ಗುಲ್ಬರ್ಗಾ

ಅಂಧ ಮಕ್ಕಳ ಹುರಿದುಂಬಿಸಿದ ಅಶ್ವಿನಿ ಅಂಗಡಿ

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಫೆ.18
ಇಲ್ಲಿನ ಅಂಬೂಬಾಯಿ ಅಂಧ ಮಕ್ಕಳ ಶಾಲಾ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಬೆಳಗಾವಿಯಿಂದ ಬಂದಿದ್ದ ವಿಶ್ವಸಂಸ್ಥೆ ಧೈರ್ಯ- ಸಾಹಸ ಪುರಸ್ಕಾರ ವಿಜೇತೆ ಅಶ್ವಿನಿ ಅಂಗಡಿ ಸಮಾರಂಭದಲ್ಲಿ ಬಹು ಹೊತ್ತು ಅಂಧ ಮಕ್ಕಳೊಂದಿಗೆ ಇದ್ದು ಅವರಿಗೆ ಹುರಿದುಂಬಿಸಿದಳು.
  ಸ್ವತಃ ಅಂಧೆಯಾಗಿರುವ ಅಶ್ವಿನಿ ಅಂಧರ ಬಾಳಲ್ಲಿ ಬೆಳಕು ತುಂಬುವ, ಅವರಿಗೆ ಉತ್ತಮ ಶಿಕ್ಷಣ ಒದಗಿಸುವ ದಿಶೆಯಲ್ಲಿ ಮಾಡಿರುವ ಹೋರಾಟಕ್ಕೆ ವಿಶ್ವಸಂಸ್ಥೆ ಮೆಚ್ಚಿಕೊಂಡು ಆಕೆಗೆ ಶೌರ್ಯ ಪುರಸ್ಕಾರ ನೀಡಿ ಗೌರವಿಸಿದೆ.
ಛಲದಿಂದ ಮುನ್ನುಗ್ಗಿ: ತಾನು ನಡೆದು ಬಂದ ದಾರಿಯನ್ನು ಸಮಾರಂಭದಲ್ಲಿ ಭಾಗವಹಿಸಿದ್ದ ಅಂಧರೊಂದಿಗೆ ಹಂಚಿಕೊಂಡ ಅಶ್ವಿನಿ, ಬದುಕಲ್ಲಿ ಅಂಧರು ನಾವು ಎಂದು ಹೆದರುವ, ಅನ್ಯರ ಅನುಕಂಪ ಬೇಡುವ ಅಗತ್ಯವಿಲ್ಲ, ಛಲದಿಂದ ಮುನ್ನುಗ್ಗುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದು ತನ್ನಂತೆ ಇರುವಂಥ ಬಾಲಕ- ಬಾಲಕಿಯರಿಗೆ ಕಿವಿಮಾತು ಹೇಳಿದಳು.
  ಇದೇ ಸಂದರ್ಭದಲ್ಲಿ ಅಂಧ ಮಕ್ಕಳಿಗಾಗಿ ನಡೆಸಲಾದಂತಹ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪುರಸ್ಕಾರಗಳನ್ನು ಸಂಘಟಕರು ಅಶ್ವಿನಿ ಅಂಗಡಿ ಅವರಿಂದಲೇ ವಿತರಿಸಿದರು. ಹೈಕೋರ್ಟ್ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ಸಮಾರಂಭ ಉದ್ಘಾಟಿಸಿ ಶುಭ ಕೋರಿದರು.
ಸಾಂಸ್ಕೃತಿಕ ಚಟುವಟಿಕೆ: ಶಾಲೆಯ ಆಡಳಿತ ಮಂಡಳಿಯ ಶೋಭಾರಾಣಿ ಅಗರವಾಲ್, ಶಾಲೆಯ ಅಂಧ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅಶ್ವಿನಿ ಅಂಗಡಿ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದಳು. ನಂತರ ಶಾಲೆಯ ಮಕ್ಕಳು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ನೆರವೇರಿಸಿದರು. ದತ್ತು ಅಗರವಾಲ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಬನ್ಸಿ ಪವಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ ವರ್ಗ ಸಮಾರಂಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.