ಗುಲ್ಬರ್ಗಾ

ಸಿಎಂ ತಾತ್ಕಾಲಿಕ ಜಿಲ್ಲಾ ಪ್ರವಾಸ

Published On :

ಗುಲ್ಬರ್ಗ: ಸಿಎಂ ಸಿದ್ದರಾಮಯ್ಯ ಅವರು ಫೆ.28ರಂದು ಬೆ.8ಕ್ಕೆ ಬೆಂಗಳೂರು- ಜಕ್ಕೂರು ಏರೋ ಡ್ರೋಂ (ಹೆಲಿಕಾಪ್ಟರ್ ಮೂಲಕ) 9.15ಕ್ಕೆ ಜಿಂದಾಲ್ ಏರ್ಸ್ಟ್ರಿಪ್, ತೋರಣಗಲ್ಲುಗೆ ಆಗಮಿಸುವರು. 9.45ಕ್ಕೆ ಚಿತ್ತಾಪುರ ತಾಲೂಕಿನ ವಾಡಿ ಎಸಿಸಿ ಸಿಮೆಂಟ್ ಕಾರ್ಖಾನೆ ಆವರಣದಲ್ಲಿರುವ ಹೆಲಿಪ್ಯಾಡ್ಗೆ ಆಗಮಿಸುವರು. ಬೆ.11ಕ್ಕೆ ವಾಡಿ ರೈಲು ನಿಲ್ದಾಣದಲ್ಲಿ ವಾಡಿ- ಗದಗ ಹೊಸ ರೇಲ್ವೆ ಮಾರ್ಗದ ಶಂಕುಸ್ಥಾಪನೆ ನೆರವೇರಿಸುವರು. ಮ.12ಕ್ಕೆ ಎಸಿಸಿ ಸಿಮೆಂಟ್ ಕಾರ್ಖಾನೆ ಆವರಣದ ಹೆಲಿಪ್ಯಾಡ್ನಿಂದ ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸುವರು.
ಆತ್ಮಸಾಕ್ಷಿಯಿಂದ ಕಾರ್ಯ ನಿರ್ವಹಿಸಿ
ಗುಲ್ಬರ್ಗ: ಸಾಕ್ಷರತಾ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಸ್ವಯಂ ಸೇವಕರು, ಪ್ರೇರಕರು ಆತ್ಮಸಾಕ್ಷಿಯಿಂದ ಕೆಲಸ ಮಾಡಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ತಾಲೂಕು ಸಂಯೋಜಕ ಗುರುನಾಥ ರಾಠೋಡ ತಿಳಿಸಿದರು. ತಾಲೂಕಿನ ನಂದಕೂರ ಗ್ರಾಮದಲ್ಲಿ ನಾಲ್ಕು ದಿನಗಳ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸ್ವಯಂ ಸೇವಕರ ಕಾರ್ಯಾಗಾರವನ್ನು ಜಿಪಂ ಉಪಾಧ್ಯಕ್ಷೆ ಅನಿತಾ ಪವನಕುಮಾರ ವಳಕೇರಿ ಉದ್ಘಾಟಿಸಿದರು. ಪಿಡಿಒ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯ ಗುರುಗಳು, ಸಂಪನ್ಮೂಲ ವ್ಯಕ್ತಿಗಳಾದ ಪ್ರೇಮಾ ಪಾಟೀಲ್ ಹಾಗೂ ಮಹಾಲಿಂಗ ಮೂಲಗೆ ಉಪಸ್ಥಿತರಿದ್ದರು.
ಪಿಜಿ ಡಿಪ್ಲೊಮಾ ಫಲಿತಾಂಶ ಪ್ರಕಟ
ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯವು 2013ರ ಜುಲೈದಲ್ಲಿ ನಡೆದ ನಾಟಕ ಸಾಹಿತ್ಯ ಪಿಜಿ ಡಿಪ್ಲೊಮಾ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಸಂಭವನೀಯ ಫಲಿತಾಂಶ ಪ್ರಕಟಿಸಿದೆ. ಪರುಶುರಾಮ ಚಂದಪ್ಪ ಮಲಹಳ್ಳಿಕರ ಪ್ರಥಮ, ಗೌತಮ ಬಕ್ಕಪ್ಪ ದ್ವಿತೀಯ, ಕಪಿಲದೇವ ಚಂದ್ರಕಾಂತ ತೃತೀಯ, ಮಲ್ಲಿಕಾರ್ಜುನ ಜಗದೇವಪ್ಪ 4ನೇ, ಶಾಂತಪ್ಪ ಹನಮಂತಪ್ಪ 5ನೇ ಮತ್ತು ಅನೀಲಕುಮಾರ ರತನಸಿಂಗ್ 6ನೇ ರ್ಯಾಂಕ್ ಪಡೆದಿದ್ದಾರೆ.
ಅರ್ಜಿ ಆಹ್ವಾನ
