ಪದಾಧಿಕಾರಿಗಳು
ಶಹಾಬಾದ್: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯ ವಾಡಿ ವಲಯ ಅಧ್ಯಕ್ಷ ಸಿದ್ದು ಪಂಚಾಳ ನೇತೃತ್ವದಲ್ಲಿ ಅಟೋ ಚಾಲಕರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಭೋಜು ರಾಠೋಡ- ಅಧ್ಯಕ್ಷ, ವಿಕ ರಾಠೋಡ, ವಿನೋಧ ರಾಠೋಡ- ಉಪಾಧ್ಯಕ್ಷರು, ವಿಠಲ ರಾಠೋಡ- ಪ್ರಧಾನ ಕಾರ್ಯದರ್ಶಿ, ಸಂತೋಷ ಪವಾರ, ಸಂಜಯ ಚವ್ಹಾಣ, ಅಂಬು ಚವ್ಹಾಣ, ಅನಿಲ ಚವ್ಹಾಣ, ವಿನೋದ ರಾಠೋಡ, ವಿಕಾಸ ರಾಠೋಡ, ಶಿವಾಜಿ ರಾಠೋಡ, ದತ್ತಾ ರಾಠೋಡ, ಮಿಥುನ್ ರಾಠೋಡ- ಸಹ ಕಾರ್ಯದರ್ಶಿ, ಕಾಶೀನಾಥ ಚವ್ಹಾಣ- ಸಂಚಾಲಕ, ಗೋವಿಂದ ಚವ್ಹಾಣ- ಖಜಾಂಚಿ. ಉಳಿದ ಎಲ್ಲ ಅಟೋ ಚಾಲಕರನ್ನು ಸದಸ್ಯರನ್ನಾಗಿ ನೇಮಿಸಲಾಯಿತು. ವಾರ್ಡ್ 1ರ ಬಸವಣ್ಣ ಖಣಿ ಭಾಗದಲ್ಲಿ ಗಣೇಶ ರಾಠೋಡ- ಅಧ್ಯಕ್ಷ, ರಾಮು, ರಮೇಶ ಗೋವಿಂದ ಸದಸ್ಯರನ್ನಾಗಿ, ವಾರ್ಡ್ 17ರ ಶಿವರಾಯ ಚೌಕ್ ಭಾಗದಲ್ಲಿ ಅರುಣಕುಮಾರ ಮಂತ್ರಿ- ಅಧ್ಯಕ್ಷ, ರಮೇಶ ಗೌಲ್, ಕೊರೇಶ ಸಿಂಧೆ, ನಿಂಗಾರೆಡ್ಡಿ ಮಡಿವಾಳ, ಸುನೀಲ ಚವ್ಹಾಣ, ಸಂತೋಷ ಡೊಲಾರೆ, ಪ್ರಕಾಶ ಪೂಜಾರಿ, ಪ್ರಕಾಶ ದಂಡೋತಿ, ಕಾಶೀನಾಥ ಮಡಿವಾಳ, ಗೋವಿಂದ ರಾಠೋಡ, ಪ್ರಕಾಶ ಚವ್ಹಾಣ್ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
21ರಂದು ಧರಣಿ
ಗುಲ್ಬರ್ಗ: ತುಟ್ಟಿಭತ್ಯೆ, ನಿವೃತ್ತಿ ವೇತನ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಫೆ.21ರಂದು ಕೆಬಿಎನ್ ಕಾಲೇಜಿನಲ್ಲಿ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಖಾಜಾ ಬಂದೇ ನವಾಜ್ ಎಂಜಿನಿಯರಿಂಗ್ ಕಾಲೇಜಿನ ನೌಕರರ ಸಂಘ ತಿಳಿಸಿದೆ. 1990ರ ಒಪ್ಪಂದದಂತೆ ಸರ್ಕಾರದ ಆದೇಶದಂತೆ ತುಟಿಭತ್ಯೆ ಹೆಚ್ಚಾದಂತೆ ನಮಗೂ ತುಟ್ಟಿಭತ್ಯೆ ಹೆಚ್ಚಿಸಬೇಕು. ಸಿಬ್ಬಂದಿಗೆ ರಜೆ ಎನ್ಕ್ಯಾಷಮೆಂಟ್ ನೀಡಬೇಕು. ನಿವೃತ್ತಿ ವೇತನ ನೀಡಬೇಕು. ಪ್ರತಿ ತಿಂಗಳು 5ನೇ ತಾರೀಕಿನೊಳಗೆ ವೇತನ ನೀಡಬೇಕು. ಮೆಡಿಕಲ್ ಅಲೈನ್ಸ್ ಮತ್ತು 30 ವರ್ಷದಿಂದಲೂ ಸೇವೆ ಸಲ್ಲಿಸುತ್ತಿರುವ ಪ್ರಮೋಷನ್ ನೀಡಬೇಕು. ಹೀಗೆ ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘ ತಿಳಿಸಿದೆ. ನಮ್ಮ ಯಾವುದೇ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಫೆ. 28ರಂದು ಕೆಬಿಎನ್ ಕಾಲೇಜಿನ ಎದುರುಗಡೆ ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಸಂಘ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

