'ವೇತನ ಆಯೋಗದ ವ್ಯಾಪ್ತಿಗೆ ಅಂಚೆ ನೌಕರರಿರಲಿ'
ಗುಲ್ಬರ್ಗ: ಕೇಂದದ 7ನೇ ವೇತನ ಆಯೋಗದಲ್ಲಿ ಗ್ರಾಮೀಣ ಅಂಚೆ ನೌಕರರನ್ನಪು ಸೇರ್ಪಡೆ ಮಾಡಿಕೊಳ್ಳಬೇಕು. ಜಿಡಿಎಸ್ ನೌಕರರನ್ನು ಪೌರ ನೌಕರ ಎಂದು ಪರಿಗಣಿಸಿ ಇಲಾಖೆ ನೌಕರರರಿಗೆ ಕೊಡುವಂತಹ ಸವಲತ್ತುಗಳನ್ನು ಕೊಡಬೇಕು, ಅನುಕಂಪ ಆಧಾರದ ನೌಕರಿಯನ್ನು ಶೇ. 100ರಷ್ಟು ಕೊಡಲೇಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರು ಗುಲ್ಬರ್ಗದಲ್ಲಿರುವ ಜಗತ್ ಅಂಚೆ ಕಚೇರಿ ಮುಂದೆ ಸೋಮವಾರ ಇಡೀ ದಿನ ಧರಣಿ ನಡೆಸಿದರು.
ಪೋಸ್ಟಮನ್ ಮತ್ತು ಎಂಟಿಎಸ್ಗಳ ಶೇ. 25ರಷ್ಟು ಹುದ್ದೆಗಳನ್ನು ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿಯನಮ್ನು ಕೊಡುವುದು, ಶೇ. 25 ರಷ್ಟು ಹೊರಗುತ್ತಿಗೆ ಆಧಾರದ ಹುದ್ದೆಗಳನ್ನು ತೆಗೆದುಕೊಳ್ಳಬೇಕು, ಶೇ. 50 ರಷ್ಟು ಡಿಎ ವಿಲೀನಗೊಳಿಸಬೇಕು, 2006ರ ಜನವರಿಯಿಂದ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ, ಕಾಂಟಿಂಜೆಂಟ್, ಪಾರ್ಟ್ಟೈಂ ನೌಕರರಿಗೆ ಡಿಎ ಕೊಡಬೇಕು ಎಂಬ ಬೇಡಿಕೆಗಳು ಸಂಘ ಮಂಡಿಸಿದೆ. ಸಂಘದ ವಿಭಾಗ ಕಾರ್ಯದರ್ಶಿ ದಿಗಂಬರ ಸಜ್ಜನ್, ಅಧ್ಯಕ್ಷ ಅಬ್ದುಲ್ ಜಬ್ಬರ್, ಖಜಾಂಚಿ ಪ್ರಫುಲ ಕುಮಾರ್ ಬೋರಗಾಂವ್ಕರ್ ಮತ್ತಿತರರುರು ಧರಣಿಯದ್ದರು.
ಶಾರ್ಟ್ಸರ್ಕ್ಯೂಟ್ನಿಂದ ಕಬ್ಬಿಗೆ ಬೆಂಕಿ; ಹಾನಿ
ಆಳಂದ: ವಿದ್ಯುತ್ ತಂತಿ ಸ್ಪರ್ಶಗೊಂಡ ಪರಿಣಾಮ ಹತ್ತಿಕೊಂಡ ಬೆಂಕಿಯಿಂದಾಗಿ ತಾಲೂಕಿನ ಎಲೆನಾವದಗಿ ಗ್ರಾಮದಲ್ಲಿ ಇಬ್ಬರು ರೈತರಿಗೆ ಸಂಬಂಧಿಸಿದ ಎರಡುವರೆ ಎಕರೆ ಕಬ್ಬು ಸುಟ್ಟು ಹಾನಿಯಾದ ಬಗ್ಗೆ ವರದಿಯಾಗಿದೆ.
