ಒಡಿಶಾ ಜೀತದಾಳುಗಳ ಮೇಲಿನ ಹಲ್ಲೆಗೆ ಖಂಡನೆ
ಶಹಾಪುರ: ಒಡಿಶಾದ ರಾಜ್ಯದಲ್ಲಿ ಜೀತದಾಳುಗಳ ಮೇಲೆ ಮಾರಣಾಂತಕ ಹಲ್ಲೆ ಮಾಡಿ ಅವರ ಕೈ ಕತ್ತರಿಸಿದ ಘಟನೆ ಖಂಡಿಸಿ ಜೀವಿಕ ಜೀತ ವಿಮುಕ್ತಿ ಕರ್ನಾಟಕ ತಾಲೂಕಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲದಾರ್ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಸಂಚಾಲಕ ನಿಂಗಣ್ಣಾ ಕೊಂಬೆನೋರ್ ಅಸಂಘಟಿಕ ಕಾರ್ಮಿಕರ ಸಾಮಾಜಿಕ ರಕ್ಷಣೆಗೆ ಕಾನೂನಿನ ಅಡಿಯಲ್ಲಿ ಜೀತದಾಳುಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಅತ್ಯಂತ ಕ್ರೂರ ಅಟ್ಟಹಾಸಗೈದ ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು. ಯಾದಗಿರಿ ಜಿಲ್ಲೆಯಲ್ಲಿ ಜೀತಪದ್ಧತಿ ಜೀವಂತ ಇದ್ದರೂ ಅಧಿಕಾರಿಗಳು ಜೀತದಾಳುಗಳು ಇಲ್ಲವೆಂದು ವರದಿ ಮಾಡುತ್ತಾ ಜೀತದಾಳುಗಳನ್ನು ಇಟ್ಟುಕೊಂಡಿರುವ ಮಾಲೀಕರ ಹಿತರಕ್ಷಣೆಗೆ ಮುಂದಾಗಿದ್ದಾರೆ. ತಕ್ಷಣವೇ ಅಧಿಕಾರಿಗಳು ಈ ಕುರಿತು ಜಾಗೃತಿ ವಹಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಜೀತ ವಿಮುಕ್ತಿ ಹೋರಾಟ ಸಮಿತಿಯ ಪದಾಧಿಕಾರಿಗಳಿದ್ದರು.
ದೂರಮ್ಮ ಕಂಚನಕವಿ ನಿಧನ
ಶಹಾಪುರ: ಪಟ್ಟಣದ ಹಳೆಪೇಟೆಯ ದೂರಮ್ಮ ಕಂಚನಕವಿ ಅನಾರೋಗ್ಯದಿಂದ ಶುಕ್ರವಾರ ನಿಧನ ಹೊಂದಿದರು. ಅವರಿಗೆ (74) ವರ್ಷ ವಯಸ್ಸಾಗಿತ್ತು. ದಿ. ಸಂಗಪ್ಪ ಮಾಸ್ಟರ್ ಕಂಚನಕವಿಯವರ ಪತ್ನಿಯಾಗಿದ್ದು, ಇವರು ಅಪಾರ ಬಂಧುಗಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಶನಿವಾರ 10ಕ್ಕೆ ಜರುಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಮೃತರ ಆತ್ಮಕ್ಕೆ ಸಮಸ್ತ ಹಳಿಪೇಟೆಯ ಜನತೆ ಸಂತಾಪ ಸೂಚಿಸಿ ಶಾಂತಿ ಕೋರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

