ಇಂದು ಶಿಬಿರ
ಗುಲ್ಬರ್ಗ: ಇಲ್ಲಿನ ಅಫಜಲ್ಪುರ ತಾಲೂಕಿನ ಚಿನಮಳ್ಳಿಯಲ್ಲಿರುವ ಮಹಾಂತೇಶ್ವರ ಪದವಿ ಪೂರ್ವ ವಿದ್ಯಾಲಯದ ವಾರ್ಷಿಕ ಎನ್ನೆಸ್ಸೆಸ್ ಶಿಬಿರ ಜ.6ರ ಸೋಮವಾರ ಗೊಬ್ಬೂರವಾಡಿ ತಾಂಡಾದಲ್ಲಿ ಆರಂಭವಾಗಲಿದೆ. ಮಹಾಂತಪುರದ ಸಿದ್ದರಾಮ ಶಿವಾಚಾರ್ಯರು ಸಾನ್ನಿಧ್ಯ ಇರಲಿದ್ದು ಸಂತ ತಪಸ್ವಿ ಬಳಿರಾಮ ಮಹಾರಾಜರು ನೇತೃತ್ವ ವಹಿಸಲಿದ್ದಾರೆ. ಶಾಸಕ ಮಾಲೀಕಯ್ಯ ಗುತ್ತೇದಾರ್ ಸಮಾರಂಭ ಉದ್ಘಾಟಿಸುವರು. ಶರಣಯ್ಯ ಹಿರೇಮಠ್ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಜಿಪಂ ಸದಸ್ಯೆ ಅನ್ನಪೂರ್ಣ ಪೋಲೀಸ್ ಪಾಟೀಲ್, ಎನ್ನೆಸ್ಸೆಸ್ ಅಧಿಕಾರಿ ವೀರಣ್ಣ ಪಟ್ಟಣ, ಪ್ರಾಚಾರ್ಯರಾದ ದಯಾನಂದ ಬಂದರವಾಡ ಮುಂತಾದವರು ಭಾಗವಹಿಸಲಿದ್ದಾರೆ. ಶಿಬಿರ ಜ. 12 ರವರೆಗೂ ನಡೆಯಲಿದ್ದು ಈ ಅವಧಿಯಲ್ಲಿ ವಿವಿಧ ಸೇವಾಕಾರ್ಯಗಳನ್ನು ವಿದ್ಯಾರ್ಥಿಗಳು ಕೈಗೊಳ್ಳಲಿದ್ದಾರೆ.
ಘಟಕ ವಿಸರ್ಜನೆ
ಗುಲ್ಬರ್ಗ: ಬಹುಜನ ಹೋರಾಟ ಸಮಿತಿ ಜಿಲ್ಲಾ ಘಟಕದ ಸಭೆಯಲ್ಲಿ ಸಂಘಟನೆಯ ಸಂಸ್ಥಾಪಕ ಲಕ್ಷ್ಮಣ ಎಸ್. ಕೋರಿ ಮತ್ತು ಸಂಘಟನೆಯ ರಾಜ್ಯಾಧ್ಯಕ್ಷ ಶಿವಾನಂದ ಸಾಹುಕಾರ ಉಪ್ಪಿನವರ ಆದೇಶದ ಮೇರೆಗೆ ಬಹುಜನ ಹೋರಾಟ ಸಮಿತಿ ಜಿಲ್ಲಾ ಘಟಕವನ್ನು ತಾತ್ಕಾಲಿಕವಾಗಿ ವಿಸರ್ಜನೆಗೊಳಿಸಲಾಗಿದೆ. ಒಂದು ವಾರದೊಳಗೆ ಮತ್ತೆ ಬಹುಜನ ಹೋರಾಟ ಸಮಿತಿ ಜಿಲ್ಲಾ ಘಟಕ ಸಭೆ ಕರೆದು ಅಂದಿನ ಸಭೆಯಲ್ಲಿ ನೂತನ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗುವುದು ಎಂದು ಸಂಘಟನೆಯ ಸಂಸ್ಥಾಪಕ ಲಕ್ಷ್ಮಣ ಎಸ್. ಕೋರಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಿ
ಗುಲ್ಬರ್ಗ: ಸರ್ಕಾರದ ಆದೇಶದಂತೆ ಗುಲ್ಬರ್ಗ ಪ್ರದೇಶದಲ್ಲಿ ಪಡಿತರಕ್ಕೆ ಅರ್ಜಿ ಸ್ವೀಕರಿಸಲು ನೇಮಕವಾಗಿರುವ ಖಾಸಗಿ ಪ್ರಾಂಚೈಸಿ ಸೆಂಟರ್ಗಳನ್ನು ಈಗಾಗಲೇ ಮುಚ್ಚಲಾಗಿದೆ. ಈ ಪ್ರಯುಕ್ತ ಇನ್ನುಮುಂದೆ ಗುಲ್ಬರ್ಗ ನಗರದ ಸಾರ್ವಜನಿಕರು ಪಡಿತರಕ್ಕೆ ಅರ್ಜಿ ಸಲ್ಲಿಸಲು ಈ ಕೆಳಕಂಡ ಗುಲ್ಬರ್ಗ ಒನ್ ಕೇಂದ್ರಗಳಿಗೆ ಸಂಪರ್ಕಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಕೋರಿದ್ದಾರೆ.
ವಿವರ ಇಂತಿದೆ: 1) ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಕೋಣೆ ಸಂ.7 ನೆಲಮಹಡಿ ಗುಲ್ಬರ್ಗ ದೂ. 08472- 279333. 2) ಬಡೇಪೂರ ಬಡಾವಣೆ ಕೆ.ಹೆಚ್.ಬಿ. ಕಾಂಪ್ಲೆಕ್ಸ್, ಖರ್ಗೆ ಪೆಟ್ರೋಲ್ ಬಂಕ್ ಹತ್ತಿರ ಹೊರ ವರ್ತುಲ ರಸೆ ಗುಲ್ಬರ್ಗ 08472- 273 960, 3) ಮಹಾನಗರಪಾಲಿಕೆ ವಲಯ ಕಚೇರಿ ಹತ್ತಿರ, ಸೂಪರ್ ಮಾರ್ಕೆಟ್ ಎಂಪಿಹೆಚ್ಎಸ್ ಶಾಲೆ ಹಿಂಭಾಗ ಮಿಲನ್ ಚೌಕ್ ಗುಲ್ಬರ್ಗ 08472- 223433.
ಸಾಮಾನ್ಯ ಸಭೆ
ಗುಲ್ಬರ್ಗ ತಾಪಂ ಅಧ್ಯಕ್ಷ ಪ್ರಭು ಲಕ್ಷ್ಮಣ ರಾವೂರ್ ಅಧ್ಯಕ್ಷತೆಯಲ್ಲಿ ತಾಪಂ ಸಾಮಾನ್ಯ ಸಭೆ ಜ.10 ರಂದು ಬೆಳಗ್ಗೆ 11ಕ್ಕೆ ತಾಪಂ ಸಭಾಂಗಣದಲ್ಲಿ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