ಗ್ರಾಮದ ಅಂಬವ್ವ ನಾಗೇಂದ್ರಪ್ಪಾ ಹಳದೊಡ್ಡಿ ಅವರಿಗೆ ಸೇರಿದ ಎರಡು ಎಕರೆ ಮತ್ತು ನಾಗೆಂದ್ರಪ್ಪಾ ಗುರುಲಿಂಗಪ್ಪಾ ನಾಗೋಜಿ ಅವರ ಅರ್ಧ ಎಕರೆ ಕಬ್ಬು ಸುಟ್ಟು ಬಸ್ಮವಾಗಿದೆ.
ವಿದ್ಯುತ್ ತಂತಿ ಹಾದು ಹೋಗಿರುವ ಕುರಿತು ರೈತರು ಸಂಬಂಧಿತ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಕಟಾವಿಗೆ ಬಂದ ಕಬ್ಬು ತಂತಿಗಳ ಸ್ಪರ್ಶದಿಂದ ಬೆಂಕಿಹತ್ತಿಕೊಂಡು ಕರಕಲಾಗಿದೆ ಎಂದು ಹಾನಿಗೊಳಗಾದ ರೈತರು ದೂರಿದರು. ಸ್ಥಳಕ್ಕೆ ಆಳಂದ ಅಗ್ನಿಶಾಮ ಠಾಣೆಯ ಸಿಬ್ಬಂದಿ ಧಾವಿಸಿ ಬೆಂಕಿನಂದಿಸುವಲ್ಲಿ ಯಶಸ್ವಿಯಾಗಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ಮನವಿ ಸಲ್ಲಿಕೆ
ಗುಲ್ಬರ್ಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಸಮಿತಿ ಸೋಮವಾರ ಜಿಲ್ಲಾಧಿಕಾರಿ ಮುಖಾಂತರ ಸಿಎಂ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದರು.
ಅಂಗವಾಡಿ ನೌಕರರ ಸಂಘಟನೆ ಸಿಐಟಿಯೂ ನೇತೃತ್ವದಲ್ಲಿ 2009ರಿಂದ ಕನಿಷ್ಠ ಕೂಲಿಗಾಗಿ ಹೋರಾಟ ಮಾಡುತ್ತಾ ಬಂದಿದೆ. ಈ ಸಲ ಬಜೆಟ್ನಲ್ಲಿ ನೌಕರರಿಗೆ 500 ರಂತೆ ಹಾಗೂ ಸಹಾಯಕರಿಗೆ 250 ಹೆಚ್ಚಸಿದೆ. ಆದರೆ ಇವತ್ತಿನ ಬೆಲೆ ಏರಿಕೆ ನಡುವೆ ಜೀವನ ಸಾಗಿಸವುದು ಬಹಳಷ್ಟು ಕಷ್ಟವಾಗಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಹಾಗೂ ಸಹಾಯಕರಿಗೆ 10 ಸಾವಿರ ಕನಿಷ್ಠ ಕೂಲಿ ಕೋಡಬೇಕು.
ಐಸಿಡಿಎಸ್ಗಾಗಿ 12ನೇ ಪಂಚವಾರ್ಷಿಕ ಯೋಜನಜಿಲ್ಲೆಗಳಲ್ಲಿ ವೇದಾಂತ ಫೌಂಡೇಶನ್ ಜೊತೆ ಮಾಡಿಕೊಂಡ ತಿಳುವಳಿಕೆ ಒಪ್ಪಂದ ರದ್ದುಪಡಿಸಬೇಕು. ಸಾದಿಲ್ವಾರು ಹಣ, ಪ್ರಭಾರ ಹುದ್ದೆಯ ಗೌರವಧನ ಹೆಚ್ಚಿಸಿ, ಮಕ್ಕಳ ಸಂಖ್ಯೆಗೆ ಅಗತ್ಯವಿರುವಷ್ಟು ಗ್ಯಾಸ್ ಪೂರೈಸಬೇಕು. ಮಾರುಕಟ್ಟೆ ದರದಂತೆ ಹಣ ನೀಡಬೇಕು. ಅಂಗನವಾಡಿ, ಕೇಂದ್ರಕ್ಕೆ ಇಲಾಖೆಯವರೇ ತಂದು ಕೊಟ್ಟು ಮತ್ತು ವಿವಿಧ ಬೇಡಿಕೆಗಳ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಸಿದ್ದಾರೆ.