ಗುಲ್ಬರ್ಗ: ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ 28 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ 18-44 ವರ್ಷದೊಳಗಿನ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾ.25 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು(ನಗರ) ದೂ. 08472 278661ಗೆ ಸಂಪರ್ಕಿಸಿ ಪಡೆಯಲು ಕೋರಲಾಗಿದೆ.
ಕುಂದುಕೊರತೆ ವಿಚಾರಣೆ ಇಂದು
ಗುಲ್ಬರ್ಗ: ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರು ಫೆ.28ರಂದು ಬೆ.10.30ರಿಂದ 12.30ರವರೆಗೆ ಸಾರ್ವಜನಿಕರ ಭೇಟಿ, ಕುಂದುಕೊರತೆ ವಿಚಾರಣೆ ನಡೆಸುವರು. ಮ.2 ಗಂಟೆಗೆ ಮುಖ್ಯಮಂತ್ರಿಗಳು ನೆರವೇರಿಸುವ ಚಿತ್ತಾಪುರ ತಾಲೂಕಿನ ವಾಡಿ ರೈಲು ನಿಲ್ದಾಣದಲ್ಲಿ ಗದಗ- ವಾಡಿ ಹೊಸ ರೈಲು ಮಾರ್ಗದ ಶಂಕುಸ್ಥಾಪನಾ(ಗದಗ ಭಾಗ) ಸಮಾರಂಭದಲ್ಲಿ ಭಾಗವಹಿಸುವರು. ಮ.3 ಗಂಟೆಗೆ ನಗರದ ಎಸ್ಟಿಬಿಟಿ ರಸ್ತೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ 9ಕ್ಕೆ ಯಶವಂತಪುರ- ಸೊಲ್ಲಾಪುರ ಎಕ್ಸ್ಪ್ರೆಸ್ ರೈಲು ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ಗಾಯಾಳು ಸಾವು
ಚಿಂಚೋಳಿ: ತಾಲೂಕಿನ ಚಿಮ್ಮಾಇದಲಾಯಿ ಗ್ರಾಮದ ಬಳಿ ಮಂಗಳವಾರ ಎರಡು ಬೈಕ್ಗಳ ಮುಖಾಮುಖಿ ಡಿಕ್ಕಿಯಲ್ಲಿ ತೀವ್ರ ಗಾಯಗೊಂಡಿದ್ದ ಹಳ್ಳಿಖೇಡ ಗ್ರಾಮದ ಫಾರೂಖ್ ಅಬ್ದುಲ್ ವಾಹಬ್(25) ಮೃತಪಟ್ಟಿದ್ದಾನೆಂದು ಚಿಂಚೋಳಿ ಪೊಲೀಸರು ತಿಳಿಸಿದ್ದಾರೆ. ಚಿಮ್ಮಾಇದಲಾಯಿ ಗ್ರಾಮದ ಬಳಿ ಮಂಗಳವಾರ ಸಂಜೆ ಸಂಭವಿಸಿದ ಘಟನೆಯಲ್ಲಿ ಫಾರೂಖ್ ಅಬ್ದುಲ್  ವಾಹಬ್ ತಲೆಗೆ ಪೆಟ್ಟಾಗಿ ಗಂಭೀರವಾಗಿ ಗಾಯಗೊಂಡಿದ್ದ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಂಗಳವಾರ ರಾತ್ರಿ ಮೃತಪಟ್ಟಿದ್ದಾನೆಂದು ಸಬ್ ಇನ್ಸ್ಪೆಕ್ಟರ್ ಶಿವಶಂಕರ ಸಾಹು ತಿಳಿಸಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ. ಘಟನೆಯಲ್ಲಿ ಬಸವರಾಜ್ ಬೀರಪ್ಪ, ಜಗನ್ನಾಥ ಘಾಳಪ್ಪ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಮಾಂಸ ಮಾರಾಟ ನಿಷೇಧ
ಗುಲ್ಬರ್ಗ: ಜಿಲ್ಲಾದ್ಯಂತ ಫೆ.27ರಂದು ಮಹಾಶಿವರಾತ್ರಿ ಆಚರಣೆ ಹಿನ್ನೆಲೆ ಯಾವುದೇ ರೀತಿಯ ಪ್ರಾಣಿವಧೆ ಮತ್ತು ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿ ಗುಲ್ಬರ್ಗ ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.