ಗುಂಡು ಹಾರಿಸಿ ಸುಲಿಗೆ ಮಾಡಿದ ಕದೀಮರು...
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.17
ಇಲ್ಲಿನ ಜೇವರ್ಗಿ ರಸ್ತೆಯ ಸಮಾಧಾನ ಆಶ್ರಮದ ಬಳಿ ಫೆ.15ರಂದು ಹಾಡುಹಗಲೇ ಖದೀಮರು ಗುಂಡು ಹಾರಿಸಿ ದಾರಿಹೋಕರನ್ನು ಸುಲಿಗೆ ಮಾಡಿರುವ ಘಟನೆ ಫರಹತಾಬಾದ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಬೈಕ್ ಸವಾರರಾಗಿದ್ದ ಪಂಚಶೀಲ ನಗರದ ಕೈಲಾಸ ಕಿಶನ್ರಾವ ಶಹಾಪುರ ಹಾಗೂ ಶರಣಪ್ಪ ಕಲ್ಲಪ್ಪ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಕೋಟನೂರ್(ಡಿ)ನಿಂದ ಅಯ್ಯಪ್ಪಸ್ವಾಮಿ ಮಂದಿರದ ರಸ್ತೆಯಲ್ಲಿ ಕೈಲಾಸ ಹಾಗೂ ಶರಣು ಇಬ್ಬರೂ ಬೈಕ್ ಮೇಲೆ ಭಾಗ್ಯವಂತಿ ದೇವಿ ದರುಶನಕ್ಕೆ ತೆರಳಿ ಮರಳುತ್ತಿರುವಾಗ ಈ ಗುಂಡು ಹಾರಿಸಿದ ಪ್ರಸಂಗ ಸಂಭವಿಸಿದೆ.
ಗುಂಡು ಹಾರಿಸಿದ ಆಗಂತುಕರು: ದಾರಿಯಲ್ಲಿರುವ ಶಿವಶರಣಾನಂದ ಮಠದ ಕ್ರಾಸ್ ಬಳಿ ಈ ಗೆಳೆಯರು ಹೊರಟಿದ್ದಾಗ ದಾರಿಗೆ ಅಡ್ಡಲಾಗಿ ಬಂದ ಆಗಂತುಕರು ತಡೆದು ನಿಲ್ಲಿಸಿದ್ದಾರೆ, ಆಗ ವಾಗ್ವಾದ ನಡೆದಿದೆ. ಹಣ ಕೊಡುವಂತೆ ಆಗ್ರಹಿಸಿದ್ದಾರೆ. ಅದಕ್ಕೆ ಕೈಲಾಸ ಹಾಗೂ ಶರಣಪ್ಪ ನಿರಾಕರಿಸಿದ್ದಾರೆ. ಆಗ ಕೋಪದಿಂದ ಆಗಂತುಕರಲ್ಲಿ ಒಬ್ಬ ಕೈಲಾಸನ ಕಣ್ಣಿಗೆ ಮುಷ್ಠಿಯಿಂದ ಗುದ್ದಿದ್ದಾನೆ. ಇನ್ನೊಬ್ಬ ತನ್ನ ಬಳಿಯಿದ್ದ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾನೆ. ಈ ಗುಂಡು ತಾಗಿ ಕೈಲಾಸ ಹಾಗೂ ಶರಣಪ್ಪ ಗಾಯ ಅನುಭವಿಸಿದ್ದಾರೆ.
ಇದಾದ ನಂತರ ಖದೀಮರು ಗಾಯಗೊಂಡ ಇವರಿಬ್ಬರ ಬಳಿಯಿದ್ದ ಬಂಗಾರದ ಚೈನ್, 3 ಸಾವಿರ ನಗದು, ಮೊಬೈಲ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ರಸ್ತೆ ಪಕ್ಕದಲ್ಲೇ ಇರುವ ಡಾಲರ್ಸ್ ಕಾಲೋನಿ ಫಲಕದ ಬಳಿಯೇ ಈ ಸುಲಿಗೆ ಘಟನೆ ಸಂಭವಿಸಿದೆ. ಗುಂಡೇಟಿನಿಂದ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದಾಗ ಕೈಲಾಸ ಹಾಗೂ ಶರಣಪ್ಪ ಇವರನ್ನು ಖದೀಮರು ಸುಲಿಗೆ ಮಾಡಿದ್ದಾರೆ.
