ಗುಲ್ಬರ್ಗಾ

ಸಿಲಿಂಡರ್ ಮನೆ ಬಾಗಿಲಿಗೆ ವಿತರಿಸಲು ಆಗ್ರಹಿಸಿ ಧರಣಿ

Published On :

ಶಹಾಬಾದ್: ನಗರದ ಜನತೆಗೆ ಮನೆಬಾಗಿಲಿಗೆ ಅಡುಗೆ ಸಿಲಿಂಡರ್ ವಿತರಿಸಲು ಆಗ್ರಹಿಸಿ ಸೋಷಿಯಲ್ ಡೆಮೋಕ್ರೇಟಿಕ್ ಕಾಟರ್ ವತಿಯಿಂದ ಉಪತಹಸೀಲ್ದಾರ್ ಕಚೇರಿಯ ಮುಂದೆ ಸಾಂಕೇತಿಕ ಧರಣಿ ನಡೆಸಿ, ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಅಡುಗೆ ಅನಿಲ ವಿತರಕರು ನಗರದಲ್ಲಿ ಸಮರ್ಪಕವಾಗಿ ಸಿಲೆಂಡರ್ ವಿತರಿಸಲದೆ ಇರುವ ಬಗ್ಗೆ ಕಳೆದ ತಿಂಗಳು ಜಿಲ್ಲಾಧಿಕಾರಿಗೆ, ಆಹಾರ ಇಲಾಖೆ ಅಧಿಕಾರಿಗಳಿಗೆ, ಪೊಲೀಸ್ ವಷ್ಠಾಧಿಕಾರಿಗೆ, ತಹಸೀಲ್ದಾರ್ಗೆ ಮನವಿ ಸಲ್ಲಿಸಿ 15 ದಿನಗಳಾದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ್ದರಿಂದ ಅನಿರ್ದಿಷ್ಟಾವಧಿ ಸಾಂಕೇತಿಕ ಧರಣಿ ನಡೆಸಲಾಗುತ್ತಿದೆ ಎಂದು ಪಕ್ಷದ ಅಧ್ಯಕ್ಷ ಅಬ್ದುಲ್ ರಹೀಮ್ ಖಾನ್ ಮದನಿ ಹೇಳಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕರು ಈಗಾಗಲೇ ಸ್ಥಳೀಯವಾಗಿ ಹೊಸ ಏಜಂಟರನ್ನು ನೇಮಕ ಮಾಡಲಾಗಿದ್ದು, ಅಲ್ಲಿಯವರೆಗೆ ಸಿಲೆಂಡರ್ಗಳನ್ನು ಸಮರ್ಪಕವಾಗಿ ವಿತರಿಸಲು ಈಗಿರುವ ವಿತರಕರಿಗೆ ಸೂಚಿಸಲಾಗುವುದು ಎಂದರು. ಉಪತಹಸೀಲ್ದಾರ್, ಆಹಾರ ನಿರೀಕ್ಷಕರು, ಪಿಐ ವಿಜಯಕುಮಾರ ಹೊಸ್ಮನಿ ಉಪಸ್ಥಿತರಿದ್ದರು. ಪಕ್ಷದ ಕಾರ್ಯದರ್ಶಿ ಮಹ್ಮದ ಅಕ್ಬರ್ ಹುಸೇನ, ಉಪಾಧ್ಯಕ್ಷ ಭೀಮಾಶಂಕರ ಕಾಂಬಳೆ, ಮಹ್ಮದ ಯುನುಸ್ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.