ಕಾಮಗಾರಿ ನಿಧಾನ: ಪ್ರತಿಭಟನೆ
ಗುಲ್ಬರ್ಗ: ಸೂಪರ್ ಮಾರ್ಕೆಟ್ನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಮಂದಗತಿಯನ್ನು ಖಂಡಿಸಿ ಮತ್ತು ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆಯ ಆಯಕ್ತರ ಮುಖಾಂತರ ನಗರಾಭಿವೃದ್ಧಿ ಸಚಿವರಿಗೆ ಕರವೇ ಮನವಿ ಸಲ್ಲಿಸಿದೆ.
ಸೂಪರ್ ಮಾರ್ಕೆಟ್: ಎರಡು ಕಡೆ ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಅತ್ಯಂತ ನಿಧಾನವಾಗಿ ನಡೆಯುತ್ತಿರುವುದರಿಂದ ಇಲ್ಲಿನ ವ್ಯಾಪಾರಸ್ಥರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ, ಸಾರ್ವಜನಿಕರಿಗೆ ತುಂಬ ಕಷ್ಟವಾಗುತ್ತಿದೆ. ಒಂದು ವೇಳೆ ಇದೇ ರೀತಿ ಆಮೆಗತಿಯಲ್ಲಿ ಕಾಮಗಾರಿ ಮುಂದವರೆಸಿದರೆ ಗುಲ್ಬರ್ಗ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ತಿಳಿಸಿದ್ದಾರೆ. ಶಿವುಗೌಡ ಪಾಟೀಲ, ಅರವಿಂದ ನಾಟಿಕಾರ, ರಾಜೇಶ ಕುಲಕರ್ಣಿ, ಶಾಮರಾವ್ ದೊಡ್ಮನಿ ಮತ್ತಿತರರು ಇದ್ದರು.
ಲಾರಿ ಉರುಳಿ ಚಾಲಕ ಸಾವು
ಗುಲ್ಬರ್ಗ: ಮರಳು ತುಂಬಿರುವ ಲಾರಿ ಉರುಳಿ ಬಿದ್ದು ಚಾಲಕ ಮೃತಪಟ್ಟು, ಲಾರಿಯಲ್ಲಿದ್ದ ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿರುವ, ಕೈಕಾಲು ಮುರಿದುಕೊಂಡಿರುವ ಘಟನೆ ನರೋಣಾ ಠಾಣಾ ವ್ಯಾಪ್ತಿಯಲ್ಲಿ ಫೆ.17ರ ಸಂಜೆ ಸಂಭವಿಸಿದೆ.
ದುರಂತದಲ್ಲಿ ಮೃತಪಟ್ಟ ಮರಳು ಲಾರಿ ಚಾಲಕನನ್ನು ನಬಿಸಾಬ್ ಬಸವಕಲ್ಯಾಣ ಎಂದು ಗುರುತಿಸಲಾಗಿದೆ. ಶ್ರೀಚಂದದದಿಂದ ಬಬಲಾದ ಗ್ರಾಮದ ಕಡೆಗೆ ಲಾರಿ ಹೊರಟಿತ್ತು. ಟಯರ್ ಸಿಡಿದಿದ್ದರಿಂದ ಆಯತಪ್ಪಿದ ಲಾರಿ ಚಾಲಕನ ನಿಯಂತ್ರಣಕ್ಕೆ ಬರಲೇ ಇಲ್ಲ. ರಸ್ತೆ ಹಳ್ಳಕ್ಕೆ ಬಿದ್ದಾಗ ಚಾಲಕನ ತಲೆ ಜಜ್ಜಿಹೋಗಿ ಮೃತಪಟ್ಟಿದ್ದಾನೆ. ಲಾರಿಯಲ್ಲಿದ್ದ ಬಾಪು ತಂದೆ ಗುಂಡಪ್ಪ ಗೆದಗೆ, ಮಹಿಳೆಯರಾದ ರೇಣುಕಾ ಗಂಡ ಗುಂಡಪ್ಪಾ ಬಾರಾಬಾಯಿ, ದ್ರೌಪತಿ ಗಂಡ ಪ್ರಹ್ಲಾದ ತಿಳಗುಂಟೆ, ಶಾಂತಾಬಾಯಿ ಗಂಡ ರವಿ ರಂಗನೂರ, ರೇವಣ್ಣಮ್ಮ ಗಂಡ ಅಣ್ಣಪ್ಪ ಬಾರಬಾಯಿ ಗಾಯಗೊಂಡಿದ್ದಾರೆ.
