ಭೀಮಕವಿ ಸಗರನಾಡು ಕಂಡ ಒರ್ವ ಶ್ರೇಷ್ಠ ಕವಿ: ಡಾ. ಡಂಬಳ್
ಶಹಾಪುರ: ಇವರ ರಚನೆಗಳು ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಗಳ ಬೆಳೆವಣಿಗೆಗೆ ಸಹಾಕಾರಿ ಎಂದು ಡಾ. ಶಾಂತಪ್ಪ.ಡಂಬಳ್ ಹೇಳಿದರು.
ರಸ್ತಾಪುರದಲ್ಲಿ ನಡೆದ ಕನ್ನಡ ಸಾಂಸ್ಕೃತಿಕ ಶಕ್ತಿ ಕೇಂದ್ರ ಸುರುಪುರ ಹಾಗೂ ಬಸವಶ್ರೀ ಶಿಕ್ಷಣ ಗ್ರಾಮೀಣಾಭೀವೃದ್ಧಿ ಸಂಸ್ಥೆಯ ಸಂಯುಕ್ತಶ್ರಯದಲ್ಲಿ ನಡೆದ ರಸ್ತಾಪೂರ ಭೀಮಕವಿಯ ಜೀವನ ಮತ್ತು ಸಾಹಿತ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೀಮಕವಿಯ ರಚನೆಗಳು, ಚಿಂತನೆಗಳು ನಮಗೆಲ್ಲ ಮಾದರಿಯಾಗಿವೆ ಎಂದು ಬಾಸ್ಕರರಾವ್ ಮೂಡಬೂಳ ಪ್ರಾಸ್ತಾವಿಕ ನುಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಬಸವರಾಜ ಜಮದಾರಖಾನಿ, ನಾಗಲಿಂಗಪ್ಪ ಶಹಾಫೂರಕರ್, ಶರಣಪ್ಪ ಯಾಳವಾರ ಶರಭಲಿಂಗ ಗಂಗಾಧರ ಶ್ರೀ ಉಪಸ್ಥಿತರಿದ್ದರು. ಖಂಡಪ್ಪಗೌಡ, ಶಂಭನಗೌಡ ಮಾಲಿಪಾಟೀಲ್, ಕೃಷ್ಣ ಸುಬೇದಾರ, ಶಿವಶಂಕ್ರಪ್ಪ ಹೇರುಂಡಿ, ಅಂಬ್ರಣ್ಣ ಸಾಹು ಹೇರುಂಡಿ, ಅಮಜಾದ್ ಇದ್ದರು. ರಾಜಗೋಪಾಲ ವಿಭೂತಿ ಸ್ವಾಗತಿಸಿ, ತಿಪ್ಪಣ್ಣ ಕ್ಯಾತನಾಳ ವಂದಿಸಿ, ದೇವು ಹೆಬ್ಬಾಳ ನಿರೂಪಿಸಿದರು.
--
ತೊಗರಿ ಖರೀದಿ ಕೇಂದ್ರ ಪ್ರಾರಂಭ
ಗುರುಮಠಕಲ್: ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ತೊಗರಿ ಬೆಲೆ ಕುಸಿತವಾಗಿದ್ದರಿಂದ ಸರ್ಕಾರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಮುಂದಾಗಿ ಸುಮಾರು 10 ದಿನಗಳ ನಂತರ ಎಲ್ಲೆಡೆ ಖರೀದಿ ಪ್ರಕ್ರಿಯೆ ನಡೆದು ಮುಗಿಯುವ ಹಂತಕ್ಕೆ ಬಂದಿದೆ. ಆದರೆ ಖರೀದಿ ಪ್ರಕ್ರಿಯೆ ಮಾತ್ರ ನಡೆಯದೇ ಇರುವುದಕ್ಕೆ ರೈತರು ನಡೆಸಿದ ಪ್ರತಿಭಟನೆಗೆ ಬಗ್ಗಿದ ಕೃಷಿ ಇಲಾಖೆ ಅಧಿಕಾರಿಗಳು ಶನಿವಾರ ಸಂಜೆಯಿಂದ ತೊಗರಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿ ರೈತರ ನೋಂದಣಿ ಕಾರ್ಯ ಆರಂಭ ಮಾಡಿದರು. ಇಲ್ಲಿಗೆ ಬರುವ ಪ್ರತಿ ರೈತರಿಂದ 20 ಕ್ವಿಂಟಲ್ ತೊಗರಿ ಖರೀದಿಗೆ ಮಾತ್ರ ಅವಕಾಶ ಇದ್ದು, ಅವಶ್ಯಕ ದಾಖಲಾತಿ ತರುವಂತೆ ರೈತರಿಗೆ ತಿಳಿಸಲಾಗುತ್ತಿದೆ.
ಜಕಣಾಚಾರ್ಯರ ಬಗ್ಗೆ ಸತ್ಯ ತಿರುಚಬೇಡಿ
ಶಹಾಪುರ: ಅಮರಶಿಲ್ಪಿ ಜಕಣಾಚಾರ್ಯರೆಂದೇ ಖ್ಯಾತರಾಗಿ ವಿಶ್ವ ಮಾನ್ಯರೆಂದು ಅನೇಕ ಆಧಾರಗಳನ್ನು ಹೊಂದಿರುವ ಜಕಣಾಚಾರ್ಯರ ಬಗ್ಗೆ ಸತ್ಯ ತಿರುಚುವ ಪ್ರಯತ್ನಕ್ಕೆ ಮುಂದಾಗಬಾರದು ಎಂದು ಯಾದಗಿರಿ ಜಿಲ್ಲಾ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಮೌನೇಶ ಡಿ.ಫತ್ತಾರ ಇಲ್ಲದ ಆಪಾದನೆ ಮಾಡಿದ ಸಂಶೋಧಕರ ಮೇಲೆ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

