿ ಗುರುವಾರ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಲೋಕೋಪಯೋಗಿ ಇಲಾಖೆ ವತಿಯಿಂದ ಸಿಂದಗಿ- ಕೊಡಂಗಲ್ ರಾಜ್ಯ ಹೆದ್ದಾರಿಯ ಮಲ್ಲಾದಿಂದ ಗೋಗಿವರೆಗಿನ 17 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಮಲ್ಲಾದಿಂದ ಗೋಗಿವರೆಗೆ ರಸ್ತೆಯು ಸಂಪೂರ್ಣ ಹದಗೆಟ್ಟು ಹೋಗಿತ್ತು. ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿದ್ದವು, ಇದೀಗ ಕಾಮಗಾರಿ ಪ್ರಾರಂಭವಾಗಿದ್ದು, 5.5 ಮೀ. ಅಗಲದ ಉತ್ತಮ ಡಾಂಬರೀಕೃತ ರಸ್ತೆ ನಿರ್ಮಾಣವಾಗಲಿ, ಕ್ಷೇತ್ರದ ಜನತೆಗೆ ಉತ್ತಮ ಕುಡಿವ ನೀರು, ಒಳ್ಳೆಯ ರಸ್ತೆ, ಸಮರ್ಪಕ ವಿದ್ಯುತ್ ಗುಣಮಟ್ಟದ ಶಿಕ್ಷಣ ಕೊಡುವುದೇ ನನ್ನ ಗುರಿಯಾಗಿದೆ. ಐದು ವರ್ಷಗಳಲ್ಲಿ ಪ್ರತಿ ಗ್ರಾಮಕ್ಕೂ ಮೂಲ ಸೌಲಭ್ಯಗಳನ್ನು ಒದಗಿಸುವೆ ಎಂದರು.
ಬಹುಗ್ರಾಮ ಯೋಜನೆಯಡಿ: ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಎಸ್‌ಎಸ್‌ಡಿಪಿ ಯೋಜನೆಯಡಿ ಬಹುಗ್ರಾಮ ಯೋಜನೆಯಡಿಯಲ್ಲಿ ಏವೂರ, ಖಾನಾಪುರ, ನಗನೂರ ಗ್ರಾಮಗಳಿಗೆ 6 ಕೋಟಿ, ಮಲ್ಲಾ, ಹದನೂರ ಗ್ರಾಮಗಳಿಗೆ 5 ಕೋಟಿ, ಮದ್ದರಕಿ, ಗೋಗಿ, ಸಿಂಗನಾಳ ಗ್ರಾಮಗಳಿಗೆ 13 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಸ್‌ಇಪಿಟಿಎಸ್ಪಿ ಯೋಜನೆಯಡಿ ರಸ್ತೆ, ಕುಡಿವ ನೀರಿಗಾಗಿ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಾರಂಭಗೊಳ್ಳಲಿವೆ. ಗುತ್ತಿಬಸವೇಶ್ವರ ಸೂತ್ತಲಿನ 13 ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸವ ನಿಟ್ಟಿನಲ್ಲಿ ಪರಿಶೀಲನೆ ನಡೆಸಲು ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಲಾಗಿದ್ದು ಕಾರ್ಯ ನಡೆಯಲಿದೆ ಎಂದರು.
  ತಾಪಂ ಸದಸ್ಯ ಕೃಷ್ಣಮ್ಮ ಬಡಗೇರ, ರಾಜು ಗೂಗಲ್, ಗ್ರಾಪಂ ಅಧ್ಯಕ್ಷ ಶಿವರಾಜ ಹೊಸಮನಿ, ಗೌಡಪ್ಪಗೌಡ ಬಿರಾದಾರ, ಅಮೃತ, ಖಾಜಾ ಹುಸೇನ, ಸಿದ್ದಪ್ಪ, ಶರಣಪ್ಪ ತಾಳೆವಾಡಿ, ದೇವಿಂದ್ರಪ್ಪ, ಅಧಿಕಾರಿಗಳಾದ ಎಇಇ ಸುಭಾಸ, ಎಇ ವಿಶ್ವನಾಥ ರಡ್ಡಿ, ಹೈಗ್ರೀವ್ ಇನಫೋಟೆಕ್ ಪ್ರಜೆಕ್ಟ್ ಲಿ. ವಿಶಾಖಪಟ್ಟಣದ ವ್ಯವಸ್ಥಾಪಕ ನಾರಾಯಣರಾವ ಇದ್ದರು. ಈಶ್ವರ ಬಡಿಗೇರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.