ಉಳ್ಳೆಸುಗೂರ ಶಾಲಾ ಮುಖ್ಯಗುರು ಅಮಾನತು
ಶಹಾಪುರ: ತಾಲೂಕಿನ ಉಳ್ಳೆಸುಗೂರ ಗ್ರಾಮಕ್ಕೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಾಯಪ್ಪರೆಡ್ಡಿ ಸೋಮವಾರ ಮೃತ ಹೊಂದಿದ ಬಾಲಕ ಕುಟುಂಬ ವರ್ಗಕ್ಕೆ ಭೇಟಿ ನೀಡಿ ತಂದೆ- ತಾಯಿಗೆ ಸಾಂತ್ವನ ಹೇಳಿದರು.
ಗ್ರಾಮದ ಶಾಲೆಯ ಮಕ್ಕಳನ್ನು ಪ್ರವಾಸಕ್ಕೆ ಹೊರಟಾಗ ಅಪಘಾತದಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದನು. ತಾಲೂಕು ಶಿಕ್ಷಣಾಧಿಕಾರಿಗಳ ಅನುಮತಿ ಪಡೆಯದೆ, ಮುಖ್ಯಗುರು ಕರ್ತವ್ಯಲೋಪ ಎಸಗಿ, ಖಾಸಾಗಿ ವಾಹನಗಳಲ್ಲಿ ಪ್ರವಾಸಕ್ಕೆ ತೆರಳಿದ್ದ ಕಾರಣ ಯಾದಗಿರಿ ಡಿಡಿಪಿಐ ಆದೇಶ ಅನ್ವಯ ಮುಖ್ಯಗುರು ಭೀಮಪ್ಪರನ್ನು ಅಮಾನುತುಗೊಳಿಸಲಾಗಿದೆ. ಇದರ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ತಾಲೂಕು ಶಿಕ್ಷಣಾಧಿಕಾರಿ ಪತ್ರಿಕೆಗೆ ತಿಳಿಸಿದರು. ಉಳ್ಳೆಸುಗೂರ ಗ್ರಾಮ ಶಾಲೆಯ ಮುಖ್ಯಗುರು ಶೈಕ್ಷಣಿಕ ಪ್ರವಾಸಕ್ಕೆಂದು ವಿದ್ಯಾರ್ಥಿಗಳನ್ನು ಎರಡು ಕ್ರೂಷರ್ ವಾಹನಗಳಲ್ಲಿ ಶುಕ್ರವಾರ ನಸುಕಿನ ಜಾವ ತೆರಳಿದ್ದರು. ಆದರೆ ಶನಿವಾರ ರಾತ್ರಿ ಜೇವರ್ಗಿ ಬಳಿ ನಿಂತಿದ್ದ ಕಬ್ಬಿನ ಲಾರಿಗೆ ಶಾಲಾ ಪ್ರವಾಸಕ್ಕೆ ತೆರಳಿದ್ದ ಕ್ರೂಷರ್ ವಾಹನ ಡಿಕ್ಕಿ ಹೊಡಿದು ಸ್ಥಳದಲ್ಲಿಯೇ ಬಾಲಕ (ವಾಸೀಮ್ ಮನಗಾರ 13) ಮೃತಪಟ್ಟಿದ್ದನು.
ಜವಾಬ್ದಾರಿ ಇಲ್ಲದ ಮುಖ್ಯಗುರುಗಳು, ಶಿಕ್ಷಕರು: ಶಾಲಾ ಪ್ರವಾಸಕ್ಕೆ ಸರ್ಕಾರಿ ಬಸ್ಸುಗಳಲ್ಲಿ ಮಾತ್ರ ಹೋಗಬೇಕೆಂಬ ನಿಯಮವಿದ್ದರು ಕೆಲವು ಶಾಲಾ ಮುಖ್ಯಗುರುಗಳು, ಶಿಕ್ಷಕರು ತಮ್ಮದೇ ಆದ ಯೋಜನೆ ರೂಪಿಸಿ ಪ್ರವಾಸಕ್ಕೆ ಹೊರಡುವುದು ಪರಿಪಾಠವಾಗಿದ್ದು, ಇಂಥಹ ಅನಾಹುತಗಳಿಗೆ ಕಾರಣವಾಗುತ್ತಿದೆ. ಇನ್ನಾದರೂ ಇಂಥ ಘಟನೆಗಳು ಮರುಕಳಿಸದಂತೆ ಶಾಲೆಯವರು ಎಚ್ಚರಿಕೆ ವಹಿಸಬೇಕಾದದ್ದು ಮುಖ್ಯ.
--
ತೊಗರಿ ಖರೀದಿ ಹೆಸರಿನಲ್ಲಿ ರೈತರಿಗೆ ವಂಚನೆ: ಆರೋಪ
ಗುರುಮಠಕಲ್: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಮಾಡುವ ಹೆಸರಿನಲ್ಲಿ ರೈತರಿಗೆ ಪಂಗನಾಮ ಹಾಕುತ್ತಿರುವ ಘಟನೆಗಳು ಇದೀಗಾ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಉಪ ಸಮಿತಿಯಲ್ಲಿ ನಡೆದು ರೈತರು ಖರೀದಿ ದಾರರಿಂದ ಮೋಸ ಮಾಡುತಲ್ಲಿದ್ದಾರೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯರಾದ ವೆಂಕಟ ರಾಮುಲು ಗೌಡ ಪುಟಪಾಕ ಆರೋಪಸಿದ್ದಾರೆ. ರೈತರ ಪ್ರತಿಭಟನೆಗೆ ಸರ್ಕಾರ ಸ್ಪಂದಿಸಿ ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ ಖರೀದಿದಾರರು ತೂಕದಲ್ಲಿ ವ್ಯತ್ಯಾಸ ಮಾಡಿ ಪ್ರತಿ ಕ್ವಿಂಟಲ್ ತೊಗರಿಯ ಹಿಂದೆ ಸುಮಾರು 300 ಗ್ರಾಂ ಗಿಂತ ಹೆಚ್ಚಿಗೆ ತೂಕಮಾಡಿ ರೈತರಿಂದ ತೊಗರಿ ಪಡೆಯುತ್ತಿದ್ದಾರೆಂದು ಅವರು ಆರೋಪಿಸಿದರು. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ರೈತರಿಗೆ ಆಗುತ್ತಲ್ಲಿರುವ ಮೋಸಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