ಸಾರ್ವಜನಿಕರು ಭಯಭೀತ: ಸುಲಿಗೆ ಮಾಡಲು ಗುಂಡು ಹಾರಿಸಿದ್ದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಹೀಗಾಗಿ ನಗರ ನಾಗರಿಕರು ಈ ಘಟನೆಯಿಂದ ತಲ್ಲಣಗೊಂಡಿದ್ದಾರೆ. ನಡು ಮಧ್ಯಾಹ್ನವೇ ಇಂತಹ ದುಷ್ಕೃತ್ಯ ಅದೂ ನಗರ ಹೊರವಲಯದಲ್ಲಿ ನಡೆಯುತ್ತದೆ ಎಂದ ಮೇಲೆ ಸಾಮಾನ್ಯ ಜನತೆ ಗುಲ್ಬರ್ಗದಲ್ಲಿ ಅದೆಷ್ಟು ಸುರಕ್ಷಿತಯ ಎಂದು ಪ್ರಶ್ನಿಸುತ್ತಿದ್ದಾರೆ.
ನಗರದಲ್ಲಿ ಕಳೆದೊಂದು ವರ್ಷದಿಂದ ಸೇಫ್ ಸಿಟಿ ಯೋಜನೆ ಜಾರಿಯಲ್ಲಿದೆ. ಇದರಡಿ ಮಂಜೂರಾಗಿ ಬಂದಿರುವ 16ಕ್ಕೂ ಅಧಿಕ ಟ್ಯಾಂಗೋ ವಾಹನಗಳು ಗಸ್ತು ತಿರುಗುತ್ತಿರುತ್ತವೆ. ಘಟನೆ ಸಂಭವಿಸಿರುವ ಪ್ರದೇಶವೂ ನಗರ ವಸತಿ ತಾಣವೇ. ಇದೇ ಪ್ರದೇಶದ ಸುತ್ತಮುತ್ತ ಕಾರಾಗೃಹ ಸಿಬ್ಬಂದಿ ಮನೆ, ಆಕಾಶವಾಣಿ ವಸತಿ ಗೃಹಗಳೂ ಇವೆ. ಇಂತಹ ಪರಿಸರದಲ್ಲೇ ಸುಲಿಗೆ ನಡೆದಿರುವುದು ಆತಂಕ ಮೂಡುವಂತೆ ಮಾಡಿದೆ.
ಸುಲಿಗೆಗೂ ಖದೀಮರ ತಂಡಗಳು ಅಕ್ರಮ ಪಿಸ್ತೂಲ್ ಬಳಸುತ್ತಿದ್ದರೂ ಈ ಘನೆಯ ಬಗ್ಗೆ ಪೊಲೀಸರು ಯಾವುದೇ ಚಕಾರ ಎತ್ತದೆ ತಮ್ಮ ಪಾಡಿಗೆ ತಾವಿರುವುದು ನಾಗರಿಕರ ಮನದಲ್ಲಿ ಅಭದ್ರತೆ ಭಾವ ಮೂಡುವಂತೆ ಮಾಡಿದೆ.
ಕದೀಮರ ಪತ್ತೆಗೆ ಕ್ರಮವೇನು?
ಸುಲಿಗೆ ಪ್ರಕರಣದಲ್ಲಿ ಅಕ್ರಮ ಪಿಸ್ತೂಲ್ ಬಳಸಲಾಗಿದೆ ಎಂದು ಪೊಲೀಸರೇ ಪ್ರಕರಣ ದಾಖಲಿಸಿದ್ದಾರೆ. ಅಕ್ರಮ ಪಿಸ್ತೂಲ್ ಪತ್ತೆ ಹಚ್ಚುವಲ್ಲಿ ಅದ್ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಬಗ್ಗೆ ಘಟನೆ ಸಂಭವಿಸಿ ಎರಡು ದಿನಗಳಾದರೂ ಬಾಯಿ ಬಿಟ್ಟಿಲ್ಲ.
ಹೀಗಾಗಿ ಸಾರ್ವಜನಿಕರು ಬೈಕ್ ಬಳಸಿ ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬರಲೂ ಹೆದರುವಂತಾಗಿದೆ. ಹೊರವಲಯದಲ್ಲಿ ಬೈಕ್ನಲ್ಲಿ ಸಂಚರಿಸುವಾಗ ಖದೀಮರು ಗಂಟು ಬಿದ್ದರೆ ಮಾಡೋದೇನು ಎಂದು ಜನ ಭಯಭೀತರಾಗಿದ್ದಾರೆ.
ಪೊಲೀಸರು ತಮ್ಮ ಅಸ್ತಿತ್ವ ಸಾಬೀತು ಪಡಿಸುವ ಮೂಲಕ “R¦ÞÈÚßÂVæ ಹೆದರಬೇಡಿ, «ÛÉ¥æ§ÞÈæ’ ಎಂದು ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲು ಇದು ಸಕಾಲ. ಆ ಕೆಲಸ ನಗರ ಹಾಗೂ ನಗರ ಸಮೀಪವಿರುವ ಫರತಾಬಾದ್ನಂತಹ ಠಾಣೆಗಳಲ್ಲಿನ ಖಾಕಿಪಡೆ ಮಾಡುವುದೇ ಕಾದು ನೋಡಬೇಕಷ್ಟೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

