ಮಧುಮೇಹಕ್ಕೆ ಮದ್ದುಂಟು: ಡಾ. ವಂದನಾ ಗಾಳಿ
ಸೈದಾಪುರ: ಮಧುಮೇಹಕ್ಕೆ ಮದ್ದುಂಟು. ಅದಕ್ಕಾಗಿ ನಾವು ನಮ್ಮದೇ ಆದ ಆಹಾರ ಹಾಗೂ ವಿಹಾರ ಪದ್ಧತಿ ಅನುಸರಿಸಬೇಕೆಂದು ಜಿಲ್ಲಾ ಆಯುಷ್ ವೈಧ್ಯಾಧಿಕಾರಿ ಡಾ. ವಂದನಾ ಗಾಳಿ ಹೇಳಿದರು.
ಸಮೀಪದ ಮಾಧವಾರ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷಇಲಾಖೆ ಹಾಗೂ ಹಿಂದುಳಿದ ಪ್ರದೇಶಗಳ ಪ್ರದೇಶಾಭಿವೃದ್ಧಿ ಅನುದಾನ ಅಡಿಯಲ್ಲಿ ಆಯೋಜಿಸಲಾದ ಉಚಿತ ಮಧುಮೇಹ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಆಯಾಸ, ತೂಕಡಿಕೆ, ಬಾಯಾರಿಕೆ, ಹಸಿವು, ಅತಿಯಾದ ಮೂತ್ರ ವಿಸರ್ಜನೆ-ಇವು ಮಧುಮೇಹದ ಲಕ್ಷಣಗಳಾಗಿವೆ. ನಮ್ಮ ವಿಲಾಸಿ ಜೀವನ ಇದಕ್ಕೆ ಕಾರಣವಾಗಿದೆ. ಅಲ್ಲದೆ ಸಿಹಿ ಹಾಗೂ ಜಿಡ್ಡಿನ ಪದಾರ್ಥ,
ಅನುವಂಶೀಯತೆ ಕಾರಣ ಈ ರೋಗ ಕಂಡುಬರುತ್ತದೆ. ಇದಕ್ಕಾಗಿ ಆತಂಕಪಡುವ ಅಗತ್ಯವಿಲ್ಲ.
ಮನೆಯಲ್ಲಿಯೇ ಆಯುರ್ವೇದದ ಸರಳ ವಿಧಾನದ ಮೂಲಕ ಚಿಕಿತ್ಸೆ ಪಡೆಯಬಹುದು ಎಂದರು. ನೆಲ್ಲಿಕಾಯಿ ಹಾಗೂ ಅರಿಶಿಣ ಸಮಪ್ರಮಾಣದಲ್ಲಿ ಕುಟ್ಟಿ ದಿನಾಲು ಅದನ್ನು ಸೇವಿಸಬೇಕು. ವಾರದಲ್ಲಿ ಒಂದು ಬಾರಿಯಾದರೂ ನೇರಳೆ, ಪಪಾಯಿ ತಿನ್ನುವುದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿದೆ ಎಂದು ಹೇಳಿದರು.
ಶೇ. 70ರಷ್ಟು ಜನತೆಗೆ ಮಧುಮೇಹ: ಡಾ. ಪ್ರಮೋದ ಕುಲಕಣರ್ ಪ್ರಾಸ್ತಾವಿಕ ಮಾತನಾಡುತ್ತಾ, ಗ್ರಾಮೀಣ ಭಾಗದಲ್ಲಿ ಈ ರೋಗ ಇತ್ತೀಚೆಗೆ ಕಂಡು ಬರುತ್ತಿದೆ. ಇದಕ್ಕೆ ನಮ್ಮ ಜೀವನ ವಿಧಾನವೇ ಕಾರಣವಾಗಿದೆ. ಇಂದು ಶೇ.100ರಲ್ಲಿ ಶೇ. 70ರಷ್ಟು ಜನತೆಗೆ ಮಧುಮೇಹ ರೋಗ ಕಂಡುಬರುತ್ತಿದೆ. ಆಯುಷ ಇಲಾಖೆ ಇದರ ಬಗ್ಗೆ ಶಿಬಿರಗಳನ್ನು ಆಯೋಜಿಸಿ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು. ಇದಕ್ಕೂ ಮುಂಚೆ ಛತ್ರಪತಿ ಶಿವಾಜಿ ಹಾಗೂ ಧನ್ವಂತರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ತಾಲೂಕಾ ಪಂಚಾಯತ ಸದಸ್ಯ ತಾಯಪ್ಪ. ಎನ್. ದೊಬ್ಬಲ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯತ ಅಧ್ಯಕ್ಷೆ ವೆಂಕಟಮ್ಮ ಬನ್ನಪ್ಪ ಕಲಾಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಂಕ್ರಪ್ಪ ಕಾಳಗಿ, ಶಂಕ್ರಪ್ಪಗೌಡ ಮಾ.ಪಾಟೀಲ, ಪಂಚಾಯತ ಅಭಿವೃದ್ಧಿ ಅಧಿಕಾರಿ ಗಾಯಿತ್ರಿ ತೆಗ್ಗಳ್ಳಿ, ಜಿಲ್ಲಾ ಆಯುಷ ನೋಡಲ್ ಅಧಿಕಾರಿ ಡಾ.ರಮೇಶ ಸಜ್ಜನ, ಆಯುಷ ವೈದ್ಯರು ಹಾಗೂ ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