ಚಿತ್ರಕಲಾ ಶಿಕ್ಷಕರ ಕಾರ್ಯಾಗಾರ
ಗುಲ್ಬರ್ಗ: ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯಕ್ತಾಶ್ರಯದಲ್ಲಿ ವಿಭಾಗ ಮಟ್ಟದ ಚಿತ್ರಕಲಾ ಶಿಕ್ಷಕರ ಮತ್ತು ಮಕ್ಕಳ ಚಿತ್ರಕಲಾ ಕಾರ್ಯಾಗಾರವನ್ನು ಫೆ.19ರಿಂದ 21ರ ವರೆಗೆ ದಿ. ಐಡಿಯಲ್ ಫೈನ್ ಆರ್ಟ್ಸ್ ಸಂಸ್ಥೆಯ ಮಾತೋಶ್ರೀ ನೀಲಗಂಗಮ್ಮ ಅಂದಾನಿ, ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.ಫೆ.19ರ ಬೆ.11ಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ರಾಧಾಕೃಷ್ಣ ಮದನಕರ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದು, ಈ.ಕ.ರಾ.ಸಾ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷರಾದ ಡಾ. ವಿ.ಜಿ. ಅಂದಾನಿ ಭಾಗವಹಿಸಲಿದ್ದಾರೆ.ಫೆ.21 ರಂದು ಸಂಜೆ 5ಕ್ಕೆ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದ್ದೇಶಕ ಎ.ರುದ್ರಪ್ಪ, ಇಲಾಖೆಯ ಆಯುಕ್ತರಾದ ರಾಧಾಕೃಷ್ಣ ಮದನಕರ, ಡಾ. ವಿ.ಜಿ. ಅಂದಾನಿ ಭಾಗವಹಿಸಲಿದ್ದಾರೆ. 100 ಚಿತ್ರಕಲಾ ಶಿಕ್ಷಕರು, 100 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಶಿವಾಜಿ ಜಯಂತಿ
ಗುಲ್ಬರ್ಗ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಫೆ.19ರಂದು ಬೆಳಿಗ್ಗೆ 11.30ಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಗುವುದು. ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಖಮರುಲ್ ಇಸ್ಲಾಂ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಚಿವ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಎನ್. ಧರ್ಮಸಿಂಗ್ ಮತ್ತು ಬಸವರಾಜ ಪಾಟೀಲ್ ಸೇಡಂ ಆಗಮಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ದತ್ತಾತ್ರೇಯ ಸಿ.ಪಾಟೀಲ್ ರೇವೂರ ವಹಿಸುವರು.ವಿಶೇಷ ಆಹ್ವಾನಿತರಾಗಿ ಜಿಪಂ ಅಧ್ಯಕ್ಷ ರಮೇಶ ಎಸ್.ಮರಗೋಳ್, ಶಾಸಕ ಜಿ. ರಾಮಕೃಷ್ಣ, ಮಾಲೀಕಯ್ಯ ವಿ. ಗುತ್ತೇದಾರ, ಬಿ.ಆರ್. ಪಾಟೀಲ್, ಡಾ. ಉಮೇಶ ಜಾಧವ, ಡಾ. ಅಜಯಸಿಂಗ್, ಪ್ರಿಯಾಂಕ ಖರ್ಗೆ, ಬಿ. ಶಾಣಪ್ಪ, ಅಲ್ಲಮಪ್ರಭು ಪಾಟೀಲ್, ಅಮರನಾಥ ಪಾಟೀಲ ಆಗಮಿಸುವರು. ಪುಣೆಯ ಡಾ. ಶ್ರೀಪಾದ ಸಫ್ನಿಸ್ ಆಗಮಿಸುವರು.
