ಸಿದ್ದಯ್ಯ ಪುರಾಣಿಕ್ ಆಧುನಿಕ ವಚನಕಾರ: ತಡಿಬಿಡಿ ಅಭಿಮತ
ಗುರುಮಠಕಲ್: ನವೋದಯ ಸಾಹಿತ್ಯದಲ್ಲಿ ತಮ್ಮದೇ ಆದ ಹೆಸರನ್ನು ಮಾಡಿ ಆಧುನಿಕ ವಚನ ಸಾಹಿತ್ಯದ ಶ್ರೀಮಂತಿಕೆಗೆ ದುಡಿದ ಆಧುನಿಕ ವಚನಕಾರರಲ್ಲಿ ಸಿದ್ದಯ್ಯ ಪುರಾಣಿಕ್ ಮೊದಲಿಗರು ಎಂದು ಯುವ ಸಾಹಿತಿ ಸುರೇಶ ತಡಿಬಿಡಿ ಹೇಳಿದರು. ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ಗುರುಮಠಕಲ್ನ ವಿದ್ಯಾಜ್ಯೋತಿ ಪ್ರೌಢಶಾಲೆಯಲ್ಲಿ ಏರ್ಪಡಿದ್ದ ಸಾಹಿತಿ- ಮಾಹಿತಿ ಕನ್ನಡದ ಜಾಗೃತಿ ಸಾಪ್ತಾಹಿಕ ಸರಣಿ ಮಾಲಿಕೆ- 7 ಡಾ. ಸಿದ್ದಯ್ಯ ಪುರಾಣಿಕರ ಪರಿಚಯ ಕಾರ್ಯಕ್ರಮದ ಉಪನ್ಯಾಸ ನೀಡಿದ ತಡಿಬಿಡಿ, ಹೈ-ಕ.ದ ಕೊಪ್ಪಳ ಜಿಲ್ಲೆಯವರಾದ ಪುರಾಣಿಕರು ವೃತ್ತಿಯಿಂದ ತತಹಸೀಲ್ದಾರರಾಗಿ, ಜಿಲ್ಲಾಧಿಕಾರಿಯಾಗಿ, ಸರ್ಕಾರದ ಅಧೀನ ಕಾರ್ಯದರ್ಶಿಯಾಗಿ, ಸರ್ಕಾರದ ವಿವಿಧ ಉನ್ನತ ಹುದ್ದೆಗಳನ್ನು ನಿಭಾಯಿಸುತ್ತಿದ್ದರೂ ಕೂಡ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದು ಸ್ಮರಣೀಯ ಎಂದರು.
ಕಾವ್ಯಾನಂದ ಎಂಬ ಕಾವ್ಯನಾಮದ ಮೂಲಕ ನಾಡಿಗೆ ಚಿರಪರಿಚಿತರಾಗಿದ್ದ ಪುರಾಣಿಕರು ಗುಲ್ಬರ್ಗದಲ್ಲಿ ನಡೆದ 56ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಡಾ. ಭೀಮಾಶಂಕರ ಮುತ್ತಗಿ ಉದ್ಘಾಟಿಸಿದರು. ಖಾಸಾಮಠದ ಗುರು ಮುರುಘರಾಜೇಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಬಸವರಾಜ ಬೂದಿ, ಪ್ರಕಾಶ ಅಂಗಡಿ ಕನ್ನಳ್ಳಿ, ನರೇಶ ಗೊಂಗ್ಲೆ, ಬಸವರೆಡ್ಡಿ ಇದ್ದರು. ಚನ್ನಬಸವ ರೆಡ್ಡಿ ಅಧ್ಯಕ್ಷತೆ, ಹರೀಶಕುಮಾರ ನಿರೂಪಿಸಿ ವೆಂಕಟೇಶ ಸ್ವಾಗತಿಸಿ ವಿಜಯಕುಮಾರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

