ವಚನಗಳ ಅಧ್ಯಯನಕ್ಕೆ ಪ್ರತ್ಯೇಕ ವಿವಿ ಸ್ಥಾಪಿಸಿ
ಕ.ಪ್ರ. ವಾರ್ತೆ ಗುಲ್ಬರ್ಗ ಫೆ.16
ಇಲ್ಲಿಂದ 33 ಕಿಮೀ ದೂರದಲ್ಲಿರುವ ಕಮಲಾಪುರದಲ್ಲಿ ನಡೆದ ಗುಲ್ಬರ್ಗ ತಾಲೂಕು ಚೊಚ್ಚಲ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಬರಹಗಾರ ಸುಭಾಷಚಂದ್ರ ಕಶೆಟ್ಟಿ ವಚನ ಸಾಹಿತ್ಯ ಅಧ್ಯಯನಕ್ಕೆ ಪ್ರತ್ಯೇಕ ವಿವಿ ಸ್ಥಾಪನೆಗೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಮ್ಮೇಳನದ ಸರ್ವಾಧ್ಯಕ್ಷರ ಸ್ಥಾನದಿಂದ ಮಾತನಾಡಿದ ಕಶೆಟ್ಟಿ, 12ನೇ ಶತಮಾನದಲ್ಲಿನ ವಚನ ಕ್ರಾಂತಿ ಗುಲ್ಬರ್ಗ- ಬೀದರ್ ಭಾಗದಿಂದ ಹುಟ್ಟಿಕೊಂಡು ನಾಡಿನಾದ್ಯಂತ ತನ್ನದೇ ಛಾಪು ಮೂಡಿಸಿದೆ. ವಚನಗಳಲ್ಲಿನ ಮೌಲ್ಯಗಳು, ವಿಚಾರಗಳು ಅವಿತು ಕುಳಿತಿವೆ. ಅವುಗಳ ಅಧ್ಯಯನವಾಗಬೇಕಾದಲ್ಲಿ ವಿವಿ ಬೇಕೇಬೇಕು ಎಂದರು.
ವಿವಿ ಸ್ಥಾಪನೆ ಸೂಕ್ತ: ನೂರಾರು ವರ್ಷಗಳ ಹಿಂದಿನಿಂದ ಮಠಗಳಿವೆ. ಅನೇಕ ಮಠಗಳಲ್ಲಿ ತಾಡೋಲೆಗಳಲ್ಲಿಯೂ ವಚನಗಳು ಬರೆಯಲಾಗಿದೆ. ಹೀಗೆ ಹಸ್ತಪ್ರತಿ, ತಾಡೋಲೆಗಳನ್ನೆಲ್ಲ ಸಂಗ್ರಹಿಸುವ ಕೆಲಸ ವಿವಿ ಮಾಡಲು ಸಾಧ್ಯವೇ ಹೊರತು ಇನ್ನಾರು ಮಾಡಲು ಸಾಧ್ಯ.
ಸರ್ಕಾರ ತಕ್ಷಣ ವಚನ ಸಾಹಿತ್ಯ ಅಧ್ಯಯನಕ್ಕೆ ವಿವಿ ಸ್ಥಾಪಿಸುವುದು ಹೆಚ್ಚು ಸೂಕ್ತ ಎಂದರು.
ಶರಣರ ವಚನ, ಅಲ್ಲಿನ ತತ್ವಗಳು ಉತ್ತಮ ಬದುಕಿಗೆ ಪೂರಕ. ಇವುಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದ ಕಶೆಟ್ಟಿಯವರು, ಧರ್ಮದಲ್ಲಿಯೂ ಮೌಢ್ಯಗಳೊಂದಿಗೆ ಭ್ರಷ್ಟತೆ ತುಂಬಿದೆ. ಇವುಗಳನ್ನು ಹೋಗಲಾಡಿಸಲು ವಚನ ಸಾಹಿತ್ಯ ಅಧ್ಯಯನ ಅಗತ್ಯವಿದೆ ಎಂದರು.
ಸಾನಿಧ್ಯ ವಹಿಸಿದ್ದ ಹಾರಕೂಡ ಚೆನ್ಮಲ್ಲ ಸ್ವಾಮಿ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ಮಾಲೀಪಾಟೀಲ್, ಶಾಸಕ ರಾಮಕೃಷ್ಣ, ಅಭಾ ಶಸಾಪ ಉಪಾಧ್ಯಕ್ಷ ಅಪ್ಪಾರಾವ ಅಕ್ಕೋಣೆ, ಎಚ್ಕೆಇ ಸಂಸ್ಥೆಯ ಶಶಿಲ್ ನಮೋಶಿ, ಶಿವಶರಣಪ್ಪ ಧಾಬಾ, ಶಿವರಾಜ ಅಂಡಗಿ, ವಚನ ಸಾಹಿತ್ಯ ಅಕಾಡೆಮಿಯ ವಿಜಯ ತೇಗಲತಿಪ್ಪಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

