ಗುಲ್ಬರ್ಗಾ

ವಿದ್ಯಾರ್ಥಿಗಳ ಬಸ್ಪಾಸ್ ನಿರಾಕರಣೆ: ಪ್ರತಿಭಟನೆ

Published On :

ಶಹಾಪುರ: ಸರ್ಕಾರವು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ರಿಯಾಯಿತಿ ದರದಲ್ಲಿ ಬಸ್ಪಾಸ್ ವಿತರಣೆ ಮಾಡಿರುವುದು. ಆದರೆ ಇದಕ್ಕೆ ಅಪವಾದ ಎಂಬಂತೆ ಈ.ಕ.ರ.ಸಾ.ಸಂ. ಸಿಬ್ಬಂದಿ ಪ್ರಯಾಣ ಮಾಡುತ್ತಿರುವಾಗ ವಿದ್ಯಾರ್ಥಿಗಳಿಗೆ ಬೈದು, ಮಾನಸಿಕ ವೇದನೆ ನೀಡುತ್ತಿರುವುದು ಸಾಮಾನ್ಯವಾಗಿದೆ.
  ಬಸ್ಗಳು ಖಾಲಿ ಹೋಗುತ್ತಿರುವಾಗಲೂ ಕೂಡಾ ಮಾನವೀಯತೆ ಇಲ್ಲದೆ ಬಸ್ನಿಂದ ಕೆಳಗೆ ದಬ್ಬುತ್ತಿದ್ದಾರೆ. ಇದನ್ನು ವಿಚಾರಿಸಿದಾಗ ನೇರ ಶಹಾಪುರದಿಂದ ಯಾದಗಿರಿಗೆ (ನಾನ್ಸ್ಟಾಪ್) ಹೋಗುವ ಬಸ್ಗಳಿಗೆ ಪಾಸ್ ಸೌಕರ್ಯವಿಲ್ಲವೆಂದು ದರ್ಪದಿಂದ ಹೇಳುತ್ತಾರೆ.  ಶಹಾಪುರ ನಿವಾಸಿಯಾದ ವಿದ್ಯಾರ್ಥಿಯು ಯಾದಗಿರಿಯಲ್ಲಿ ಕಾಲೇಜಿಗೆ ಹೋಗಬೇಕಾದರೆ ಸದರಿ ಬಸ್ಸಿನಲ್ಲಿ ಅವಕಾಶವಿಲ್ಲವೆಂದರೆ ಬಸ್ಪಾಸ್ ಮಹತ್ವವೇನು. ಈ ಪಾಸ್ಗಳ ಬಗ್ಗೆ ನಮಗೆ (ವಿದ್ಯಾರ್ಥಿಗಳಿಗೆ) ಮಾರ್ಗ ಸೂಚಿಗಳು ಏನು ಎಂಬುದು ಅಧಿಕೃತವಾಗಿ ತಿಳಿಸುತ್ತಿಲ್ಲ. ಇದು ಅನ್ಯಾಯ ಎಂದು ಪ್ರತಿಭಟಿಸಿ, ವಿಭಾಗೀಯ ನಿಯಂತ್ರಿಕರು ವಿಭಾಗೀಯ ಕಾರ್ಯಾಲಯ ಈ.ಕ.ರ.ಸಾ.ಸಂ. ಯಾದಗಿರಿ ಇವರಿಗೆ ಮನವಿ ಪತ್ರ ನೀಡಿ ಸಮಸ್ಯೆಗೆ ಸ್ಪಂದಿಸಲು ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಉಪಾಧ್ಯಕ್ಷ ಬಸವರಾಜ ಅರುಣಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.