ರಾಷ್ಟ್ರಕವಿ ಜಿಎಸ್ಎಸ್ ವಿಚಾರಗಳಿಗೆ ಎಂದೂ ಸಾವಿಲ್ಲ
ಶಹಾಪುರ: ರಾಷ್ಟ್ರಕವಿ ಜಿಎಸ್ಎಸ್ ಹಚ್ಚಿದ ವಿಚಾರದ ಹಣತೆ ಮನುಷ್ಯ ಜೀವಿಗಳಿರುವರೆಗೂ ಉರಿಯುತ್ತದೆ. ದೇಹಕ್ಕೆ ಸಾವು ಇರಬಹುದು. ವಿಚಾರಗಳಿಗೆ ಎಂದೂ ಸಾವಿಲ್ಲವೆಂದು ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ನುಡಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಬಸವ ಮಾರ್ಗ ಪ್ರತಿಷ್ಠಾನ ಸಂಯುಕ್ತವಾಗಿ ಬಸವ ಮಾರ್ಗ ಕಚೇರಿಯ ಬಸವ ಬಯಲಿನಲ್ಲಿ ಏರ್ಪಡಿಸಿದ್ದ ಜಿಎಸ್ಎಸ್ ಗೀತ ನಮನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗೀತ ನಮನದಲ್ಲಿ ಮಹೇಶ ಪತ್ತಾರ ಕಾಣದ ಕಡಲಿಗೆ ಹೋದ ಜಿಎಸ್ಎಸ್ರನ್ನು ಹುಡುಕಲು ಯತ್ನಿಸಿದರು. ಗೌತಮ ಕುಲ್ಕರ್ಣಿ ಎದೆತುಂಬಿ ಹಾಡಿ ಎಲ್ಲರನ್ನೂ ಭಾವೋದ್ವೇಗಗೊಳಿಸಿದರು. ಬೂದಯ್ಯ ಹಿರೇಮಠ ಇಲ್ಲದ ದೇವರನ್ನು ಎಲ್ಲೆಲ್ಲೂ ಹುಡಿಕಿ, ಇಲ್ಲೇ ಇರುವ ಸ್ನೇಹ ಪ್ರೀತಿಗಳ ಗುರುತಿಸುವ ಕುರಿತು ಕಣ್ಣು ತೆರೆಸಿದರು. ರಮೇಶ್ ಯಾಳಗಿ, ಗಂಗಾಧರ ಹೊಟ್ಟಿ , ಸ್ವಾತಿ ಭಕ್ತಪ್ರಹ್ಲಾದ್, ರಮೇಶ್ ಬಾಬು ಕೆಂಭಾವಿ ಭಾವಗೀತೆಯನ್ನು ಹಾಡಿ ರಂಜಿಸಿದರು. ಬಸವರಾಜ ವಿಶ್ವಕರ್ಮ ತಬಲಾ ಹಾಗೂ ಹಾರ್ಮೋನಿಯಂ ನುಡಿಸಿದರು.
ಇದೇ ಸಂದರ್ಭದಲ್ಲಿ ಬಸವೇಶ್ವರ ಪತ್ತಿನ ಸಹಕಾರ ಸಂಘ ಪ್ರಕಟಿಸಿರುವ 2014ರ ಕ್ಯಾಲೆಂಡರ್ನ್ನು ಶಿವಣ್ಣ ಇಜೇರಿ, ಚಂದ್ರಕಾಂತ ಕರದಳ್ಳಿ, ದೇವು ತೋಟಿಗೇರ, ಕಲ್ಯಾಣಶೆಟ್ಟಿ ಬಿಡುಗಡೆಗೊಳಿಸಿದರು. ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಸವರಾಜ ಸಿನ್ನೂರ ಸ್ವಾಗತಿಸಿದರು. ಮಡಿವಾಳಪ್ಪ ವಂದಿಸಿದರು. ಪ್ರಾಣೇಶ ಕುಲ್ಕರ್ಣಿ ನಿರೂಪಿಸಿದರು. ಸಭೆಯಲ್ಲಿ ವಿಶ್ವನಾಥರೆಡ್ಡಿ ಅಬ್ಬೆತುಮಕೂರ, ರಾಘವೇಂದ್ರ ಹಾರಣಗೇರಾ, ಹಣಮಂತ್ರಾಯ ಬಿರಾದಾರ, ಡಿ.ಜಿ. ಬಳ್ಳೂರಗಿ, ಪ್ರಕಾಶ ಶಿರವಾಳ್ಕರ್, ಮೇಘರಾಜ ಜಾಧವ, ಅನಿಲ ಮಾನು ಭೀಮು ಶಖಾಪುರ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

