ಗುಲ್ಬರ್ಗಾ

ಬೆಳ್ಳಿ ಹಬ್ಬವು ಸ್ವರ್ಣ ಹಬ್ಬವಾಗಿಲಿ: ಸೇಡಂ

Published On :

ಗುಲ್ಬರ್ಗ: ಭಾರತೀಯ ವಿದ್ಯಾಕೇಂದ್ರದ ಬೆಳ್ಳಿ ಹಬ್ಬವು ಸ್ವರ್ಣ ಹಬ್ಬವಾಗಿ ಮಾರ್ಪಡಾಗಲಿ ಹಾಗೂ ಈ ಶಾಲೆ ಮಕ್ಕಳು ದೇಶಕ್ಕೆ ಮಹತ್ತರವಾದ ಕೊಡುಗೆ ನೀಡಲಿ ಎಂದು ರಾಜ್ಯ ಸಭಾ ಸದಸ್ಯ ಬಸರವಾಜ ಪಾಟೀಲ್ ಸೇಡಂ ಹೇಳಿದರು. ಭಾರತೀಯ ವಿದ್ಯಾಕೇಂದ್ರ ರಜತ ಮಹೋತ್ಸವದ ಅಂಗವಾಗಿ ಪ್ರದರ್ಶಿನಿ ಹಾಗೂ ಮಾರಾಟ ಮಳಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ವಿಜ್ಞಾನ ಕೇಂದ್ರದ ಸಹಾಯಕ ಅಧಿಕಾರಿ ವೆಂಕಟೇಶ್ವರಲು ಆಗಮಿಸಿದ್ದರು. ಭಾರತೀಯ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯ ಲಿಂಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ದೇವರಾಜ, ಮಾಂಡ್ರೆ ಇದ್ದರು. ಸೋಮಶೇಖರಯ್ಯ ಸ್ವಾಗತಿಸಿ, ಶಿವಕುಮಾರ ವಂದಿಸಿದರು. ಸೋಮಶೇಖರ ಕಡಬಗಾಂವ್ ನಿರೂಪಿಸಿದರು.
ಬಾಕಿ ವೇತನ ಪಾವತಿಗೆ ಆಗ್ರಹ
ಶಹಾಬಾದ್: ಇಲ್ಲಿನ ಜೆಪಿ ಸಿಮೆಂಟ್ ಕಾರ್ಖಾನೆಯ ಕಾರ್ಮಿಕರ ಬಾಕಿ ವೇತನ ನೀಡಲು ಆಗ್ರಹಿಸಿ ಇಂಡಸ್ಟ್ರೀಯಲ್ ಎಂಪ್ಲಾಯಿಸ್ ಟ್ರೋಡ್ ಯೂನಿಯನ್ ಚಿತ್ತಾಪುರ, ವಾಡಿ ಕ್ರಾಸ್ ಬಳಿ ರಸ್ತೆತಡೆ ನಡೆಸಿ ಪ್ರತಿಭಟಿಸಿತು. ಮುಖಂಡ ಕೆ.ಎಂ. ಸೂರ್ಯನಾರಾಯಣರಾವ್ ಕಾರ್ಮಿಕರ ಬಾಕಿ ಹಣ 30 ಕೋಟಿ ಕಾರ್ಖಾನೆಯ ಆಡಳಿತ ಮಂಡಳಿ ನೀಡಬೇಕು. ಕಾರ್ಖಾನೆ ಹಿಂದೆ ಸ್ಥಗಿತಗೊಂಡ ಸಂದರ್ಭದಲ್ಲಿ ಡಿಆರ್‌ಟಿ ಕೋರ್ಟಿನಡಿ ಇರುವ ಆದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವ ಆಡಳಿತ ಮಂಡಳಿ ಕಾರ್ಮಿಕರಿಗೆ ಮೋಸ ಮಾಡುತ್ತಿದೆ. ಈ ಕುರಿತು ಒಂದು ವಾರದೊಳಗಾಗಿ ನಿರ್ಣಯ ತೆಗೆದುಕೊಳ್ಳದಿದ್ದರೆ ಹೋರಾಟ ಉಗ್ರ ರೂಪ ತಾಳಬೇಕಾಗುತ್ತದೆ. ಇದಕ್ಕೆ ಕಾರ್ಖಾನೆ ಹೊಣೆಯಾಗುತ್ತದೆ ಎಂದರು. ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಶರಣಬಸ್ಸಪ್ಪ ಸೂಗೂರ, ನಗರ ಘಟಕದ ಅಧ್ಯಕ್ಷ ಶೇಕ್‌ಬಾಬು ಉಸ್ಮಾನ್ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.
ಲಾರಿ ಮಾಲೀಕರ ಸಂಘದಿಂದ ಮುಷ್ಕರ
ಗುಲ್ಬರ್ಗ: ಫೆಡರೇಷನ್ ಆಫ್ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ ಅಸೋಷಿಯೇಷನ್‌ಗೆ ಬೆಂಬಲ ವ್ಯಕ್ತಪಡಿಸಲು ಗುಲ್ಬರ್ಗ ಲಾರಿ ಮಾಲೀಕರ ಸಂಘದ ವತಿಯಿಂದ ಜ.11ರ ಮಧ್ಯರಾತ್ರಿಯಿಂದ ಅನಿರ್ದಿಷ್ಟ ಅವಧಿಯವರೆಗೆ ಲಾರಿ ಮುಷ್ಕರ ಕೈಗೊಂಡು ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಡಿಸಿಗೆ ಮನವಿ ಪತ್ರ ಸಲ್ಲಿಸಿದರು. ನೂತನ ಮರಳು ನೀತಿ ರದ್ದುಪಡಿಸಬೇಕು, ಚಾಲಕರಿಗೆ 8ನೇ ತರಗತಿ ಕಡ್ಡಾಯಗೊಳಿಸಿರುವುದನ್ನು ರದ್ದುಪಡಿಸಬೇಕು. ಪ್ರವಾಸಿ ವಾನಹಗಳಿಗೆ ವಾರ್ಷಿಕ ತೆರಿಗೆ ಹಿಂತೆಗೆಯಬೇಕು. ಟ್ರಾನ್ಸಿಟ್ ಪಾಸ್ ರದ್ದುಗೊಳಿಸಬೇಕು. ಇ-ಸುಗಮ ಅವಧಿ ಕನಿಷ್ಠ 30 ದಿನಕ್ಕೆ ವಿಸ್ತರಿಸಲು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಮೂಲ ಅವಶ್ಯಕತೆಗಳಾದ ಹಾಲು, ತರಕಾರಿ, ಔಷಧ ಲಾರಿಗಳನ್ನು ಹೊರತುಪಡಿಸಿ ಎಲ್ಲಾ ವಾಣಿಜ್ಯ ವಾಹನಗಳು ಸ್ಪಯಂ ಪ್ರೇರಿತರಾಗಿ ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.