ಕೃಷಿ ಕಾರ್ಯಕ್ರಮ
ಗುಲ್ಬರ್ಗ: ದೂರದರ್ಶನ ಕೇಂದ್ರದ ವತಿಯಿಂದ ರೈತರಿಗೆ ಫೆ.19 ರಂದು ಸಂಜೆ 5.30ಕ್ಕೆ ಸಮಗ್ರ ಕೃಷಿ ಪದ್ಧತಿ ಕುರಿತು ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ.ರಾಯಚೂರು ಕೃಷಿ ವಿವಿಯ ಡಾ. ಬಿ.ಕೆ ದೇಸಾಯಿ, ಡಾ. ರಾಜು ತೆಗ್ಗಳ್ಳಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರೈತರು 220491 ಹಾಗೂ 220492 ನಂಬರಿಗೆ ಸಂಪರ್ಕಿಸಿ ತಮ್ಮ ಪ್ರಶ್ನೆಗಳಿಗೆ ತಜ್ಞರಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಎರಡು ದಿನ ವಿದ್ಯುತ್ ವ್ಯತ್ಯಯ
ಗುಲ್ಬರ್ಗ: ಅಫಜಲ್ಪುರದ 765 ಕೆ.ವಿ. ಜೋಡಣೆ ಹೊಸ ಮಾರ್ಗದ ಸುಧಾರಣೆ ಕೆಲಸವನ್ನು ಫೆ.19 ಹಾಗೂ 20 ರಂದು ಬೆ.8ರಿಂದ ಸಂಜೆ 6ರವರೆಗೆ ಕೈಗೊಳ್ಳಲಾಗುವುದು. ಈ ಪ್ರಯುಕ್ತ ತಾಲೂಕಿನ 110-33/11 ಕೆ.ವಿ. ಅಫಜಲ್ಪುರ ಉಪವಿತರಣಾ ಕೇಂದ್ರ ವ್ಯಾಪ್ತಿಯ ಎಫ್-6 ಹಳಿಯಾಳ, ಎಫ್-7 ಬಳ್ಳೂರರ್ಗಿ, ಎಫ್- 1 ಮಲ್ಲಾಬಾದ ಫೀಡರ್ ಮತ್ತು 33/11 ಕೆವಿ ಚೌಡಾಪುರ, ರೇವೂರ, ಗುಡೂರ ವಿದ್ಯುತ್ ಉಪವಿತರಣಾ ಕೇಂದ್ರಗಳ ಮೇಲೆ ಬರುವ ಹಳಿಯಾಳ, ಬಳ್ಳೂರಗಿ, ಮಲ್ಲಾಬಾದ್, ಆನೂರ, ರೇವೂರ, ಕುಲಾಲಿ. ಬಡದಾಲ, ಚಿಂಚೋಳಿ, ಆತನೂರ, ಸಿದ್ದನೂರ, ಅಂಕಲಗಾ ಹಾಗೂ ಗೂಡೂರ ಸುತ್ತಮುತ್ತಲಿರುವ ಗೂಡುರ, ಬೈರಾಮಡಗಿ, ಸ್ಟೇಷನ್ ಗಾಣಗಾಪುರ, ನೀಲೂರ, ಮದರಾ(ಬಿ) ಮತ್ತು ಕೆ, ದಿಕ್ಸಂಗಾ, ಗೌಡಗಾಂವ, ಕಾರಭೋಸಗಾ, ಕೋಗನೂರ, ಗೊಬ್ಬೂರ(ಬಿ), ಗೊಬ್ಬುರವಾಡಿ, ವಡ್ಡಳ್ಳಿ, ಅರಳ್ಳಿ, ಬಿದನೂರ, ಹಾವನೂರ, ಚೌಡಾಪೂರ, ಬಾದನಳ್ಳಿ, ದಣ್ಣೂರ, ಇಂಗಳಗಿ, ಅವರಾದ, ಚಿಣಮಗೇರಾ, ಬಂದರವಾಡ, ದೇವಲಗಾಣಗಾಪುರ, ಕೆರಕನಳ್ಳಿ ತೆಲ್ಲೂರ, ಬಲ್ಲಾಡ(ಕೆ ಮತ್ತು ಬಿ), ಬಟಗೇರಾ, ತೆಗ್ಗಳ್ಳಿ, ಹೂವಿನಹಳ್ಳಿ, ಹಸರಗುಂಡಗಿ, ಚಿನ್ನಮಳ್ಳಿ, ಕಿರಸಾವಳಗಿ, ಕೆಕ್ಕರಸಾವಳಗಿ, ಟಾಕಳಿ, ಉಮರಗಾ, ಸಿರಸಗಿ ಮತ್ತು ಸಾಗನೂರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

