ಗುಲ್ಬರ್ಗಾ

ಶುದ್ಧ ಹಸ್ತರಾಗಿ ಜೀವನ ನಡೆಸಿ: ಉಜ್ಜಯನಿ ಶ್ರೀ

Published On :

ಹುಣಸಗಿ: ಮನುಷ್ಯನಿಗೆ ದೇವರು ಅಗಾಧವಾದ ಸ್ಮರಣ ಶಕ್ತಿ ಮತ್ತು ವಿವೇಚನಾ ಶಕ್ತಿ ನೀಡಿದ್ದಾನೆ. ಅದರ ಸಹಾಯದೊಂದಿಗೆ ಧರ್ಮ ಕಾರ್ಯದಲ್ಲಿ ತೊಡಗಿ ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಬೇಕೆಂದು ಉಜ್ಜಯನಿಯ ಸಿದ್ದಲಿಂಗ ಶಿವಾಚಾರ್ಯರು ತಿಳಿಸಿದರು.
ಹುಣಸಗಿ ಸಮೀಪದ ಅರಕೇರಾ ಜೆ ಗ್ರಾಮದಲ್ಲಿ ಸದ್ಗುರು ಗುರಯ್ಯ ತಾತನವರ 25ನೇ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಧರ್ಮ ಸಭೆಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ದುರ್ಗುಣಗಳನ್ನ ತೆಗೆಯಿರಿ: ಮುಂದಿನ ಉಪಯೋಗಕ್ಕೆಂದು ಗಳಿಕೆ ಮಾಡುವುದು ಸ್ವಾಭಾವಿಕ. ಆದರೆ ಆ ಗಳಿಕೆಯಲ್ಲಿ ನಾವು ಧರ್ಮಕಾರ್ಯಗಳಿಗೆ ಎಷ್ಟು ಖರ್ಚು ಮಾಡುತ್ತೇವೆ ಎಂಬುದು ಮುಖ್ಯ. ನಮ್ಮಲ್ಲಿನ ದುರ್ಗುಣಗಳನ್ನು ತೆಗೆದು ಶುದ್ಧ ಹಸ್ತರಾಗಿ ಬದುಕಬೇಕು. ಅದುವೇ ನಿಜವಾದ ಜೀವನ ಎಂದರು.
ಗುರಯ್ಯ ತಾತನವರ ಭಕ್ತಿಗಾಗಿ 25ನೇ ವರ್ಷದ ಜಾತ್ರೆಯ ಅಂಗವಾಗಿ ರಥ ಸಮರ್ಪಿಸಿ ಧರ್ಮ ಸಭೆ ನಡೆಸಿರುವುದು ಇಲ್ಲಿನ ಜನರ ಶುದ್ಧಭಕ್ತಿಗೆ ಹಿಡಿದ ಕನ್ನಡಿ ಎಂದು ಪ್ರಶಂಶಿಸಿದರು.
ಧಾರ್ಮಿಕ ಜಾಗೃತಿ ಕಾರ್ಯ: ಸುರಪುರ ಶಾಸಕ ರಾಜಾ ವೆಂಕಟಪ್ಪನಾಯಕ ಸಭೆಯನ್ನು ಉದ್ಘಾಟಸಿ ಮಾತನಾಡಿ, ಗುರಯ್ಯ ತಾತನವರ ಸಮಾಜಸೇವೆ, ದೈವಿ ಶಕ್ತಿಯಿಂದ ಇಂದು ಅಪಾರ ಭಕ್ತರು ಜಾತ್ರೆ ನಡೆಸಿ ಆ ಮೂಲಕ ಧಾರ್ಮಿಕ ಜಾಗೃತಿ ಕಾರ್ಯನಡೆದಿರುವುದು ಪ್ರಶಂಸನಿಯ. ಮುಂದಿನ ದಿನಗಳಲ್ಲಿ ಅರಕೇರಾ ಜೆ ಗ್ರಾಮದಲ್ಲಿ ಕುಡಿವ ನೀರು, ಶಾಲೆ ಕೊಠಡಿಗಳನ್ನು ನೀಡುವುದಾಗಿ ತಿಳಿಸಿದರು. ಧರ್ಮ ಸಭೆಯಲ್ಲಿ ಜಯಶಾಂತಲಿಂಗೇಶ್ವರ ಸ್ವಾಮಿಗಳು ಜಾಲಹಳ್ಳಿ, ವಿಶ್ವರಾಧ್ಯ ಶಿವಾಚಾರ್ಯರು ಮಾಗಣಗೇರಿ ಮಾತನಾಡಿದರು. ಚನ್ನಬಸವ ಶ್ರೀ ಕೆಂಭಾವಿ, ರಾಜೇಂದ್ರ ಒಡೆಯರು ನಾವದಗಿ, ಮಲ್ಲಿಕಾರ್ಜುನ ಶ್ರೀ ಮುದನೂರ ಸೇರಿದಂತೆ ಇತರ ಶ್ರೀಗಳು, ರಾಜಕೀಯ ಮುಖಂಡರು  ಇದ್ದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ಗುರುನಾಥ ನಾವದಗಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.